ಮೈಸೂರು

ಕರ್ನಾಟಕ ರಕ್ಷಣಾ ವೇದಿಕೆ ಸಿಂಹ ಸೇನೆ ವತಿಯಿಂದ ಮಾಧ್ಯಮದ ಕೊರೋನಾ ವಾರಿಯರ್ಸ್ ಗೆ ಅಭಿನಂದನೆ

ಮೈಸೂರು,ಜೂ.23:- ಕರ್ನಾಟಕ ರಕ್ಷಣಾ ವೇದಿಕೆ ಸಿಂಹ ಸೇನೆ ವತಿಯಿಂದ ಕೋವಿಡ್ 19 ವಿರುದ್ಧ ಹೋರಾಟ ನಡೆಸುತ್ತಿರುವ ಮಾಧ್ಯಮದ ಕೊರೋನಾ ವಾರಿಯರ್ಸ್ ಗೆ ಇಂದು ಅಭಿನಂದಿಸಲಾಯಿತು.

ಟಿವಿ ಕ್ಯಾಮರಾಮನ್ ಗಳು ಮತ್ತು ಪತ್ರಿಕೆಯ ಛಾಯಾಗ್ರಾಹಕರನ್ನು ಅಭಿನಂದಿಸಲಾಯಿತು.  ಆರ್.ಮಧುಸೂಧನ್,  ನಂದನ್,  ರಂಜಿತ್,  ಲೋಹಿತ್ ಹನುಮಂತಪ್ಪ ಅವರನ್ನು  ಲಯನ್ಸ್ ಎಂ.ಕುಮಾರ್ ಶಾಲು ಹೊದೆಸಿ  ಸೇವಾರತ್ನ ಪ್ರಶಸ್ತಿ ಫಲಕ ನೀಡಿ, ನೆನಪಿನ ಕಾಣಿಕೆ ನೀಡಿ ಸನ್ಮಾನಿಸಿದರು.

ಈ ಸಂದರ್ಭ ಮೈಸೂರು ನಗರ ಮಹಿಳಾ ಘಟಕದ ಅಧ್ಯಕ್ಷೆ ಮೀನಾಕ್ಷಿ ಸಂದೇಶ್,ಮೈಸೂರು ನಗರ ಮಹಿಳಾ ಘಟಕದ ಉಪಾಧ್ಯಕ್ಷೆ ಸಿ.ಎಂ.ಚೈತ್ರ ಸುರೇಶ್,ಕೆ.ಆರ್.ಕ್ಷೇತ್ರದ ಅಧ್ಯಕ್ಷ ಪ್ರಜ್ವಲ್,ಉಪಾಧ್ಯಕ್ಷ ಧೀರಜ್ ಶ್ರೀವತ್ಸ,ಎನ್‌.ಆರ್.ಕ್ಷೇತ್ರದ ಅಧ್ಯಕ್ಷ ರಕ್ಷಿತ್,ಅರ್ಜುನ್ ಸೇರಿದಂತೆ ಇತರರು ಹಾಜರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: