ಮೈಸೂರು

ವಿಪ್ರ ಯುವಕರು ಪ್ರತಿಯೊಂದು ಕ್ಷೇತ್ರದಲ್ಲೂ ಮುಂದೆ ಬರಬೇಕು : ರಿಯಲ್ ಸ್ಟಾರ್ ಉಪೇಂದ್ರ

ಮೈಸೂರು ನಗರ ಹಾಗೂ ಜಿಲ್ಲಾ ಬ್ರಾಹ್ಮಣ ಸಂಘದ ವತಿಯಿಂದ ನಾರಾಯಣ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ಸಂಯುಕ್ತಾಶ್ರಯದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ನಗರದ ಕೃಷ್ಣಮೂರ್ತಿಪುರಂ ರಾಮಮಂದಿರದಲ್ಲಿ ಆಯೋಜಿಸಲಾಗಿತ್ತು, ಆರೋಗ್ಯ ತಪಾಸಣೆ ಶಿಬಿರಕ್ಕೆ ಚಿತ್ರನಟ ಹಾಗೂ ನಿರ್ದೇಶಕ ಉಪೇಂದ್ರರವರು ಚಾಲನೆ ನೀಡಿದರು.

ಇದೇ ಸಂದರ್ಭದಲ್ಲಿ ಆರೋಗ್ಯ ತಪಾಸಣೆ ಶಿಬಿರವನ್ನು ಉದ್ಘಾಟಿಸಿದ ಚಿತ್ರನಟ ಉಪೇಂದ್ರ ಮಾತನಾಡಿ ಬ್ರಾಹ್ಮಣರೆಂದರೇ ಭೋಜನಪ್ರಿಯರು ಅಷ್ಟೇ ಅಲ್ಲದೇ ಬಹುಜನ ಪ್ರಿಯರು ಇಂದಿನ ತಂತ್ರಜ್ಞಾನದ ಯುಗದಲ್ಲಿ ಬ್ರಾಹ್ಮಣರ ಪ್ರತಿಭೆಗೆ ಬುದ್ಧಿವಂತಕ್ಕೆ ಅಪಾರ ಮೌಲ್ಯವಿದೆ, ಅದ್ಬುತ ಆಹಾರವೆಂದರೆ ಉಪ್ಪಿಗಿಂತ ರುಚಿಯಿಲ್ಲ, ಜೊತೆಯಲ್ಲೆ ಉತ್ತಮ ಆರೋಗ್ಯವಿದ್ದರೇ ಅದಕ್ಕಿಂತ ಭಾಗ್ಯವಂತರು ಮತ್ತೊಬ್ಬರಿಲ್ಲ ವಿಪ್ರಯುವಕರು ಪ್ರತಿಯೊಂದು ಕ್ಷೇತ್ರದಲ್ಲೂ ಮುಖ್ಯವಾಹಿನಿಗೆ ಬರಬೇಕು ಎಂದು ಕರೆ ನೀಡಿದರು.

ನಂತರ ಬ್ರಾಹ್ಮಣ ಸಂಘದ ಅಧ್ಯಕ್ಷ ಡಿಟಿ. ಪ್ರಕಾಶ್  ಮಾತನಾಡಿ ಮೈಸೂರಿನಲ್ಲಿ ಬ್ರಾಹ್ಮಣ ಸಂಘಟಿತರು ಕಾರ್ಯೋನ್ಮುಖವಾಗಿ ಬೇರು ಮಟ್ಟದಿಂದ ಬಲಿಷ್ಠವಾಗಿದ್ದಾರೆ ಉಪೇಂದ್ರ ರವರಿಗೆ ನಮ್ಮ ಬ್ರಾಹ್ಮಣ ಸಮುದಾಯದ ಮೇಲೆ ಅತಿಯಾದ ಕಾಳಜಿಯಿದ್ದು ನೂರಾರು ವಿಪ್ರರನ್ನು ಬೆಳಸಿದ್ದಾರೆ ಮುಂದಿನ ದಿನಗಳಲ್ಲಿ ವಿಪ್ರ ಉದ್ಯೋಗ ಮೇಳವನ್ನು ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.

ಆರೋಗ್ಯ ತಪಾಸಣಾ ಶಿಬಿರದಲ್ಲಿ ಬಿಪಿ, ಶುಗರ್, ಇಸಿಜಿ ನಡೆಸಲಾಯಿತು
ಸ್ಕ್ರೀನಿಂಗ್, ಜಿ.ಆರ್.ಬಿ.ಎಸ್, ಪ್ಯಾಪ್ ಸ್ಮಿಯರ್, ಮ್ಯಾಮೊಗ್ರಾಂ ಸೇರಿದಂತೆ ವೈದ್ಯರೊಂದಿಗೆ ಸುಮಾರು ಸಾವಿರ ಸಂಖ್ಯೆ ಯ ಸಾರ್ವಜನಿಕರು ಈ ಸದುಪಯೋಗ ಪಡೆದುಕೊಂಡರು.

ಕಾರ್ಯಕ್ರಮದಲ್ಲಿ  ನಾರಾಯಣ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ಡಾ.ರವಿ ಮತ್ತು ಡಾ.ರಾಜೇಂದ್ರ ಡಾ.ಲಕ್ಷ್ಮಿ ದೇವಿ, ಮಾಜಿ ನಗರ ಪಾಲಿಕೆ ಸದಸ್ಯ ಪಾರ್ಥಸಾರಥಿ, ಗೋಪಾಲ್ ರಾವ್, ಅಪೂರ್ವ ಸುರೇಶ್, ಹರೀಶ್, ಬಾಲಕೃಷ್ಣ, ಮಂಜುನಾಥ್, ಎನ್ ಕೆ ಸುಂದರ್, ಮುಳ್ಳೂರು ಗುರುಪ್ರಸಾದ್, ಅಜಯ್ ಶಾಸ್ತ್ರಿ, ವಿಕ್ರಂ ಅಯ್ಯಂಗಾರ್, ಕಡಕೊಳ ಜಗದೀಶ್, ಶ್ರೀನಿಧಿ ವಸಿಷ್ಠ, ಕಾವ್ಯಶ್ರೀ, ಜ್ಯೋತಿ, ಕಾಂತಮಣಿ, ಆಶಾ ಡೋಂಗ್ರೆ, ಮಾಧುರಾವ್, ಬ್ರಹ್ಮಣ್ಯ ತೀರ್ಥ, ಮುಂತಾದವರು ಭಾಗವಹಿಸಿದ್ದರು. (ಬಿ.ಎಂ-ಎಸ್.ಎಚ್)

Leave a Reply

comments

Related Articles

error: