ಮೈಸೂರು

ಕಾರು ಉರುಳಿ ಐವರ ದುರ್ಮರಣ

ಕಾರು ಉರುಳಿದ ಪರಿಣಾಮ ಐವರು ಸ್ಥಳದಲ್ಲೇ  ಮೃತಪಟ್ಟಿರುವ ಘಟನೆ ಮೈಸೂರು ಜಿಲ್ಲೆ ಹುಣಸೂರಿನ ಹೆಚ್.ಡಿ.ಕೋಟೆ ಮುಖ್ಯ ರಸ್ತೆಯಲ್ಲಿ ನಡೆದಿದೆ.
ಹುಣಸೂರು – ಹೆಚ್.ಡಿ.ಕೋಟೆ ಮಾರ್ಗದ  ನಲ್ಲೂರು ಪಾಲಾ ಗ್ರಾಮದ ಬಳಿ ಈ ದುರಂತ ನಡೆದಿದೆ. ಚಾಲಕನ ಅತಿ ವೇಗದ ಚಾಲನೆಯಿಂದ ಕಾರು ಉರುಳಿ ಈ ದುರಂತ ಸಂಭವಿಸಿದೆ ಎನ್ನಲಾಗಿದೆ.  ಭೀಕರ ಅಪಘಾತದಲ್ಲಿ  ಐದು ಮಂದಿ ದುರ್ಮರಣಕ್ಕೀಡಾಗಿದ್ದು, ಮೂವರ ಸ್ಥಿತಿ ಗಂಭೀರವಾಗಿದೆ  ಎಂದು ಹೇಳಲಾಗುತ್ತಿದೆ. ಮೃತಪಟ್ಟ  ವ್ಯಕ್ತಿಗಳು ಬೆಂಗಳೂರು ಹೊಸ್ಕೆರೆಹಳ್ಳಿ ನಿವಾಸಿಗಳು ಎಂದು ಗುರುತಿಸಲಾಗಿದ್ದು, ಸ್ಥಳಕ್ಕೆ ಹುಣಸೂರು ಠಾಣಾ ಪೊಲೀಸರು ದೌಡಾಯಿಸಿ ಪರಿಶೀಲನೆ ನಡೆಸುತ್ತಿದ್ದಾರೆ.

ಮೂವರ ಹೆಸರು ಪತ್ತೆಯಾಗಿದ್ದು, ಘೋರ್ಪಡೆ ರಂಜನ್, ಕಿಶೋರ್ ಯಾದವ್, ಕೌಶಿಕ್ ಚೌಹಾಣ್ ಎಂದು ಹೇಳಲಾಗಿದೆ. (ಎಸ್.ಎನ್-ಎಸ್.ಎಚ್)

Leave a Reply

comments

Related Articles

error: