ಕ್ರೀಡೆಪ್ರಮುಖ ಸುದ್ದಿ

ಲಾಕ್‌ಡೌನ್ ನಿಯಮ ಉಲ್ಲಂಘನೆ : ಕ್ರಿಕೆಟಿಗ ರಾಬಿನ್ ಸಿಂಗ್   ಕಾರು ವಶಕ್ಕೆ

ದೇಶ(ನವದೆಹಲಿ)ಜೂ.26:- ಕೊರೋನಾ ವೈರಸ್ ಸಾಂಕ್ರಾಮಿಕವು ಜೀವನ ವಿಧಾನದಲ್ಲಿ ಹೊಸ ನಿಯಮಗಳೊಂದಿಗೆ ಬದುಕಲು ಕಲಿಸಿದೆ. ಪ್ರಸ್ತುತ ಪರಿಸ್ಥಿತಿಯ ಆಧಾರದ ಮೇಲೆ ವಿವಿಧ ರಾಜ್ಯಗಳು ವಿಭಿನ್ನ ಲಾಕ್‌ಡೌನ್ ನಿಯಮಗಳನ್ನು ಆರಿಸಿಕೊಂಡಿವೆ. ಕೊರೋನಾ ವೈರಸ್ ಸಾಂಕ್ರಾಮಿಕ ರೋಗದಿಂದಾಗಿ ಒಂದು ವಲಯ ಎಷ್ಟು ಪರಿಣಾಮ ಎಂಬುದನ್ನು ವಿವರಿಸಲು ಪ್ರತ್ಯೇಕ ವಲಯಗಳನ್ನು ಸಹ ರಚಿಸಲಾಗಿದೆ.

ಭಾರತದಲ್ಲಿ   ಪ್ರಕರಣಗಳು ನಿರಂತರವಾಗಿ ಹೆಚ್ಚುತ್ತಿರುವುದರಿಂದ ಭಾರತದ ಪರಿಸ್ಥಿತಿ ದಿನದಿಂದ ದಿನಕ್ಕೆ ಹದಗೆಡುತ್ತಿದೆ.  ಮಾಧ್ಯಮ ವರದಿಗಳ ಪ್ರಕಾರ ಮೊದಲ ಬಾರಿಗೆ ಚೆನ್ನೈನಲ್ಲಿ ಲಾಕ್ ಡೌನ್ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಕ್ರಿಕೆಟಿಗ  ರಾಬಿನ್ ಸಿಂಗ್ ಅವರ ಕಾರನ್ನು ಸ್ಥಳೀಯ ಪೊಲೀಸರು ವಶಪಡಿಸಿಕೊಂಡಿದ್ದಾರೆ .

ವರದಿಯೊಂದರ ಪ್ರಕಾರ   ಈಸ್ಟ್ ಕೋಸ್ಟ್ ರಸ್ತೆಯಲ್ಲಿ (ಇಸಿಆರ್) ರಾಬಿನ್ ಸಿಂಗ್ ವಾಹನ ಚಲಾಯಿಸುತ್ತಿದ್ದರು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಅವರು ಕಾರಿನಲ್ಲಿ ಪ್ರಯಾಣಿಸಲು ಕಾರಣವಿರುವಂತಹ ಯಾವುದೇ ಕಡ್ಡಾಯ ಇ-ಪಾಸ್ ಇರಲಿಲ್ಲ ಎನ್ನಲಾಗಿದೆ. ರಾಬಿನ್ ಉತ್ತಾಂಡಿಯಲ್ಲಿ   ತರಕಾರಿಗಳನ್ನು ಖರೀದಿಸಲು ಕಾರಿನಲ್ಲಿ ತೆರಳಿದ್ದರೆಂದು ಆರೋಪಿಸಲಾಗಿದೆ.

ರಾಬಿನ್ ಸಿಂಗ್ ಸಾಕಷ್ಟು ವಿನಮೃರಾಗಿದ್ದರು ಎಂದು ಪೊಲೀಸ್ ಅಧಿಕಾರಿ ಹೇಳಿದ್ದು, ನಾವು ಅವರ ಕಾರನ್ನು ಲಾಕ್‌ಡೌನ್ ಬ್ರೇಕರ್ ಎಂದು ವಶಪಡಿಸಿಕೊಂಡಿದ್ದೇವೆ. ಈ ಸಮಯದಲ್ಲಿ  ಮನೆಯ 2 ಕಿ.ಮೀ ಪ್ರದೇಶದಲ್ಲಿ ಮಾತ್ರ ನೀವು ಪ್ರಯಾಣಿಸಬಹುದು ಎಂದು ವಿವರಿಸಿದ್ದೇವೆ ಎಂದಿದ್ದಾರೆ.

ರಾಬಿನ್ ಸಿಂಗ್ ಭಾರತಕ್ಕಾಗಿ ಒಂದು ಟೆಸ್ಟ್ ಮತ್ತು 136 ಏಕದಿನ ಪಂದ್ಯಗಳನ್ನು ಆಡಿದ್ದಾರೆ. ತಮ್ಮ ವೃತ್ತಿಜೀವನದಲ್ಲಿ 69 ವಿಕೆಟ್ ಗಳಿಸುವುದರ ಹೊರತಾಗಿ, ಏಕದಿನ ಪಂದ್ಯಗಳಲ್ಲಿ 2336 ರನ್ ಗಳಿಸಿದ್ದರು,   (ಏಜೆನ್ಸೀಸ್,ಎಸ್.ಎಚ್)

 

Leave a Reply

comments

Related Articles

error: