ಮೈಸೂರು

ಗ್ರಹಣಕ್ಕೆ ಸೆಡ್ಡು ಹೊಡೆದು ಕೋವಿಡ್ 19 ಹಿನ್ನೆಲೆ ಬಡಕೂಲಿಕಾರ್ಮಿಕರಿಗೆ ಆಹಾರ ಪದಾರ್ಥಗಳ ಕಿಟ್ ವಿತರಣೆ

ಮೈಸೂರು,ಜೂ.21:- ಗ್ರಹಣಕ್ಕೆ ಸೆಡ್ಡು ಹೊಡೆದು  ಕೋವಿಡ್ 19 ಹಿನ್ನೆಲೆ ಕೃಷ್ಣರಾಜ ವಿಧಾನಸಭಾ ಕ್ಷೇತ್ರ ವ್ಯಾಪ್ತೀಯ ವಾರ್ಡ್ ನಂ 54 ರ ಕನಕಗಿರಿ,ಗುಂಡುರಾವ್ ನಗರ,ಮುನೇಶ್ವರ ನಗರ ಭಾಗದ ಬಡ ಕೂಲಿಕಾರ್ಮಿಕರು,ಮನೆಗೆಲಸದವರಿಗೆ ಮಾಜಿ ಶಾಸಕರಾದ ಎಂ ಕೆ ಸೋಮಶೇಖರ್ ಅವರ ನೇತೃತ್ವದಲ್ಲಿ ಪಾಲಿಕೆ ಸದಸ್ಯೆ ಪುಟ್ಟನಿಂಗಮ್ಮ,ಕಾಂಗ್ರೆಸ್ ಮುಖಂಡ ಶೇಖರ್ ಅವರ ಸಹಕಾರದೊಂದಿಗೆ 500 ಕುಟುಂಬಗಳಿಗೆ ಇಂದು ಆಹಾರ ಪದಾರ್ಥಗಳ ಕಿಟ್ ವಿತರಿಸಲಾಯಿತು.

ಈ ಸಂದರ್ಭದಲ್ಲಿ ವಾರ್ಡ್ ಅಧ್ಯಕ್ಷರಾದ ಕೇಬಲ್ ಮಹದೇವು,ಗುಣಶೇಖರ್ ,ಕುಮಾರ್ (ಕುಮ್ಮಿ),ರೇಣು,ಸಂತೋಷ್ ಮತ್ತಿತರರು ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: