ಪ್ರಮುಖ ಸುದ್ದಿವಿದೇಶ

ಅಮೆರಿಕದಲ್ಲಿ ಮುಂಬೈ ದಾಳಿಯ ಸಂಚುಕೋರ ತಹವ್ವೂರ್ ರಾಣಾ ಬಂಧನ

ಲಾಸ್ ಎಂಜಲೀಸ್,ಜೂ.20- ಮುಂಬೈ ಉಗ್ರ ದಾಳಿಯ ಸಂಚುಕೋರ ಪಾಕಿಸ್ತಾನ ಮೂಲದ ಕೆನಡಾದ ಉದ್ಯಮಿ ತಹವ್ವೂರ್ ರಾಣಾನನ್ನು ಲಾಸ್ ಎಂಜಲೀಸ್ ನಲ್ಲಿ ಬಂಧಿಸಲಾಗಿದೆ.

ತಹವ್ವೂರ್ ರಾಣಾನನ್ನು ಭಾರತಕ್ಕೆ ಹಸ್ತಾಂತರಿಸಬೇಕೆಂಬ ಮನವಿ ಮೇರೆಗೆ ಮತ್ತೆ ಬಂಧಿಸಲಾಗಿದೆ ಎಂದು ಅಮೆರಿಕಾದ ಪ್ರಾಸಿಕ್ಯೂಟರ್ ತಿಳಿಸಿದ್ದಾರೆ.

2008 ರಲ್ಲಿ ಮುಂಬೈನಲ್ಲಿ ನಡೆದ ಉಗ್ರ ದಾಳಿಯ ಸಂಚುಕೋರನಾಗಿದ್ದ ತಹವ್ವೂರ್ ರಾಣಾ, ತನಗೆ ಕೋವಿಡ್-19 ಸೋಂಕು ತಗುಲಿದ್ದು, ಕರುಣೆ ತೋರಿ ಬಿಡುಗಡೆ ಮಾಡಬೇಕೆಂದು ಅಮೆರಿಕಾ ನ್ಯಾಯಾಲಯಕ್ಕೆ ಮನವಿ ಮಾಡಿದ ಬಳಿಕ ಆತನನ್ನು ಇತ್ತೀಚಿಗೆ ಜೈಲಿನಿಂದ ಬಿಡುಗಡೆ ಮಾಡಲಾಗಿತ್ತು. ಆದರೆ, ಭಾರತದ ಕೋರಿಕೆ ಮೇರೆಗೆ ಮರು ಬಂಧಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ಜೂ.11 ರಂದು ರಾಣಾ ಆರಂಭಿಕ ನ್ಯಾಯಾಲಯಕ್ಕೆ ಹಾಜರಾಗಿದ್ದರು. ಅಮೆರಿಕಾದ ಜಿಲ್ಲಾ ನ್ಯಾಯಾಧೀಶ ಜಾಕ್ವೆಲಿನ್ ಚೊಲ್ಜಿಯಾನ್ ಜೂ.30ರಂದು ಕ್ಯಾಲಿಪೋರ್ನಿಯಾದ ಜಿಲ್ಲಾ ನ್ಯಾಯಾಲಯದಲ್ಲಿ ರಾಣಾನಾ ಜಾಮೀನು ಅರ್ಜಿ ವಿಚಾರಣೆಯನ್ನು ನಿಗದಿಪಡಿಸಿದ್ದಾರೆ.

ಸಂಬಂಧ ಜೂ.22 ರೊಳಗೆ ಅರ್ಜಿ ಸಲ್ಲಿಸುವಂತೆ ರಾಣಾ ಪರ ವಕೀಲರಿಗೆ ತಿಳಿಸಲಾಗಿದೆ. ಜೂ.26ರೊಳಗೆ ಫೆಡರಲ್ ಸರ್ಕಾರದ ಪ್ರತಿಕ್ರಿಯೆ ಬರಲಿದೆ. (ಎಂ.ಎನ್)

Leave a Reply

comments

Related Articles

error: