ಕರ್ನಾಟಕಪ್ರಮುಖ ಸುದ್ದಿ

ಬಳ್ಳಾರಿಯಲ್ಲಿ ಕೊರೊನಾ ಸೋಂಕಿತ ಗರ್ಭಿಣಿಯರಿಬ್ಬರಿಗೆ ಹೆರಿಗೆ: ಗಂಡು ಮಗು ಜನನ

ಬಳ್ಳಾರಿ,ಜೂ,25-ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಕೊರೊನಾ ಸೋಂಕಿತ ಗರ್ಭಿಣಿಯರಿಬ್ಬರಿಗೆ ಹೆರಿಗೆಯಾಗಿದ್ದು, ತಾಯಿ-ಮಕ್ಕಳು ಆರೋಗ್ಯವಾಗಿದ್ದಾರೆ.

ಇಂದು ಬಳ್ಳಾರಿ ನೆಹರೂ ಕಾಲೋನಿಯ ರೋಗಿ ಸಂಖ್ಯೆ-6416, 29 ವರ್ಷದ ಕೊರೊನಾ ಸೋಂಕಿತ ಮಹಿಳೆಗೆ ಹೆರಿಗೆಯಾಗಿದ್ದು, ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ತಾಯಿ-ಮಗು ಆರೋಗ್ಯವಾಗಿದ್ದು, ಮಗು 2.8ಕೆಜಿ ತೂಕ ಇದೆ.

ಗರ್ಭಿಣಿಯ ಪತಿ ಎರಡು ದಿನಗಳ ಹಿಂದೆಯೇ ಸೋಂಕಿನಿಂದ ಗುಣಮುಖರಾಗಿ ಮನೆಗೆ ತೆರಳಿದ್ದರು. ಈ ಮಹಿಳೆಯಲ್ಲಿ ಕೊರೊನಾ ಪಾಸಿಟಿವ್ ಇದ್ದರೂ ಸಹ ಯಾವುದೇ ರೀತಿಯ ಸೋಂಕಿನ ಲಕ್ಷಣಗಳು ಇಲ್ಲ.

ನಿನ್ನೆ ರಾತ್ರಿ ರಾಯದುರ್ಗದ ರೋಗಿ ಸಂಖ್ಯೆ-7094, 28 ವರ್ಷದ ಮಹಿಳೆಗೆ ಸಾಮಾನ್ಯ ಹೆರಿಯಾಗಿದ್ದು, ಗಂಡು ಮಗು ಜನಿಸಿದೆ. ತಾಯಿ-ಮಗು ಆರೋಗ್ಯವಾಗಿದ್ದು, ಮಗು 3.2 ಕೆಜಿ ತೂಕ ಹೊಂದಿದೆ. ಈ ಮಹಿಳೆಯಲ್ಲೂ ಕೂಡ ಕೊರೊನಾ ಸೋಂಕು ದೃಢಪಟ್ಟಿದ್ದರೂ ಯಾವುದೇ ರೀತಿಯ ಸೋಂಕಿನ ಲಕ್ಷಣಗಳು ಇಲ್ಲ. ಪತಿಯಿಂದ ಮಹಿಳೆಗೆ ಸೊಂಕು ಹರಡಿದ ಹಿನ್ನೆಲೆಯಿದ್ದು, ಅವರು ಸಹ ಕೆಲದಿನಗಳ ಹಿಂದೆ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದರು.

ಮಕ್ಕಳ ಆರೋಗ್ಯ ನೋಡಿಕೊಂಡು ಸ್ವ್ಯಾಬ್ ಟೆಸ್ಟ್ ಮಾಡಿಸುವುದಕ್ಕೆ ಸಂಬಂಧಿಸಿದಂತೆ ಸಮಿತಿ ನಿರ್ಣಯದ ಅನುಸಾರ ಕ್ರಮಕೈಗೊಳ್ಳಲಾಗುವುದು. ಆಸ್ಪತ್ರೆಯಲ್ಲಿ ಇನ್ನೂ 8 ಜನ ಕೊರೊನಾ ಸೋಂಕಿತ ಗರ್ಭಿಣಿಯರಿದ್ದು, ಅವರ ಮೇಲೂ ವಿಶೇಷ ನಿಗಾವಹಿಸಲಾಗಿದೆ ಎಂದು ಡಾ.ಎನ್.ಬಸರೆಡ್ಡಿ ತಿಳಿಸಿದ್ದಾರೆ. (ಎಂ.ಎನ್)

Leave a Reply

comments

Related Articles

error: