ಕರ್ನಾಟಕಮನರಂಜನೆ

ಕೊರೊನಾ ಆತಂಕದಲ್ಲಿ ನಟ ರವಿಶಂಕರ್ ಗೌಡ ಕುಟುಂಬ: ಧೈರ್ಯ ತುಂಬಿದ ಸುದೀಪ್, ಗಣೇಶ್, ಸೃಜನ್

ಬೆಂಗಳೂರು,ಜೂ.25-ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಲೇ ಇದೆ. ಈ ನಡುವೆ ಕೊರೊನಾ ಆತಂಕ ಇದೀಗ ಸ್ಯಾಂಡಲ್ ವುಡ್ ಕಲಾವಿದರನ್ನು ಕಾಡುತ್ತಿದೆ.

ಕಿಚ್ಚ ಸುದೀಪ್ ಮನೆಯ ಪಕ್ಕದ ಮನೆಯಲ್ಲಿ ಕೊರೊನಾ ಪಾಸಿಟಿವ್ ಬಂದಿದೆ. ದರ್ಶನ್ ಪತ್ನಿ ವಿಜಯಲಕ್ಷ್ಮೀ, ನಟ ರವಿಶಂಕರ್ ಗೌಡ ವಾಸವಿರುವ ಹೊಸಕೆರೆಹಳ್ಳಿ ಸಮೀಪ ಇರುವ ಪ್ರೆಸ್ಟೀಜ್ ಅಪಾರ್ಟ್ ಮೆಂಟ್ ನಲ್ಲಿಯೂ ಕೊರೊನಾ ಪಾಸಿಟಿವ್ ಬಂದಿದೆ. ಇದರಿಂದ ಇವರೆಲ್ಲರಲ್ಲೂ ಆತಂಕ ಶುರುವಾಗಿದೆ.

ರವಿಶಂಕರ್ ಅವರ ಮನೆಯ ಎದುರು ಮನೆಯವರೊಬ್ಬರಿಗೆ ಕೊರೊನಾ ಪಾಸಿಟಿವ್ ಬಂದಿದೆ. ಹೀಗಾಗಿ ರವಿಶಂಕರ್ ಕುಟುಂಬದಲ್ಲಿ ಆತಂಕ ಮನೆಮಾಡಿದೆ. ಭಯದಲ್ಲಿರುವ ರವಿಶಂಕರ್ ಅವರಿಗೆ ನಟ ಸುದೀಪ್, ಗಣೇಶ್, ಸೃಜನ್ ಲೋಕೇಶ್ ಮತ್ತು ರಘುರಾಮ್ ಧೈರ್ಯ ತುಂಬಿದ್ದಾರೆ. ಅಲ್ಲದೆ ಸುದೀಪ್ ಮತ್ತು ಗಣೇಶ್ ಮಕ್ಕಳನ್ನು ಕರೆದುಕೊಂಡು ಮನೆಗೆ ಬಾ ಎಂದು ಕರೆದಿದ್ದಾರೆ.

ಈ ಬಗ್ಗೆ ರವಿಶಂಕರ್ ಸೋಯಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. `ನಮ್ಮ ಅಪಾರ್ಟ್‌ಮೆಂಟ್‌ನಲ್ಲಿ ನನ್ನ ಎದುರುಗಡೆಯ ಮನೆಗೆ ಕೊರೊನಾ ವೈರಸ್ ಒಕ್ಕರಿಸಿದೆ. ನನ್ನ ಮಕ್ಕಳಿರುವ ಮನೆಯನ್ನು ದೇವರೇ ಕಾಪಾಡಬೇಕು. ಎಚ್ಚರ ಸ್ನೇಹಿತರೇ, ಎಚ್ಚರ. ನಾವೀಗ ನಮ್ಮ ಮನೆಯ ಬಾಗಿಲನ್ನು 14 ದಿನ ತೆರೆಯುವಂತೆಯೇ ಇಲ್ಲ. ದಿಗ್ಬಂಧನ (Quarantin) ಆಗಿದೆ. ಸುದೀಪ್, ಗಣಪ, ಸೃಜನ್ ಮಕ್ಕಳನ್ನು ಕರೆದುಕೊಂಡು ನಮ್ಮ ಮನೆಗೆ ಬಂದುಬಿಡು ಎಂದರು. ವಾವ್! ಇದಲ್ಲವೇ ಗೆಳೆತನ ಅಂದರೆ. ಹಾಗೆ ಕುಟುಂಬವನ್ನು ವಿಚಾರಿಸಿದ ಸಂತೋಷ್ ಆನಂದ್‌ರಾಮ್, ರಘುರಾಮ್ ಅವರಿಗೆ ಧನ್ಯವಾದಗಳು. ರಾಜೇಶ್ ನಟರಂಗ, ಅಲಾಕಾನಂದ, ಚಂದ್ರ ಮಯೂರ, ಶ್ರೀಕಾಂತ್‌ ಹೆಬ್ಳೀಕರ್ ಅವರಿಗೂ ಧನ್ಯವಾದಗಳು’ ಎಂದು ರವಿಶಂಕರ್ ಇನ್ ಸ್ಟಾಗ್ರಾಮ್ ನಲ್ಲಿ ಬರೆದುಕೊಂಡಿದ್ದಾರೆ.

ನಿರ್ದೇಶಕ ರಘುರಾಮ್, ರವಿ ಜೀ ನೀವು ರಾಯರ ಭಕ್ತ ಅವರ ಆಶೀರ್ವಾದ ನಿಮ್ಮ ಮೇಲೆ ಇರುವವರೆಗೂ ನೀವು ಹಾಗು ನಿಮ್ಮ ಕುಟುಂಬ ಸದಾ ಸುರಕ್ಷಿತ ಎಂದು ಟ್ವೀಟ್ ಮಾಡಿ ಧೈರ್ಯ ಹೇಳಿದ್ದಾರೆ.

ಸಹೃದಯದ ಅಣ್ಣ ತಮ್ಮಂದಿರೆ, ನನ್ನ ಹಾಗೂ ನನ್ನ ಕುಟುಂಬದ ಮೇಲೆ ಅಭಿಮಾನವಿಟ್ಟು ನಿಮ್ಮ ಅಂತರಾತ್ಮದಿಂದ ಹರಸಿದ್ದೀರಿ, ನಿಮ್ಮೆಲ್ಲರ ಹೊಟ್ಟೆ ತಣ್ಣಗಿರಲಿ. ನಿಮ್ಮ ಕುಟುಂಬಕ್ಕೂ ದೇವರ ಆಶೀರ್ವಾದವಿರಲಿ. ನಮಸ್ಕಾರ ಎಂದು ಧೈರ್ಯ ತುಂಬಿದ ಸೇಹ್ನಿತರಿಗೆ, ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದ್ದಾರೆ.

ಇನ್ನು ದರ್ಶನ್ ಪತ್ನಿ ವಿಜಯಲಕ್ಷ್ಮೀ ಅವರಿಗೂ ಕೊರೊನಾ ಸೋಂಕು ತಗುಲಿದೆ ಎಂಬ ಸುದ್ದಿ ಹರಿದಾಡಿತ್ತು. ಈ ಬಗ್ಗೆ ಟ್ವೀಟ್ ಮಾಡಿದ್ದ ವಿಜಯಲಕ್ಮೀ, ನನಗೆ ಕೊರೊನಾ ವೈರಸ್ ಸೋಂಕು ತಗುಲಿಲ್ಲ. ನಾನು ಚೆನ್ನಾಗಿಯೇ ಇದ್ದೇನೆ. ಎಲ್ಲರೂ ಈ ಕಷ್ಟದ ಸಮಯದಲ್ಲಿ ಸುರಕ್ಷಿತವಾಗಿರಿ ಎಂದಿದ್ದರು. (ಎಂ.ಎನ್)

 

Leave a Reply

comments

Related Articles

error: