ಕ್ರೀಡೆದೇಶ

ಪ್ರಥಮ ದರ್ಜೆ ಕ್ರಿಕೆಟ್ ದಿಗ್ಗಜ ರಾಜಿಂದರ್ ಗೋಯೆಲ್ ನಿಧನ

ನವದೆಹಲಿ,ಜೂ.22-ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ದೇಶಿ ಕ್ರಿಕೆಟ್‌ ದಿಗ್ಗಜ ಲೆಗ್‌ಸ್ಪಿನ್ನರ್ ರಾಜಿಂದರ್ ಗೋಯೆಲ್ (77) ನಿಧನರಾಗಿದ್ದಾರೆ.

ಎಡಗೈ ಸ್ಪಿನ್ನರ್ ಆಗಿದ್ದ ರಾಜೀಂದರ್ ಅವರು ಹರಿಯಾಣ ಮತ್ತು ಉತ್ತರ ವಲಯ ತಂಡಗಳಲ್ಲಿ ಆಡಿದ್ದರು. 157 ಪ್ರಥಮ ದರ್ಜೆ ಪಂದ್ಯಗಳಲ್ಲಿ ಆಡಿದ್ದ ಅವರು 750 ವಿಕೆಟ್‌ಗಳನ್ನು ಗಳಿಸಿದ್ದಾರೆ. ಬಿಷನ್ ಸಿಂಗ್ ಬೇಡಿ ಅವರು ಆಡುತ್ತಿದ್ದ ಕಾಲಘಟ್ಟದಲ್ಲಿ ಗೋಯಲ್ ಆಡಿದ್ದರು. ಅವರು ತಮ್ಮ 44ನೇ ವಯಸ್ಸಿನವರೆಗೂ ಕ್ರಿಕೆಟ್ ಆಡಿದ್ದರು.

ಕೆಲವು ವರ್ಷಗಳ ಹಿಂದೆ ಅವರಿಗೆ ಬಿಸಿಸಿಐನ ಸಿ.ಕೆ. ನಾಯ್ಡು ಜೀವಮಾನ ಸಾಧನೆಯ ಪ್ರಶಸ್ತಿ ನೀಡಿ ಗೌರವಿಸಿತ್ತು. ಬೇಡಿಯವರೇ ಆ ಪ್ರಶಸ್ತಿಯನ್ನು ಪ್ರದಾನ ಮಾಡಿದ್ದರು.

ಇವರ ನಿಧನಕ್ಕೆ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಸಂತಾಪ ಸೂಚಿಸಿದ್ದಾರೆ. (ಎಂ.ಎನ್)

 

Leave a Reply

comments

Related Articles

error: