ಮೈಸೂರು

ಕೊಲೆ ಸಂಚು ಹಾಕಿ ಕುಳಿತಿದ್ದ ನಾಲ್ವರ ಬಂಧನ

ಮೈಸೂರು ಮೇಟಗಳ್ಳಿ ಇಂಡಸ್ಟ್ರಿಯಲ್ ಜಿ.ಟಿ.ಟಿ.ಸಿ ಬಳಿ ಇರುವ ಅರಳಿಮರದ ಬಳಿ ಡಕಾಯಿತಿ ಹಾಗೂ ಕೊಲೆ ಸಂಚು ನಡೆಸಲು ಹೊಂಚು ಹಾಕಿ  ಕಾರಿನಲ್ಲಿ ಕುಳಿತಿದ್ದ ನಾಲ್ವರನ್ನು ಮೈಸೂರು ಸಿಸಿಬಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬಂಧಿತರನ್ನು ಮಂಡ್ಯಜಿಲ್ಲೆ ಮಳವಳ್ಳಿ ತಾಲೂಕಿನ ನಾಗಲಿಂಗಸ್ವಾಮಿ(35), ತಿಪಟೂರಿನ ರಾಘವೇಂದ್ರ ( 32), ಕೆ.ಆರ್.ನಗರದ ಸುಬ್ರಮಣಿ (48), ಚಂದಗಾಲ ನಿವಾಸಿ ಬಸವರಾಜು(30) ಎಂದು ಗುರುತಿಸಲಾಗಿದೆ. ಬಂಧಿತರು ಬೆಂಗಳೂರಿನ ನವೀನ್ ಎಂಬವರನ್ನು ಕೊಲೆ ಮಾಡಲು ಮೈಸೂರಿನ ಕೇಂದ್ರ ಕಾರಾಗೃಹದಲ್ಲಿರುವ ಬಸವರಾಜು ಎಂಬವನಿಗೆ ಸುಪಾರಿ ನೀಡಿರುವುದು ತಿಳಿದುಬಂದಿದೆ. ಬಸವರಾಜು ಈ ಹಿಂದೆಯೇ ಕೊಲೆ ಪ್ರಕರಣವೊಂದರ  ಆರೋಪಿಯಾಗಿದ್ದು ಶಿಕ್ಷೆ ಅನುಭವಿಸುತ್ತಿದ್ದ. ಬಂಧಿತರಿಂದ 6ಮೊಬೈಲ್ ಫೋನ್ ಗಳು, 2ಲಾಂಗ್ ಗಳು, 2ಡ್ರ್ಯಾಗರ್ ಗಳು, ಖಾರದಪುಡಿ, 16,200ರೂ.ಗಳನ್ನು ವಶಪಡಿಸಿಕೊಳ್ಳಲಾಗಿದೆ.

ಪತ್ತೆ ಕಾರ್ಯ ಸಿಸಿಬಿ ಪೊಲೀಸ್ ಇನ್ಸಪೆಕ್ಟರ್ ಪ್ರಸನ್ನಕುಮಾರ್ ನೇತೃತ್ವದಲ್ಲಿ ನಡೆದಿದೆ. (ಕೆ.ಎಸ್-ಎಸ್.ಎಚ್)

Leave a Reply

comments

Related Articles

error: