ಮೈಸೂರು

ಕೊರೋನಾವೈರಸ್ : 10ಮಂದಿ ಚೇತರಿಕೆ: 7ಹೊಸ ಪ್ರಕರಣ; ಸಕ್ರಿಯ 76

ಮೈಸೂರು,ಜೂ.25:- ಜಿಲ್ಲೆಯಲ್ಲಿ ಕೊರೋನಾವೈರಸ್ ನಿಂದ  ಹತ್ತು ಮಂದಿ ಚೇತರಿಸಿಕೊಂಡಿದ್ದು ಕೋವಿಡ್ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. ಆದರೆ ಜಿಲ್ಲೆಯಲ್ಲಿ ಮತ್ತೆ ಏಳು ಮಂದಿಗೆ ಸೋಂಕು ದೃಢಪಟ್ಟಿದೆ.

ತಮಿಳುನಾಡಿನಿಂದ ಬಂದ 19ವರ್ಷದ ಯುವಕ, 30ವರ್ಷದ ಪುರುಷ, 39ವರ್ಷದ ಮಹಿಳೆ, ಆಂದ್ರ ಪ್ರದೇಶದಿಂದ ಬಂದ 23ವರ್ಷದ ಯುವಕ, ಹಾಗೂ ರಾಜಸ್ಥಾನದಿಂದ ಬಂದಿರುವ 30ವರ್ಷದ ಪುರುಷನಿಗೆ, ಪ್ರಾಥಮಿಕ ಸಂಪರ್ಕದಿಂದ 9ವರ್ಷದ ಬಾಲಕಿಗೆ, ಬೆಂಗಳೂರಿನಿಂದ ಬಂದಿದ್ದ ಕೆಎಸ್ ಆರ್ ಪಿ ಸಿಬ್ಬಂದಿಗೆ ಸೋಂಕು ದೃಢಪಟ್ಟಿದ್ದು, ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಹೆಬ್ಬಾಳ 1ನೇ ಹಂತ, ದೇವರಾಜ ಮೊಹಲ್ಲಾದ ಬಿ.ಕೆ.ಸ್ಟ್ರೀಟ್, ದಟ್ಟಗಳ್ಳಿ ಮೂರನೇ ಹಂತದ 11ನೇ ಮುಖ್ಯ ರಸ್ತೆ, ಆರ್ ಬಿಐ ಎ11 ಸಿಐಎಸ್ ಎಫ್ ನ ಕೆಲ ಬ್ಲಾಕ್, ದೇವರಾಜ ಮೊಹಲ್ಲಾದ ಕೊತ್ವಾಲ್ ರಾಮಯ್ಯ ರಸ್ತೆ, ವಿನೋಬಾ ರಸ್ತೆ, ರಾಜ್ ಕಮಲ ಟಾಕೀಸ್ ಹಿಂಭಾಗ, ಸೀಬಯ್ಯ ರಸ್ತೆ, ಶ್ರೀರಾಂಪುರ 2ನೇ ಹಂತ, ಜೆಸಿನಗರ, ಚಾಮುಂಡಿಬೆಟ್ಟದ ರಸ್ತೆ, ನಜರ್ ಬಾದ್ ಮೊಹಲ್ಲಾದ ಕೆಲ ಪ್ರದೇಶ, ಕೆಲವು ಪ್ರದೇಶಗಳನ್ನು ಕಂಟೈನ್ ಮೆಂಟ್ ಜೋನ್ ಗಳೆಂದು ಗುರುತಿಸಲಾಗಿದೆ.

ಮೈಸೂರಿನಲ್ಲೂ ಕೊರೋನಾ ಪ್ರಕರಣ ಹೆಚ್ಚುವ ಸಾಧ್ಯತೆ ಇದೆ. ನಿತ್ಯ ಒಂದಂಕಿ ಇದ್ದ ಪ್ರಕರಣ ಇದೀಗ 20ಕ್ಕೆ ಬಂದು ನಿಂತಿದೆ.ಸಮುದಾಯಕ್ಕೆ ಹರಡುತ್ತಿದೆ ಎಂಬುದನ್ನು ನಾನು ಹೇಳಲಾರೆ ಎಂದು ಜಿಲ್ಲಾಧಿಕಾರಿ ಅಭಿರಾಮ್ ಜಿ,ಶಂಕರ್ ತಿಳಿಸಿದ್ದಾರೆ.

ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ 85ವರ್ಷದ ವೃದ್ಧರೋರ್ವರು ಮೃತಪಟ್ಟಿದ್ದು ಕೋವಿಡ್-19 ಶಂಕೆ ವ್ಯಕ್ತವಾಗಿದೆ. ಇದಿನ್ನೂ ಖಚಿತವಾಗಿಲ್ಲ. ರಾಜ್ಯ ಸರ್ವೇಕ್ಷಣಾ ಘಟಕಕ್ಕೆ ವಿವರ ಕಳುಹಿಸಲಾಗಿದೆ. ಅವರು ಖಚಿತಪಡಿಸಿದ ಮೇಲೆ ಏನೆಂಬುದನ್ನು ಹೇಳಬಹುದೆಂದು ಜಿಲ್ಲಾಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಜಿಲ್ಲೆಯಲ್ಲಿ 76ಸಕ್ರಿಯ ಪ್ರಕರಣಗಳಿವೆ. ಇದುವರೆಗೆ 198ಪ್ರಕರಣಗಳು ವರದಿಯಾಗಿದ್ದು, 122ಮಂದಿ ಗುಣಮುಖರಾಗಿದ್ದಾರೆ. 1,418ಮಂದಿಯನ್ನು 14ದಿನಗಳ ಹೋಂಕ್ವಾರೆಂಟೈನ್ ಹಾಗೂ 285ಮಂದಿಯನ್ನು 7ದಿನಗಳ ಫೆಸಿಲಿಟಿ ಕ್ವಾರೆಂಟೈನ್ ಮಾಡಲಾಗಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: