ಮೈಸೂರು

ಐಕ್ಯೂ ಅಕಾಡೆಮಿ ವತಿಯಿಂದ ಉಚಿತ ಗಿಡ ನೆಡುವ ಕಾರ್ಯಕ್ರಮ

ಕೋಟಿ ಪ್ರತಿಷ್ಠಾನ ಐಕ್ಯೂ ಅಕಾಡೆಮಿ ವತಿಯಿಂದ ಉಚಿತವಾಗಿ ಗಿಡ ನೆಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಅಧ್ಯಕ್ಷ ಶ್ರೀಕಾಂತ್ ಭಟ್ ತಿಳಿಸಿದರು.

ಮೈಸೂರಿನ ಪತ್ರಕರ್ತರ ಭವನದಲ್ಲಿ ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕೋಟಿ ವೃಕ್ಷ ಪ್ರತಿಷ್ಠಾನವು ಮೈಸೂರಿನಲ್ಲಿ ಕೋಟಿ ಗಿಡ ನೆಡುವ ಉದ್ದೇಶದೊಂದಿಗೆ ಸ್ಥಾಪನೆಗೊಂಡಿದೆ. ಇದಕ್ಕೆ ಪೂರಕವಾಗಿ ವರ್ಷ ಒಂದು ಲಕ್ಷ ಗಿಡಗಳನ್ನು  ನೆಡುವ ಯೋಜನೆಯನ್ನು ಹಮ್ಮಿಕೊಳ್ಳಲಾಗಿದ್ದು, ಎರಡು ವಿಧಾನಗಳಲ್ಲಿ ಗಿಡ ನೆಡುವ ಯೋಜನೆಗಳನ್ನು ಹಾಕಿಕೊಂಡಿದ್ದೇವೆ ಎಂದರು.

ಆಸಕ್ತ ವೃಕ್ಷ ಪ್ರೇಮಿಗಳಿಗೆ ಉಚಿತವಾಗಿ ಗಿಡಗಳನ್ನು ಹಂಚಲಾಗುವುದು ಹಾಗೇ ಶಾಲೆಗಳಲ್ಲಿ ಪ್ರತಿ ಮಗುವೂ ತನ್ನ ಹುಟ್ಟು ಹಬ್ಬದಂದು ಒಂದು ಗಿಡ ನೆಡುವಂತೆ ಪ್ರೋತ್ಸಾಹಿಸುತ್ತೇವೆ. ಎಲ್ಲರಿಗೂ ಉಚಿತವಾಗಿ ಗಿಡ ನೀಡಲಾಗುವುದು ಆದರೆ ಗಿಡಗಳನ್ನು ಪೋಷಣೆ ಮಾಡುವ ಜವಾಬ್ದಾರಿ ನಿಮ್ಮದೇ ಎಂದರು.

ಸುದ್ದಿಗೋಷ್ಠಿಯಲ್ಲಿ ಭಾಸ್ಕರ್, ಅರುಣ್ ಕುಮಾರ್, ರಾಮಚಂದ್ರ ಭಟ್, ವಿನಾಯಕ್ ಉಪಸ್ಥಿತರಿದ್ದರು. (ಕೆ.ಎಸ್-ಎಸ್.ಎಚ್)

Leave a Reply

comments

Related Articles

error: