ಮೈಸೂರು

ಶೋಷಣೆ ಮತ್ತು ಸಬಲೀಕರಣ ಕಡೆಗೆ ಕಿರುನಾಟಕ ಪ್ರದರ್ಶನ

ಡಾ.ಬಿ.ಆರ್.ಅಂಬೇಡ್ಕರ್ ಸಂಶೋಧನಾ ಹಾಗೂ ವಿಸ್ತರಣ ಕೇಂದ್ರದ ವತಿಯಿಂದ ಶನಿವಾರ ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಅವರ 125 ನೇ ವರ್ಷದ ವರ್ಷಾಚರಣೆ ಅಂಗವಾಗಿ ರಂಗಭೂಮಿ ಮೂಲಕ ಇಂಗ್ಲೀಷ್ ಭಾಷಾ ಕಲಿಕೆ ಕಮ್ಮಟದ ಸಮಾರೋಪ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು.

ಸಂಶೋಧಕರ ತಂಡವು ಶೋಷಣೆ ಮತ್ತು ಸಬಲೀಕರಣ ಕಡೆಗೆ ಎಂಬ ಕಿರುನಾಟಕವನ್ನು ಪ್ರದರ್ಶಿಸಿದರು. ಪಾತ್ರಧಾರಿಗಳಾಗಿ ಗೋಪಾಲ್.ಎಸ್, ಶಿವಶಂಕರ.ಬಿ, ಶಿವಕುಮಾರ್, ಕಲಾವತಿ ಎಚ್.ಕೆ. ಡಾ.ಎನ್.ಎಸ್.ಸೋಮಶೇಖರ್, ನಾಗರತ್ನ, ಯಮುನ ಭಾಗವಹಿಸಿದ್ದರು. ಡಾ.ಆರ್.ಪೂರ್ಣಿಮಾ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಮುಖ್ಯ ಅತಿಥಿಗಳಾಗಿ ರಂಗ ನಿರ್ದೇಶಕ ಪ್ರೊ.ಎಚ್.ಎಸ್.ಉಮೇಶ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಹನೂರು ಚೆನ್ನಪ್ಪ ಉಪಸ್ಥಿತರಿದ್ದರು. ಸಂಯೋಜನಾಧಿಕಾರಿ ಡಾ.ಎಸ್.ನರೇಂದ್ರಕುಮಾರ್, ಎಸ್.ಕೆ.ಮಂಜುನಾಥ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು. (ಎಲ್.ಜಿ-ಎಸ್.ಎಚ್)

Leave a Reply

comments

Related Articles

error: