
ಮೈಸೂರು
ದಿನಸಿ, ಹಣ್ಣು ತರಕಾರಿ ಮತ್ತು ಮಾಂಸಾಹಾರ ಸೇರಿದಂತೆ ಶುದ್ಧ ಹಾಗೂ ರುಚಿಯಾದ ತಿನಿಸು ಬ್ಲಿಸ್ ಬೆಲ್ಲಿ ಮೂಲಕ ಮನೆ ಬಾಗಿಲಿಗೆ : ಎನ್.ಶರತ್
ಮೈಸೂರು,ಜೂ.22:- ಮೈಸೂರು ನಗರದಲ್ಲಿ ಮನೆ ಬಾಗಿಲಿಗೆ ಜನರಿಗೆ ಅಗತ್ಯವಿರುವ ದಿನಸಿ, ಹಣ್ಣು ತರಕಾರಿ ಮತ್ತು ಮಾಂಸಾಹಾರ ಸೇರಿದಂತೆ ಶುದ್ಧ ಹಾಗೂ ರುಚಿಯಾದ ತಿನಿಸನ್ನು ಮೊಬೈಲ್ಆ್ಯಪ್ ಮೂಲಕ ಆರ್ಡರ್ ಮಾಡಿ ಪಡೆಯುವ ಬ್ಲಿಸ್ ಬೆಲ್ಲಿ ಈಗಾಗಲೇ ಲೋಕಾರ್ಪಣೆಗೊಂಡಿದ್ದು, ಜನರು ಈ ಮೂಲಕ ಆರ್ಡರ್ ಮಾಡಿ ಪಡೆಯಬಹುದು ಎಂದು ವ್ಯವಸ್ಥಾಪಕ ನಿರ್ದೇಶಕ ಟೆಕ್ ಎನ್ .ಶರತ್ ತಿಳಿಸಿದರು.
ಮೈಸೂರಿನ ಪತ್ರಕರ್ತರ ಭವನದಲ್ಲಿಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಈಗ ಯಾವುದೇ ವಸ್ತುವನ್ನು ಕೊಳ್ಳಲು ಹೊರಗೆ ಹೋಗುವುದು ಕಷ್ಟ. ಅಂತಹ ಜನರಿಗೆ ಈ ಬ್ಲಿಸ್ ಬೆಲ್ಲಿ ಆ್ಯಪ್ ಸಹಾಯಕವಾಗಿದೆ. 150ಕ್ಕೂ ಹೆಚ್ಚು ಡೆಲಿವರಿ ಬಾಯ್ ಗಳು ಈ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ. ಉತ್ಸಾಹಿ ಯುವಕರ ತಂಡದೊಂದಿಗೆ ಈ ಕಾರ್ಯಕ್ರಮವನ್ನು ಮೈಸೂರು ನಗರದಲ್ಲಿ ಆರಂಭ ಮಾಡಿದ್ದು, ಉತ್ತಮ ಗುಣಮಟ್ಟದ ಆಹಾರವನ್ನು ಕಡಿಮೆ ದರದಲ್ಲಿ ಉತ್ತಮ ವಸ್ತುಗಳ ಸರಬರಾಜು ಇವುಗಳ ಆದ್ಯತೆಯಾಗಿದೆ. ಇದಕ್ಕಾಗಿ ಮೈಸೂರು ನಗರದ ಕೆಲವು ಪ್ರತಿಷ್ಠಿತ ಹೋಟೆಲ್ ಗಳು ಹಾಗೂ ದಿನಸಿ ಅಂಗಡಿಗಳೊಂದಿಗೆ ಒಪ್ಪಂದವನ್ನು ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದರು.
ಗುಣಮಟ್ಟ ಮತ್ತು ಶುಚಿತ್ವಕ್ಕೆ ಆದ್ಯತೆ ನೀಡಲಾಗಿದೆ. ಮೈಸೂರಿನ ಲೆಮೆನ್ ಟ್ರೀ, ಲೆಸ್ಲಿ ಶಾಪ್, ದೋಸಾ ಕಾರ್ನರ್,ಅಪೂರ್ವ ಹೋಟೆಲ್ ಹಾಗೂ ಕೆಲವು ಸೂಪರ್ ಮಾರ್ಕೆಟ್ ಗಳು ಮತ್ತು ಕೆಲವು ದಿನಸಿ ಅಂಗಡಿಗಳೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಜೊತೆಗೆ ಬ್ಲಿಸ್ ಬೆಲ್ಲಿ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳುವವರಿಗೆ 500ರೂ.ಗಳ ಬ್ಲಿಸ್ ಬೆಲ್ಲಿ ಕ್ಯಾಶ್ಬ್ಯಾಕ್ಆಫರ್ ಇರುತ್ತದೆ. ಈ ಆ್ಯಪ್ ಮೂಲಕ ಜನರು ನಮ್ಮ ಸಂಸ್ಥೆಯ ಸೇವೆಗಳನ್ನು ಪಡೆದುಕೊಳ್ಳುವ ಮೂಲಕ ನಮ್ಮ ಯುವ ತಂಡಕ್ಕೆ ಸಹಕರಿಸಬೇಕೆಂದು ತಿಳಿಸಿದರು.
ಈ ತಂಡದಲ್ಲಿ ಮಾರ್ಕೆಟಿಂಗ್ ಮ್ಯಾನೇಜರ್ ಮತ್ತು ಡೆಲಿವರಿ ಬಾಯ್ಸ್ ಪ್ರಾಮಾಣಿಕತೆಯಿಂದ ಶ್ರದ್ಧೆಯಿಂದ ಸೇವಾ ಮನೋಭಾವದಿಂದ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ವ್ಯವಹಾರ ಮತ್ತು ಸೇವೆ ನಮ್ಮ ಆದ್ಯತೆಯಾಗಿರುತ್ತದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಕೆ.ಮಂಜುನಾಥ್, ಬಾಲಸುಬ್ರಹ್ಮಣಿ, ದೀಪಕ್ ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)