ಮೈಸೂರು

ಮೈಸೂರಿನ ಮೇಯರ್ ತಸ್ನೀಂಗೆ ಸನ್ಮಾನ

ಮೈಸೂರು,ಜೂ.22:-   ಮೈಸೂರಿನ ಜೆಡಿಎಸ್ ಕಚೇರಿಯಲ್ಲಿ ಇತ್ತೀಚೆಗೆ ನಡೆದ ಸರಳ ಕಾರ್ಯಕ್ರಮದಲ್ಲಿ ಮೈಸೂರಿನ ಮೇಯರ್ ತಸ್ನೀಂ ಅವರನ್ನು ಸನ್ಮಾನಿಸಲಾಯಿತು.

ಸ್ಥಾಯಿ ಸಮಿತಿ ಅಧ್ಯಕ್ಷರಾದ ನಿರ್ಮಲ ಹರೀಶ್   ಹಾಗೂ ಪಲ್ಲವಿ ಬೇಗಮ್ ಅವರನ್ನು   ಮಾಜಿ ಸಚಿವರಾದ ಸಾರಾ ಮಹೇಶ್   ಸನ್ಮಾನಿಸಿದರು. ಈ ಸಂದರ್ಭದಲ್ಲಿ ಮಾಜಿ ಉಪಸಭಾಪತಿಗಳಾದ ಮರಿತಿಬ್ಬೇಗೌಡ, ಮೈಸೂರು ಜಿಲ್ಲಾಧ್ಯಕ್ಷರಾದ ನರಸಿಂಹಮೂರ್ತಿ, ಮೈಸೂರ್ ನಗರಾಧ್ಯಕ್ಷ ಚೆಲುವೆ ಗೌಡ್ರು, ಯುವ ಜನತಾದಳ ಅಧ್ಯಕ್ಷರಾದ ಲೋಕೇಶ್, ವಕ್ತಾರರಾದ ರವಿಚಂದ್ರ ಗೌಡ, ಕಾರ್ಯದರ್ಶಿಯಾದ ಪ್ರಕಾಶ್ ಪ್ರಿಯದರ್ಶನ್, ಎನ್.ಆರ್ ಕ್ಷೇತ್ರದ ಅಧ್ಯಕ್ಷ ರಾಮು, ಕೆಆರ್ ಕ್ಷೇತ್ರ ಅಧ್ಯಕ್ಷ ಸಂತೋಷ್, ಚಾಮರಾಜ ಕ್ಷೇತ್ರದ ಅಧ್ಯಕ್ಷ ಮಂಜುನಾಥ್ ಮತ್ತು ನಗರಪಾಲಿಕೆ ಸದಸ್ಯರುಗಳು, ಯುವ ಜನತಾದಳದ ಪ್ರಶಾಂತ್ ರಾಮು ಮತ್ತು ಜೆಡಿಎಸ್ ನ  ಮುಖಂಡರುಗಳು ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: