ಮೈಸೂರು

ದ್ವಿಚಕ್ರವಾಹನ ಕಳ್ಳನ ಬಂಧನ : ಸರಸ್ವತಿಪುರಂ ಠಾಣಾ ಪೊಲೀಸರ ಯಶಸ್ವಿ ಕಾರ್ಯಾಚರಣೆ

ಮೈಸೂರು,ಜೂ.23:- ದ್ವಿಚಕ್ರವಾಹನ ಕಳ್ಳನೋರ್ವನನ್ನು ಪತ್ತೆ ಹಚ್ಚಿ ಬಂಧಿಸುವಲ್ಲಿ ಸರಸ್ವತಿಪುರಂ ಪೊಲೀಸ್ ಠಾಣಾ ಪೊಲೀಸರು ಯಶಸ್ವಿಯಾಗಿದ್ದಾರೆ.

ಬಂಧಿತನನ್ನು  ಮೈಸೂರು ನಗರದ ಬೋಗಾದಿ ಗ್ರಾಮದ ಚಂದನ್ @ ಚಂದು ಎಂದು ಗುರುತಿಸಲಾಗಿದೆ. ಈತ  ಸರಸ್ವತಿಪುರಂ ಪೊಲೀಸ್ ಠಾಣಾ ಸರಹದ್ದು ಟಿ ಕೆ ಲೇಔಟ್ ನಲ್ಲಿ ಒಂದು ದ್ವಿಚಕ್ರ ವಾಹನ, ಬೋಗಾದಿ ರಿಂಗ್ ರಸ್ತೆಯ ಬಳಿ ಮತ್ತು ಬೋಗಾದಿ ಗ್ರಾಮದಲ್ಲಿ ತಲಾ ಎರಡು ದ್ವಿಚಕ್ರ ವಾಹನ ಹಾಗೂ ವಿಜಯನಗರ ಪೊಲೀಸ್ ಠಾಣೆಯ ಸರಹದ್ದಿನಲ್ಲಿ  ಒಂದು ದ್ವಿಚಕ್ರ ವಾಹನ ಗಳನ್ನು ಕಳ್ಳತನ ಮಾಡಿರುವುದಾಗಿ ವಿಚಾರಣೆ ವೇಳೆ ಒಪ್ಪಿಕೊಂಡಿದ್ದು, ಕಳ್ಳತನ ನಡೆಸಿದ ವಾಹನಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಮೈಸೂರು ನಗರದ ಉಪ ಪೊಲೀಸ್ ಆಯುಕ್ತರಾದ ಗೀತಾ ಅವರ ಮಾರ್ಗದರ್ಶನದಲ್ಲಿ ,ಸರಸ್ವತಿಪುರಂ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರಾದ ವಿಜಯ್ ಕುಮಾರ್ ಅವರ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಅಪರಾಧ ವಿಭಾಗದ ಎ ಎಸ್ ಐ ಕರುಣಾಕರ್ ಸಿಬ್ಬಂದಿಗಳಾದ  ಬಸವರಾಜೇಅರಸ್, ಪ್ರಕಾಶ, ರಾಘವೇಂದ್ರ, ಮಂಜುನಾಥ, ಕುಮಾರ್, ಹರೀಶ್,ರಾಜೇಶ್ ಪಾಲ್ಗೊಂಡಿದ್ದರು. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: