ಪ್ರಮುಖ ಸುದ್ದಿವಿದೇಶ

ದಕ್ಷಿಣ ಮೆಕ್ಸಿಕೋದಲ್ಲಿ 7.4 ತೀವ್ರತೆಯ ಭೂಕಂಪ: 5 ಮಂದಿ ಸಾವು

ಮೆಕ್ಸಿಕೋ,ಜೂ.24-ದಕ್ಷಿಣ ಮೆಕ್ಸಿಕೋದಲ್ಲಿ ರಿಕ್ಟರ್ ಮಾಪಕದಲ್ಲಿ 7.4 ತೀವ್ರತೆಯ ಭೂಕಂಪ ಸಂಭವಿಸಿದ್ದು, 5 ಮಂದಿ ಮೃತಪಟ್ಟಿದ್ದಾರೆ.

ಭೂಕಂಪ ಕೇಂದ್ರ ಬಿಂದು ಪ್ರದೇಶದಲ್ಲಿ ಬೆಂಕಿ ಕೂಡ ಉತ್ಪತ್ತಿಯಾಗಿತ್ತು. ಇದರಿಂದ ಸಾಕಷ್ಟು ಮಂದಿ ಗಾಯಗೊಂಡಿದ್ದಾರೆ. ಬೆಳಗಿನ ಜಾವ ಭೂಕಂಪ ಸಂಭವಿಸಿದ್ದು, ಜನರಿಗೆ ತಕ್ಷಣಕ್ಕೆ ಏನಾಗುತ್ತಿದೆ ಎನ್ನುವ ಅರಿವು ಬಂದಿರಲಿಲ್ಲ. ಪೊಲೀಸರು ಹೆಲಿಕಾಪ್ಟರ್‌ನಲ್ಲಿ ಬಂದು ಸೈರನ್ ಹಾಕಿ ಭೂಕಂಪದ ಕುರಿತು ಎಚ್ಚರಿಕೆ ನೀಡಿದ್ದರು.

ಭೂಕಂಪದಿಂದಾಗಿ ಮನೆಗಳು ಕುಸಿದು ನೆಲಸಮಗೊಂಡಿವೆ. ರಸ್ತೆಗಳು ಬಿರುಕುಬಿಟ್ಟಿವೆ. ಭೂಕಂಪ ಸಂಭವಿಸಿದ ತಕ್ಷಣ ಸಾವಿರಾರು ಮಂದಿ ಮನೆಯಿಂದ ರಸ್ತೆಗೆ ಓಡಿ ಬಂದಿದ್ದಾರೆ.

ಹುವಾಟುಲ್ಕೋದಲ್ಲಿ ಕಟ್ಟಡ ಕುಸಿತದಿಂದ ಓರ್ವ ಮೃತಪಟ್ಟಿದ್ದು, ಮತ್ತೋರ್ವ ಗಾಯಗೊಂಡಿದ್ದಾನೆ. ಸ್ಯಾನ್ ಜುವಾನ್‌ನ ಮನೆಯೊಂದು ಕುಸಿದುಬಿದ್ದು ಮತ್ತೋರ್ವ ಮೃತಪಟ್ಟಿದ್ದಾನೆ. ಆಯಿಲ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯ ಮೇಲೆ ಯಂತ್ರ ಬಿದ್ದು ಅವರು ಮೃತಪಟ್ಟಿದ್ದಾರೆ. ಮತ್ತೋರ್ವ ಅಓವಾಕ್ಸಾ ಪ್ರದೇಶದಲ್ಲಿ ಮನೆಯ ಗೋಡೆ ಬಿದ್ದು ಸಾವನ್ನಪ್ಪಿದ್ದಾರೆ.

ಕಳೆದ 35 ವರ್ಷಗಳಿಂದ 7ಕ್ಕಿಂತ ಹೆಚ್ಚು ತೀವ್ರತೆಯ ಭೂಕಂಪ ಸಂಭವಿಸಿಲ್ಲ. 1985ರಲ್ಲಿ 8.0 ತೀವ್ರತೆಯ ಭೂಕಂಪ ಸಂಭವಿಸಿದ್ದು, 10 ಸಾವಿರ ಮಂದಿ ಮೃತಪಟ್ಟಿದ್ದರು. (ಎಂ.ಎನ್)

Leave a Reply

comments

Related Articles

error: