ಕರ್ನಾಟಕಮೈಸೂರು

ಗಾಂಧಿ ಶಿಲ್ಪ ಬಜಾರ್ ಉದ್ಘಾಟನೆ ಸೆ.29 ರಿಂದ ಅ.9ರವರೆಗೆ ಕರಕುಶಲ ಮೇಳ

ನಾಡಹಬ್ಬ ದಸರಾ ಮಹೋತ್ಸವದ ಸಂದರ್ಭದಲ್ಲಿ ‘ಗಾಂಧಿ ಶಿಲ್ಪ ಬಜಾರ್’ ಕರಕುಶಲ ವಸ್ತು ಪ್ರದರ್ಶನ ಮತ್ತು ಮಾರಾಟವನ್ನು ಸೆ.29 ರಿಂದ ಅಕ್ಟೋಬರ್ 9ರವರೆಗೆ ಹೆಬ್ಬಾಳದ ಜೆ.ಎಸ್.ಎಸ್.ಮೈಸೂರು ಅರ್ಬನ್ ಹಾತ್ ಅಲ್ಲಿ ಆಯೋಜಿಸಲಾಗಿದ್ದು ಪ್ರದರ್ಶನದಲ್ಲಿ ರಾಜ್ಯ ಸೇರಿದಂತೆ ಹೊರ ರಾಜ್ಯಗಳ ಸುಪ್ರಸಿದ್ಧ ಮಳಿಗೆಗಳು ಪಾಲ್ಗೊಳ್ಳಲಿವೆ ಎಂದು ರಾಜ್ಯ ಕರಕುಶಲ ಮಾರುಕಟ್ಟೆ ಮತ್ತು ಸೇವಾ ವಿಸ್ತರಣಾ ಕೇಂದ್ರದ ಸಹಾಯಕ ನಿರ್ದೇಶಕ ಪಿ.ಶಶಿಧರ ತಿಳಿಸಿದರು.

ಅವರು ಪತ್ರಕರ್ತರ ಭವನದಲ್ಲಿ ಸೆ.28ರ ಬುಧವಾರದಂದು ಸುದ್ಧಿಗೋಷ್ಠಿ ನಡೆಸಿ ಕೇಂದ್ರದ ಜವಳಿ ಮಂತ್ರಾಲಯದದಿಂದ ಆಯೋಜಿಸಲಾಗಿರುವ ಮೇಳವನ್ನು ಮಹಾಪೌರ ಬಿ.ಎಲ್.ಭೈರಪ್ಪ ಉದ್ಘಾಟಿಸುವರು. ಸಂಸದ ಪ್ರತಾಪ್ ಸಿಂಹ ಅಧ್ಯಕ್ಷತೆ ವಹಿಸುವರು, ಮುಖ್ಯ ಅತಿಥಿಗಳಾಗಿ ಶಾಸಕ ಜಿ.ಟಿ.ದೇವೇಗೌಡ, ಮೈಸೂರು ಮಹಾನಗರ ಪಾಲಿಕೆ ಆಯುಕ್ತ ಜಿ.ಜಗದೀಶ್, ಚೆನೈ,(ಕರಕುಶಲ) ದಕ್ಷಿಣ ಪ್ರಾಂತ್ಯದ ಪ್ರಾಂಥೀಯ ನಿರ್ದೇಶಕ ಪಿ.ಮಲ್ಲಿಕಾರ್ಜುನಯ್ಯ. ಕ.ರಾ.ಕ.ಅ.ನಿ.ನಿ.ನಿರ್ದೇಶಕಿ ವಿ.ವರಲಕ್ಷ್ಮೀ,  ಬಾ.ಅ.ಸೇ.ಬಿ.ವೆಂಕಟೇಶ್, ಜಿ.ಕೈ.ಕೇ.ಯ ಜಂಟಿ ನಿರ್ದೇಶಕ ಹೆಚ್.ರಾಮಕೃಷ್ಣೇಗೌಡ,  ಜೆ.ಎಸ್.ಎಸ್. ತಾಂತ್ರಿಕ ಶಿಕ್ಷಣ ವಿಭಾಗದ ಜಂಟಿ ನಿರ್ದೇಶಕ ಬಿ.ಆರ್.ಉಮಾಕಾಂತ್ ಹಾಗೂ ಕ.ಮಾ.ಸೇ.ವಿ., ಸಹಾಯಕ ನಿರ್ದೇಶಕ ಪಿ.ಶಶಿಧರ ಜವಳಿ ಮಂತ್ರಾಲಯ ಇವರುಗಳು ಭಾಗವಹಿಸುವರು.

ಮೇಳದಲ್ಲಿ : ಜಮ್ಮು-ಕಾಶ್ಮೀರ, ಪಶ್ಚಿಮ ಬಂಗಾಳ, ಮಹಾರಾಷ್ಟ್ರ, ಉತ್ತರ ಪ್ರದೇಶ, ದೆಹಲಿ, ಗುಜರಾತ್, ರಾಜಸ್ಥಾನ ಸೇರಿದಂತೆ ಇತರೆ ರಾಜ್ಯದ ನೂರಾರು ಕರಕುಶಲ ವಸ್ತುಗಳು ಲಭಿಸಲಿದ್ದು, ಕಾಶ್ಮೀರದ ಮೃದು ಶಾಲು, ಖಶೀದಕರಿ ಎಂಬ್ರಾಯಿಡರಿ ಡ್ರೆಸ್ ಗಳು, ಚಂದೇರಿ ಸೀರೆಗಳು ಕೊಲ್ಲಾಪುರ ಚಪ್ಪಲಿಗಳು, ಪ್ಯಾಚ್ ವರ್ಕ್, ಕೃತಕ ಹೂವುಗಳು ಬಿದಿರಿನ ಗೃಹಪಯೋಗಿ ವಸ್ತುಗಳು, ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ಮಳಿಗೆಗಳು ಹಾಗೂ ಇತರೆ ನೂರಾರು ಆರ್ಕಷಕ ವಸ್ತುಗಳು ಮೇಳದಲ್ಲಿ ಲಭಿಸಲಿದ್ದು ಮೈಸೂರಿಗರು ಇದರ ಸದುಪಯೋಗ ಪಡೆಯಲಿ ಎಂದು ಕೋರಿದರು.

Leave a Reply

comments

Tags

Related Articles

error: