ಮೈಸೂರು
ಕೋವಿಡ್ ಸಸ್ಪೆಕ್ಟೆಡ್ ವರದಿಗಳನ್ನು ದಾಖಲೆ ಮಾಡದವರ ಮೇಲೆ ಕ್ರಮ : ಎಚ್ಚರಿಕೆ
ಮೈಸೂರು,ಜೂ.22:- ಮೈಸೂರು ನಗರದಲ್ಲಿ ಕೊರೋನಾ ವೈರಸ್ ರೋಗವು ಉಲ್ಬಣಗೊಳ್ಳುತ್ತಿರುವುದರಿಂದ ಕೊರೋನಾ ವೈರಸ್ ನಿಯಂತ್ರಣದ ಕಾರ್ಯಕ್ರಮದ ಅಡಿಯಲ್ಲಿ ಎಲ್ಲಾ ಖಾಸಗಿ ಆರೋಗ್ಯ ಸಂಸ್ಥೆಗಳು (ಆಲೋಪಥಿ,ಆಯುಷ್, ದಂತ ವೈದ್ಯರು ಹಾಗೂ ಎಲ್ಲಾ ತಜ್ಞ ವೈದ್ಯರು) SARI, ILI, ಮತ್ತು ಕೋವಿಡ್ ಸಸ್ಪೆಕ್ಟೆಡ್ ವರದಿಗಳನ್ನು ಇದರ ಮೂಲಕ ಪ್ರತಿದಿನ ದಾಖಲೆ ಮಾಡಲು ಈಗಾಗಲೇ ಹಲವು ಬಾರಿ ಎಚ್ಚರಿಕೆಯನ್ನು ನೀಡಲಾಗಿದ್ದರೂ ಸುಮಾರು ಆರೋಗ್ಯ ಸಂಸ್ಥೆಗಳು SARI, ILI, ಸಸ್ಪೆಕ್ಟೆಡ್ ಕೋವಿಡ್ ದೈನಂದಿನ ವರದಿಗಳನ್ನು https://kpme.karnataka. tech ದಾಖಲೆ ಮಾಡುತ್ತಿಲ್ಲ. ಅಂತಹ ಆರೋಗ್ಯ ಸಂಸ್ಥೆಯ ಮೂಲಕ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಆರೋಗ್ಯಾಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.
ಅಲ್ಲದೆ ಖಾಸಗಿ ಸಂಸ್ಥೆಗಳಲ್ಲಿ ಗುರುತಿಸಲ್ಪಡುವ ಪ್ರತಿಯೊಂದು ಐಎಲ್ ಐ/ಸಾರಿ ಪ್ರಕರಣಗಳನ್ನೂ ಸಹ ಉಚಿತವಾಗಿ ಸ್ವಾಬ್ ಟೆಸ್ಟಿಂಗ್ ಮಾಡಿಸಬೇಕು ಎಂದಿದ್ದಾರೆ. (ಕೆ.ಎಸ್,ಎಸ್.ಎಚ್)