ಮೈಸೂರು

ಮೈಸೂರಿನಲ್ಲಿಂದು 22 ಕೊರೋನಾ ವೈರಸ್ ಪ್ರಕರಣ ಪತ್ತೆ : ನೇಹಾ ಟೆಕ್ಸ್ ಟೈಲ್ಸ್ ಗೆ ಭೇಟಿ ನೀಡಿದವರು ಕ್ವಾರೆಂಟೈನ್ ಆಗುವಂತೆ ಡಿಸಿ ಮನವಿ

ಮೈಸೂರು,ಜೂ.20:- ಮೈಸೂರಿನಲ್ಲಿ ಕೊರೋನಾ ವೈರಸ್ ಸೋಂಕು ಪ್ರಕರಣ 22 ಪತ್ತೆಯಾಗಿದೆ.  ಮೈಸೂರು ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕೊರೋನಾ ಸೋಂಕಿತರ ಸಂಖ್ಯೆ ಏರುತ್ತಲೇ ಇದೆ.

ಬೆಂಗಳೂರಿನಿಂದ ಬಂದವರು 15 ಮಂದಿ,  ಅಂತಾರಾಜ್ಯದಿಂದ ಬಂದವರು ತಮಿಳುನಾಡಿನಿಂದ ಬಂದವರಿಬ್ಬರು, ಆಂಧ್ರಪ್ರದೇಶ 1, ದೆಹಲಿ 1, ಮಹಾರಾಷ್ಟ್ರ 2 ಮತ್ತು ಯಾವುದೇ ಟ್ಒಂರಾವೆಲ್ದು ಹಿಸ್ಟರಿ ಹೊಂದಿಲ್ಲದ ಓರ್ವ ವ್ಯಕ್ತಿಗೆ (ಐಎಲ್ ಐ) ಹುಲ್ಲಹಳ್ಳಿ ನಂಜನಗೂಡು ಇಲ್ಲಿ ಪತ್ತೆಯಾಗಿದೆ.

ಮೈಸೂರು ಜಿಲ್ಲೆ ನಂಜನಗೂಡು ತಾಲೂಕಿನ ಹುಲ್ಲಹಳ್ಳಿ ಟೌನ್ ಜೆಎಸ್ ಎಸ್ ಕಾಲೇಜ್ ರಸ್ತೆಯಲ್ಲಿ ಇರುವ ನೇಹಾ ಟೆಕ್ಸಟೈಲ್ಸ್ ಮಾಲೀಕರಿಗೆ 19/06/2020ರಂದು ಕೋವಿಡ್-19 ಸೋಂಕು ತಗುಲಿರುವುದು ದೃಢಪಟ್ಟಿದೆ.

ಕಳೆದ 15ದಿನಗಳಲ್ಲಿ ನೇಹಾ ಟೆಕ್ಸಟೈಲ್ಸ್ ಅಂಗಡಿಗೆ ಭೇಟಿ ನೀಡಿರುವ ಗ್ರಾಹಕರು ಹಾಗೂ ಸೋಂಕಿತ ವ್ಯಕ್ತಿಯೊಂದಿಗೆ ಸಂಪರ್ಕ ಹೊಂದಿರುವ ಸಾರ್ವಜನಿಕರನ್ನು ಸೋಂಕಿತ ವ್ಯಕ್ತಿಯ ಪ್ರಾಥಮಿಕ/ದ್ವಿತೀಯ ಸಂಪರ್ಕಿತರೆಂದು ಪರಿಗಣಿಸಿ ಕ್ವಾರೆಂಟೈನ್ ಮಾಡಬೇಕಾಗಿರುತ್ತದೆ. ಆದ್ದರಿಂದ ದಯಮಾಡಿ ಸಾರ್ವಜನಿಕರು ತಮ್ಮ ಆರೋಗ್ಯದ ಹಿತದೃಷ್ಟಿಯಿಂದ ತಮ್ಮ ಹೆಸರನ್ನು ತುರ್ತಾಗಿ ಡಿ.ಸಿ.ಕಂಟ್ರೋಲ್ ರೂಮ್ ದೂ.ಸಂಖ್ಯೆ 0821-2423800 ಅಥವಾ 1077 ಇಲ್ಲಿಗೆ ದೂರವಾಣಿ ಮೂಲಕ ನೋಂದಾಯಿಸಿಕೊಳ್ಳುವಂತೆ ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ತಿಳಿಸಿದ್ದಾರೆ.

ಒಟ್ಟು ಸೋಂಕಿತರ ಸಂಖ್ಯೆ 151ಕ್ಕೇರಿದ್ದು, 112 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: