
ಕ್ರೀಡೆಪ್ರಮುಖ ಸುದ್ದಿವಿದೇಶ
WWEಗೆ ನಿವೃತ್ತಿ ಘೋಷಿಸಿದ ಅಂಡರ್ ಟೇಕರ್
ನ್ಯೂಯಾರ್ಕ್,ಜೂ.22- ಡಬ್ಲ್ಯುಡಬ್ಲ್ಯುಇ (WWE) ಕುಸ್ತಿ ಪಟು, ದಿ ಡೆಡ್ಲಿಮ್ಯಾನ್ ಎಂದೇ ಪ್ರಸಿದ್ದರಾಗಿರುವ ಅಂಡರ್ ಟೇಕರ್ ತಮ್ಮ 30 ವರ್ಷದ ಕುಸ್ತಿ ಪಯಣಕ್ಕೆ ನಿವೃತ್ತಿ ಘೋಷಿಸಿದ್ದಾರೆ.
ಈ ಕುರಿತು ಅಂಡರ್ ಟೇಕರ್ ದಿ ಲಾಸ್ಟ್ ರೈಡ್ ಡಾಕ್ಯುಮೆಂಟರಿಯಲ್ಲಿ ತಿಳಿಸಿದ್ದಾರೆ. ನನಗೆ ಜಯಿಸಲು ಏನೂ ಉಳಿದಿಲ್ಲ. ನಾನು ಸಾಧಿಸಲು ಏನೂ ಉಳಿದಿಲ್ಲ. ಈಗಿನ ಆಟ ಬದಲಾಗಿದೆ. ಹೊಸ ಆಟಗಾರರು ಅಖಾಡದಲ್ಲಿ ಮಿಂಚಲು ತಯಾರಾಗಿದ್ದಾರೆ. ಇದು ನನ್ನ ನಿವೃತ್ತಿಯ ಸಮಯ ಎಂಬುದು ಗೋಚರಿಸುತ್ತಿದೆ. ಮತ್ತೆ ಅಖಾಡಕ್ಕೆ ಇಳಿಯುವ ಆಸೆ ನನಗಿಲ್ಲ ಎಂದು ಅಂಡರ್ ಟೇಕರ್ ಹೇಳಿದ್ದಾರೆ.
ಅಮೆರಿಕಾದ ಟೆಕ್ಸಾಸ್ನ ಹೂಸ್ಟನ್ನಲ್ಲಿ 1965 ಮಾರ್ಚ್ 24 ರಂದು ಜನಿಸಿದ ಅಂಡರ್ ಟೇಕರ್ ಅವರ ಮೂಲ ಹೆಸರು ಮಾರ್ಕ್ ವಿಲಿಯಂ ಕ್ಯಾಲವೆ. ತಮ್ಮ ಪದವಿ ಪೂರ್ಣಗೊಳಿಸಿದ ನಂತರ ವಿಶ್ವದಲ್ಲಿಯೇ ಹೆಚ್ಚು ಪ್ರಸಿದ್ಧಿ ಪಡೆದಿದ್ದ ಹೆವಿವೈಟ್ ಚಾಂಪಿಯನ್ಷಿಪ್ ರಂಗಕ್ಕೆ ಪಾದರ್ಪಣೆ ಮಾಡಿದ್ದರು.
ತಮ್ಮ 33 ವರ್ಷಗಳ ಫೈಟಿಂಗ್ ಪಯಣದಲ್ಲಿ ಹಲವು ಬಾರಿ ಚಾಂಪಿಯನ್ ಆಗಿದ್ದರು. ನೇರ ಕುಸ್ತಿಗೆ ಹೆಸರುವಾಸಿಯಾಗಿದ್ದ ಇವರ ಶೈಲಿಗೆ ಕೋಟ್ಯಂತರ ಕುಸ್ತಿ ರಸಿಕರು ಮಾರು ಹೋಗಿದ್ದರು. 6.10 ಅಡಿ ಇದ್ದ ಈ ಅಜಾನುಬಾಹು ಕುಸ್ತಿ ಅಖಾಡಕ್ಕೆ ಕಾಲಿರಿದರೆ ಅಭಿಮಾನಿಗಳು ಹುಚ್ಚೆದ್ದು ಕುಣಿಯುತ್ತಿದ್ದರು.
ಅಂಡರ್ ಟೇಕರ್ 1990 ರಲ್ಲಿ ಸರ್ವೈವರ್ ಸರಣಿಯ ಮೂಲಕ ತಮ್ಮ WWಇ ಜೀವನಕ್ಕೆ ಕಾಲಿಟ್ಟರು. ತಮ್ಮ ವೃತ್ತಿಜೀವನದಲ್ಲಿ ಮೂರು ಬಾರಿ ವಿಶ್ವ ಹೆವಿವೈಟ್ ಚಾಂಪಿಯನ್ಶಿಪ್, WWಈ / WWಇ ಚಾಂಪಿಯನ್ಶಿಪ್ 4 ಬಾರಿ, ಒಂದು ಬಾರಿ WWಈ ಹಾರ್ಡ್ಕೋರ್ ಚಾಂಪಿಯನ್ಶಿಪ್, ಆರು ಬಾರಿ WWಈ ವರ್ಲ್ಡ್ ಟ್ಯಾಗ್ ಟೀಂ ಚಾಂಪಿಯನ್ಶಿಪ್ ಮತ್ತು 2007 ರಲ್ಲಿ ರಾಯಲ್ ರಂಬಲ್ ಗೆದ್ದ ಸಾಧನೆ ಮಾಡಿದ್ದರು.
ಅಂಡರ್ ಟೇಕರ್ 2002 ರಲ್ಲಿ ಪ್ರೊ ವ್ರೆಸ್ಲಿಂಗ್ ಇಲ್ಲಸ್ಟ್ರೇಟೆಡ್ 500 ಪಟ್ಟಿಯ ಅಗ್ರ 500 ಸಿಂಗಲ್ಸ್ ಕುಸ್ತಿಪಟುಗಳಲ್ಲಿ ಎರಡನೇ ಸ್ಥಾನ ಪಡೆದಿದ್ದರು. (ಎಂ.ಎನ್)