ಮೈಸೂರು

ಮೈಸೂರಿನಲ್ಲಿ 21ಮಂದಿಗೆ ಕೊರೋನಾ ಸೋಂಕು : ಸಾಮಾಜಿಕವಾಗಿ ಹರಡಲು ಪ್ರಾರಂಭಿಸಿದ ವೈರಸ್ ; ಮಾಹಿತಿ ನೀಡಲು ಸೂಚನೆ

ಮೈಸೂರು,ಜೂ.24:-   ಮೈಸೂರಿನಲ್ಲಿ ಕೊರೋನಾ ಪಾಸಿಟಿವ್ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಸಾಮುದಾಯಿಕವಾಗಿ ವೈರಸ್ ಹರಡಲು ಆರಂಭಿಸಿದೆ. ಮೈಸೂರಿನಲ್ಲಿ ನಿನ್ನೆ ಮತ್ತೆ 21 ಮಂದಿಗೆ ಕೊರೋನಾ ವೈರಸ್ ತಗುಲಿದ್ದು ಸೋಂಕಿತರ ಸಂಖ್ಯೆ 79ಕ್ಕೇರಿದೆ.

29 ವರ್ಷದ ಪುರುಷ  ಆರ್‌ಬಿಐ (ಸಿಐಎಸ್‌ಎಫ್ ಸಿಬ್ಬಂದಿ),  50 ವರ್ಷದ ಮಹಿಳೆ  ಗಾಯತ್ರಿಪುರಂ ಪೊಲೀಸ್ ಕ್ವಾರ್ಟರ್ಸ್,  28 ವರ್ಷದ ಪುರುಷ  ಕೊತ್ವಾಲ್ ರಾಮಯ್ಯ ರಸ್ತೆ ದೇವರಾಜ ಮೊಹಲ್ಲಾ,  54 ವರ್ಷದ ಪುರುಷ  ರಾಜ್‌ಕುಮಾರ್ ರಸ್ತೆ, 28 ವರ್ಷದ ಪುರುಷ , 60 ವರ್ಷದ ಪುರುಷ  ,53 ವರ್ಷದ ಮಹಿಳೆ,79 ವರ್ಷದ ಮಹಿಳೆ, ರಾಘವೇಂದ್ರ ಬಡಾವಣೆ, 29 ವರ್ಷದ ಮಹಿಳೆ ಮಾದೇಗೌಡ ವೃತ್ತ,  23 ವರ್ಷದ ಮಹಿಳೆ  ಹೂಟಗಳ್ಳಿ ಹೌಸಿಂಗ್ ಬೋರ್ಡ್ ಕಾಲೋನಿ ,8 ವರ್ಷದ ಬಾಲಕ  ,10 ವರ್ಷದ ಬಾಲಕಿ ಶ್ರೀರಾಂಪುರ ಎರಡನೇ ಹಂತ, 39 ವರ್ಷದ ಮಹಿಳೆ  ಆರ್‌ಬಿಐ ನೋಟ್ ಮುದ್ರಣ ನಗರ,15 ವರ್ಷದ ಬಾಲಕಿ.20 ವರ್ಷದ ಯುವಕ 93 ವರ್ಷದ ವೃದ್ದ ,ದಟ್ಟಗಳ್ಳಿ ಪಿ 9399 ರ ಪ್ರಾಥಮಿಕ ಸಂಪರ್ಕ, 11 ವರ್ಷದ ಬಾಲಕ,33 ವರ್ಷ ಮಹಿಳೆ ,38 ವರ್ಷದ ಪುರುಷ ವಿಜಯನಗರ ರೈಲ್ವೆ ಬಡಾವಣೆ, 59 ವರ್ಷದ ಪುರುಷ  ಕಾನ್ಸಟೇಬಲ್,ಜೆ.ಸಿ.ನಗರ ಮೂರನೆ ಅಡ್ಡ ರಸ್ತೆ,32 ವರ್ಷದ ಪುರುಷ ಶಿವರಾಂಪೇಟೆ ದೇವರಾಜ ಮೊಹಲ್ಲಾ ಇವರುಗಳಿಗೆ ಕೊರೋನಾ ವೈರಸ್ ತಗುಲಿದೆ.

ಸೂಚನೆ

ಇದು ಅತ್ಯಂತ ಮಹತ್ವದ ಸಮಯ. ಸೆಲ್ಪ್ ಸೀಲ್‌ಡೌನ್, ಲಾಕ್‌ಡೌನ್ ಆಗುವ ಸಮಯ. ಕೊರೋನಾ ಮಹಾಮಾರಿ ಸಾಮಾಜಿಕವಾಗಿ ಹರಡಲು ಆರಂಭಿಸಿದೆ.  ಈಗ ಸೋಂಕು ಪತ್ತೆಯಾಗಿರುವ ಬಡಾವಣೆಯವರು ಮಾತ್ರವಲ್ಲ, ಮೈಸೂರಿನ ಎಲ್ಲಾ ನಾಗರೀಕರು ಅತ್ಯಂತ ಜವಾಬ್ದಾರಿಯುತವಾಗಿ ವರ್ತಿಸಲೇಬೇಕು. ನಿಮಗೆ ಅಥವಾ ನಿಮ್ಮ ಅಕ್ಕಪಕ್ಕದವರಿಗೆ ಸೋಂಕಿನ ಲಕ್ಷಣಗಳಿದ್ದರೆ ತಕ್ಷಣ ಆರೋಗ್ಯ ಇಲಾಖೆಗೆ ಮಾಹಿತಿ ನೀಡಿ. ಪಾಸಿಟಿವ್ ಆದ ಬಗ್ಗೆ ಕೀಳರಿಮೆ ಬೇಡ. ಇದು ಮುಚ್ಚಿಡುವ ವಿಷಯವಲ್ಲ. ದಯಮಾಡಿ ಅರ್ಥ ಮಾಡಿಕೊಂಡು ಜಿಲ್ಲಾಡಳಿತ ಆರೋಗ್ಯ ಇಲಾಖೆ ಜೊತೆ ಸಹಕರಿಸಿ. ಹೆಚ್ಚಿನ ಮಾಹಿತಿಗಾಗಿ ಈ ಸಂಖ್ಯೆಗೆ ಕರೆ ಮಾಡಿ 08212423800/1077 ಎಂದು ಜಿಲ್ಲಾಡಳಿತ ಸೂಚಿಸಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: