Uncategorized

ನಾಗಾಲ್ಯಾಂಡ್ ನಲ್ಲಿ 12 ಯೋಧರಿಗೆ ಕೊರೊನಾ ಸೋಂಕು

ಕೊಹಿಮಾ,ಜೂ.25-ನಾಗಾಲ್ಯಾಂಡ್‌ನ ಕೊಹಿಮಾ ಜಿಲ್ಲೆಯಲ್ಲಿ 12 ಯೋಧರಿಗೆ ಕೋವಿಡ್-19 ದೃಢಪಟ್ಟಿದೆ. ಇದರಿಂದ ಸೇನೆಯಲ್ಲಿ ಸೋಂಕಿತರ ಸಂಖ್ಯೆ 15ಕ್ಕೆ ಏರಿಕೆಯಾಗಿದೆ. ಅಲ್ಲದೆ, ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 347ಕ್ಕೆ ಏರಿಕೆಯಾಗಿದೆ.

ಇಲ್ಲಿನ ಜಖಾಮಾ ಸೇನಾ ಕ್ಯಾಂಪ್‌ನ ಕ್ವಾರಂಟೈನ್ ಕೇಂದ್ರದಲ್ಲಿದ್ದ 12 ಯೋಧರಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಕಳೆದ ವಾರ ದೇಶದ ವಿವಿಧ ಭಾಗಗಳಿಂದ ಜಖಾಮಾ ಸೇನಾ ಶಿಬಿರಕ್ಕೆ ಯೋಧರ ಗುಂಪು ವಾಪಸಾಗಿತ್ತು. ಸೇನಾ ನಿಯಮಗಳ ಪ್ರಕಾರ ಇವರನ್ನು ಕ್ವಾರಂಟೈನ್‌ನಲ್ಲಿ ಇರಿಸಲಾಗಿತ್ತು. ಈ ಮುನ್ನ ಕ್ಯಾಂಪ್‌ನಲ್ಲಿ ಮೂವರಿಗೆ ಕೋವಿಡ್ ಇತ್ತು.

ಎಲ್ಲ 15 ಸೋಂಕಿತರನ್ನು ಜಖಾಮಾದ ಸೇನಾ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಇವರಿಗೆ ರೋಗ ಲಕ್ಷಣಗಳು ಕಂಡುಬಂದಿಲ್ಲ ಎಂದು ಮೂಲಗಳು ತಿಳಿಸಿವೆ. ಈ 15 ಜನರ ಸಂಪರ್ಕಿತರನ್ನು ಪತ್ತೆ ಹೆಚ್ಚುವ ಕೆಲಸ ಆರಂಭಿಸಲಾಗಿದೆ. (ಎಂ.ಎನ್)

Leave a Reply

comments

Related Articles

error: