ನಮ್ಮೂರುಮೈಸೂರು

ಖಾತೆ ಬದಲಾವಣೆಗೆ ಅಡ್ಡಿ : ಭೂಮಾಫಿಯ ಕೈವಾಡ ಶಂಕೆ

ನಾಗರಾಜು ಎಂಬುವವರು ತಮ್ಮ ಮೃತ ತಾಯಿಯ ಹೆಸರಿನಲ್ಲಿದ್ದ 3 ಎಕರೆ 19 ಗುಂಟೆ ಜಮೀನನ್ನು ತಮ್ಮ ಹೆಸರಿಗೆ ವರ್ಗಾಯಿಸಲು ಕೋರಿ ಕಳೆದ ಮೂರು ವರ್ಷಗಳಿಂದ ಕಚೇರಿಗಳಿಗೆ ಅಲೆಯುತ್ತಿದ್ದು ಸಂಬಂಧಿಸಿದ ಅಧಿಕಾರಿಗಳು ನಿರ್ಲಕ್ಷ್ಯೆ ಧೋರಣೆ ತೋರಿದ್ದು ಪ್ರಸ್ತುತ ಜಮೀನನ್ನು ಬೇರೆಯವರಿಗೆ ವರ್ಗಾಯಿಸಿ ಭೂ ಮಾಫಿಯಾಗಳೊಂದಿಗೆ ಕೈ ಜೋಡಿಸಿದ್ದಾರೆ ಎಂದು ಆರೋಪಿಸಿದರು.

ಅವರು ನಗರದಲ್ಲಿ ಸೆ.28ರಂದು ಪತ್ರಕರ್ತರ ಭವನದಲ್ಲಿ ಸುದ್ಧಿಗೋಷ್ಠಿ ನಡೆಸಿ ಮೈಸೂರು ತಾಲೂಕು ಚಿಕ್ಕಹರದನಹಳ್ಳಿ ಕಸಬಾ ಹೋಬಳಿ ಸರ್ವೆ ನಂ.44/1ಸಿಯ 3 ಎಕರೆ 19 ಗುಂಟೆ ಜಮೀನಿನ  ಪೌತಿಖಾತೆ ಬದಲಾವಣೆ ತಹಸೀಲ್ದಾರರು ಕಾನೂನಿನಂತೆ ಮಾಡುತ್ತಿಲ್ಲ ಈ ಬಗ್ಗೆ ರಾಜ್ಯ ಉಚ್ಚನ್ಯಾಯಾಲಯದಲ್ಲಿ ವಿಚಾರಣೆ ನಡೆದು ತಹಸೀಲ್ದಾರ್ ನವೀನ್ ಜೋಸೆಫ್ ಅವರಿಗೆ ಎರಡು ತಿಂಗಳೊಳಗೆ ಇತ್ಯಾರ್ಥಗೊಳಿಸುವಂತೆ ಸೂಚಿಸಿದ್ದರು. ಅವರು ನ್ಯಾಯಾಂಗದ ಆದೇಶವನ್ನು ನಿರ್ಲಕ್ಷಿಸಿದ್ದಾರೆ. ಪ್ರಸ್ತುತ 1968-69ರ ಪಾಣಿಯನ್ನು ತಿದ್ದಲಾಗಿದ್ದು ಚಾನ್ ಡಿಮೆಲ್ ಗೆ 3 ಗುಂಟೆ ಹಾಗೂ ಆರ್.ಚಿನ್ನಪ್ಪರೆಡ್ಡಿಗೆ 16 ಗುಂಟೆ ಮಾಡಲಾಗಿದೆ. ರಾಜಕಾರಣಿಗಳು ಹಾಗೂ ಸರ್ಕಾರಿ ಅಧಿಕಾರಿಗಳು ದೌರ್ಜನ್ಯವೆಸಗಿ ಕಬಳಿಸಲು ಪ್ರಯತ್ನ ನಡೆಸಿದ್ದು ಭೂಮಿಯಲ್ಲಿದ್ದ ಮರಗಳನ್ನೇ ಏಕಾಏಕಿ ಮಾರಣ ಹೋಮ ಮಾಡಿ ಹೈಕೋರ್ಟ್ ಆದೇಶವನ್ನು ಉಲ್ಲಂಘಿಸಲಾಗಿದ್ದು ಸರ್ಕಾರಿ ಅಧಿಕಾರಿಗಳ ಈ ಧೋರಣೆಯ ಹಿಂದೆ ಭೂ ಮಾಫಿಯದ ಕೈವಾಡವಿದೆ ಎಂದು ದೂರಿದರು.

ಸುದ್ಧಿಗೋಷ್ಠಿಯಲ್ಲಿ ಕನ್ನಡ ಚಳುವಳಿಗಾರ ಭೋಗನಂದೀಶ್, ಸಮಾಜಸೇವಕ ಪ್ರಕಾಶ್ ಡಿ. ಹಾಗೂ ಸಿದ್ದರಾಮಪ್ಪ ಹಾಜರಿದ್ದರು.

Leave a Reply

comments

Tags

Related Articles

error: