ಕ್ರೀಡೆಪ್ರಮುಖ ಸುದ್ದಿ

ನಂಬರ್ ವನ್ ಟೆನಿಸ್ ಆಟಗಾರ ನೊವಾಕ್ ಜೊಕೊವಿಕ್   ಕೊರೋನಾ ವರದಿ ಪಾಸಿಟಿವ್ ; ಪತ್ನಿಗೂ  ಕೊರೋನಾ

ದೇಶ(ನವದೆಹಲಿ)ಜೂ.24:- ವಿಶ್ವದ ನಂಬರ್ ಒನ್ ಟೆನಿಸ್ ಆಟಗಾರ ನೊವಾಕ್ ಜೊಕೊವಿಕ್ ಅವರ ಕೊರೋನಾ ವೈರಸ್ ವರದಿ ಪಾಸಿಟಿವ್ ಬಂದಿದೆ ಎನ್ನಲಾಗಿದೆ.

ಜೊಕೊವಿಕ್ ಅವರು ಸೋಮವಾರ ಕೋವಿಡ್ -19 ಪರೀಕ್ಷೆ  ನಡೆಸಿಕೊಂಡಿದ್ದು,  ಮರುದಿನವೇ ಅವರ ವರದಿ ಬಂದಿದೆ. ಜೊಕೊವಿಕ್ ಅವರಲ್ಲದೆ, ಅವರ ಪತ್ನಿಗೆ ಕೂಡ ಕೊರೋನಾ ಪಾಸಿಟಿವ್ ಇರುವುದು ದೃಢಪಟ್ಟಿದೆ. ಜೊಕೊವಿಕ್ ಅವರ ಮಕ್ಕಳ ಕೋವಿಡ್ -19 ವರದಿ ನೆಗೆಟಿವ್ ಬಂದಿದೆ ಎಂಬುದು ಸಮಾಧಾನಕರ ಸಂಗತಿಯಾಗಿದೆ. ಜೊಕೊವಿಕ್ ಇತ್ತೀಚೆಗೆ ಆಡ್ರಿಯಾ ಪ್ರವಾಸದಲ್ಲಿ ಭಾಗವಹಿಸಿದ್ದರು. ಈ ಪ್ರವಾಸದಲ್ಲಿ ಭಾಗವಹಿಸಿದ್ದ ಅನೇಕ ಆಟಗಾರರ ಕೊರೋನಾ ವರದಿಯು ಪಾಸಿಟಿವ್ ಬಂದಿದೆ ಎನ್ನಲಾಗಿದೆ.

ಕೊರೋನಾ ವೈರಸ್ ವರದಿ ಪಾಸಿಟಿವ್ ಬರುವ ಮೊದಲು ಜೊಕೊವಿಕ್ ಆಡ್ರಿಯಾ ಪ್ರವಾಸದಲ್ಲಿ ಭಾಗವಹಿಸಿದ್ದು, ಬ್ರಿಟನ್‌ನ ಡಾನ್ ಇವಾನ್ಸ್ ವಿಶ್ವ ನಂಬರ್ 1 ಪುರುಷರ ಟೆನಿಸ್ ಆಟಗಾರ ನೊವಾಕ್ ಜೊಕೊವಿಕ್ ಅವರನ್ನು ಎದುರಿಸಿದ್ದರು. ಗ್ರಿಗರ್ ಡಿಮಿಟ್ರೋವ್ ಮತ್ತು ಕೊವಿಡ್ -19 ರ ಬೊರ್ನಾ ಕೊರಿಕ್ ಅವರ ಟೆಸ್ಟ್ ಪಾಸಿಟಿವ್ ಕುರಿತು ಜೊಕೊವಿಕ್ ಸ್ವಲ್ಪ ಜವಾಬ್ದಾರಿಯನ್ನು ವಹಿಸಬೇಕು ಎಂದು ಅವರು ಹೇಳಿದ್ದಾರೆ. ಆಡ್ರಿಯಾ ಟೂರ್‌ನಲ್ಲಿ ಭಾಗವಹಿಸುವಾಗ ಈ ಇಬ್ಬರು ಆಟಗಾರರು ಕೊರೋನಾ ವೈರಸ್‌ ಸೋಂಕಿಗೆ ಒಳಗಾಗಿದ್ದರು. (ಏಜೆನ್ಸೀಸ್,ಎಸ್.ಎಚ್)

Leave a Reply

comments

Related Articles

error: