ಪ್ರಮುಖ ಸುದ್ದಿ

ಚೆಟ್ಟಳ್ಳಿ ಅಂಗಡಿಮಾಲೀಕರಿಂದ ಮಾರಾಟ ಸಮಯ ನಿಗದಿಗೆ ನಿರ್ಧಾರ

ರಾಜ್ಯ(ಮಡಿಕೇರಿ)ಜೂ.27:- ದಿನೇದಿನೇ ಕೊರೋನಾ ಹರಡುತಿರಿವುದರ ಹಿನ್ನೆಲೆ ಚೆಟ್ಟಳ್ಳಿಯ ಅಂಗಡಿಮಾಲೀಕರು ಒಟ್ಟುಸೇರಿ ಜೂನ್26ರ ಶನಿವಾರದಿಂದ ನಿತ್ಯವೂ ಬೆಳಿಗೆ6ರಿಂದ ಮದ್ಯಾಹ್ನ 2 ರತನಕ ಮಾತ್ರ ಅಂಗಡಿಮಳಿಗೆಯನ್ನು ತೆರೆಯುವಂತೆ ತೀರ್ಮಾನಿಸಲಾಗಿದೆ.
ಕಳೆದ ಸಂಜೆ ಚೆಟ್ಟಳ್ಳಿಯ ಅಂಗಡಿಮಾಲಿಕರುಸೇರಿ ಕೋರೋನಾ ಹರಡದಂತೆ ವ್ಯಾಪಾರ ಸಮಯವನ್ನು ಬೆಳಿಗೆ 6ರಿಂದ ಮಧ್ಯಾಹ್ನ 2ರ ತನಕ ನಿಗಧಿಪಡಿಸಿದ್ದು ಮುಂದಿನ ಒಂದುವಾರ ಇದೇ ಸಮಯವನ್ನು ಮುಂದುವರೆಸಿ ಮುಂದಿನ ದಿನಗಳಲ್ಲಿ ವ್ಯಾಪಾರದ ಸಮಯವನ್ನು ಬದಲಾವಣೆಗೊಳಿಸಿಕೊಳ್ಳುವ ಬಗ್ಗೆ ಸ್ಥಳೀಯ ವ್ಯಾಪಾರಸ್ಥರು ತೀರ್ಮಾಸಿರುವ ಬಗ್ಗೆ ಸಮಿತಿಯ ಅಧ್ಯಕ್ಷರಾದ ಸುರೇಸ್‍ಬಾಬು ತಿಳಿಸಿದ್ದಾರೆ. ವ್ಯಾಪಾರಕ್ಕೆ ಬರುವವರು ಕಡ್ಡಾಯವಾಗಿ ಮಾಸ್ಕ್ ಧರಿಸುವುದು,ಸಾಮಾಜಿಕ ಅಂತರವನ್ನು ಕಾಯ್ದು ಕೊಳ್ಳುವುದು, ವ್ಯಾಪಾರ ಕಿಟ್ಟ ವಸ್ತುಗಳನ್ನು ಮುಟ್ಟದಿರುವುದು. ಸಾರ್ವಜನಿಕರು ಸಹಕರಿಸುವುದರ ಮೂಲಕ ಗ್ರಾಮದಲ್ಲಿ ಕೊರೋನಾತಡೆಗೆ ಕೈಜೋಡಿಸೋಣವೆಂದು ಚೆಟ್ಟಳ್ಳಿ ಚೇಂಬರ್‍ಆಫ್‍ಕಾಮರ್ಸ್ ಮನವಿ ಮಾಡಿದರು. (ಕೆಸಿಐ,ಎಸ್.ಎಚ್)

Leave a Reply

comments

Related Articles

error: