ಕರ್ನಾಟಕಮನರಂಜನೆ

ಮೇಘನಾ ರಾಜ್ ರನ್ನು ಭೇಟಿಯಾಗಿ ಧೈರ್ಯ ತುಂಬಿದ ಸಿದ್ದರಾಮಯ್ಯ ಸೊಸೆ, ನಟ ಪ್ರಥಮ್

ಬೆಂಗಳೂರು,ಜೂ.26-ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸೊಸೆ ಸ್ಮಿತಾ ರಾಕೇಶ್, ಮೇಘನಾ ರಾಜ್ ಅವರನ್ನು ಭೇಟಿಯಾಗಿ ಸಾಂತ್ವನ ಹೇಳಿ ಧೈರ್ಯ ತುಂಬಿದ್ದಾರೆ.

ಮೇಘನಾ ರಾಜ್ ಅವರ ಮನೆಗೆ ತೆರಳಿ ಮೇಘನಾ ಅವರ ಆರೋಗ್ಯ ವಿಚಾರಿಸಿ ಧೈರ್ಯ ತುಂಬಿದ್ದಾರೆ. ಕೆಲ ಹೊತ್ತು ಮೇಘನಾ ಜೊತೆ ಸಮಯ ಕಳೆದಿದ್ದಾರೆ.

ಸ್ಮಿತಾ ಅವರಿಗೆ ಬಿಗ್​ಬಾಸ್​ ರಿಯಾಲಿಟಿ ಶೋ ವಿಜೇತ, ನಟ ಪ್ರಥಮ್​ ಸಾಥ್​ ನೀಡಿದರು. ಮೇಘನಾ ಅವರನ್ನು ಭೇಟಿಯಾದ ಫೋಟೋಗಳನ್ನು ಪ್ರಥಮ್​ ತಮ್ಮ ಫೇಸ್​ಬುಕ್​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಭೇಟಿಯ ಬಗ್ಗೆ ಅನಾವಶ್ಯಕ ಕಲ್ಪನೆ ಬೇಡ. ಒಂದು ವಿಶೇಷ ಮನವಿ. ಸಂಬಂಧವೇ ಇರದ ಗಾಸಿಪ್ ಗಳು, ಇಲ್ಲಸಲ್ಲದ ವಿಚಾರ ಯೂಟ್ಯೂಬ್ ನಲ್ಲಿ ಹಾಕೋ ಮುಂಚೆ ಒಂದು ಸಲ ಮೇಘನಾ ರಾಜ್ ಬಗ್ಗೆ ಯೋಚಿಸಿ. ಮೇಘನಾ ಅವರ ಭಾವನೆಗಳನ್ನು ಗೌರವಿಸಿ. ಎಲ್ಲಿಯೂ ಮಾತನಾಡದ ಸ್ಮಿತಾ ಮೇಡಮ್ ಬಹಳಷ್ಟು ವಿಚಾರಗಳನ್ನು ಅಕ್ಕನ ಜಾಗದಲ್ಲಿ ನಿಂತು ಮೇಘನಾರ ಜೊತೆ ಮಾತನಾಡಿದ್ದಾರೆ. ಮಗುವಿನ ಬಗ್ಗೆ ಬಹಳಷ್ಟು ಕನಸು ಕಂಡಿದ್ದಾರೆ. ಅವರ ಎಲ್ಲಾ ಆಸೆಗಳು ಈಡೇರಲೆಂದು ಸ್ವಚ್ಚ ಮನಸ್ಸಿನಿಂದ ಹಾರೈಸೋಣ ಎಂದು ಪ್ರಥಮ್ ಫೋಟೋ ಶೇರ್ ಮಾಡಿ ದೀರ್ಘವಾಗಿ ಬರೆದುಕೊಂಡಿದ್ದಾರೆ.

ನಟ ಚಿರಂಜೀವಿ ಸರ್ಜಾ ಇನ್ನೂ ನೆನಪು ಮಾತ್ರ. ಚಿರು ಕಳೆದುಕೊಂಡ ನೋವು ಅವರ ಕುಟುಂಬ ಮತ್ತು ಅಭಿಮಾನಿಗಳಲ್ಲಿ ಇನ್ನೂ ಮಾಸಿಲ್ಲ. ಚಿರು ಅಗಲಿಕೆಯ ಆಘಾತದಿಂದ ಹೊರಬರಲು ಕುಟುಂಬಕ್ಕೆ ಸಾಧ್ಯವಾಗುತ್ತಿಲ್ಲ. ಚಿರು ನೆನಪು ಅವರನ್ನು ಸದಾ ಕಾಡುತ್ತಿದೆ. ಅದೆ ನೆನಪಿನಲ್ಲೆ ದಿನಕಳೆಯುತ್ತಿದೆ ಸರ್ಜಾ ಕುಟುಂಬ. (ಎಂ.ಎನ್)

 

Leave a Reply

comments

Related Articles

error: