ಕರ್ನಾಟಕಪ್ರಮುಖ ಸುದ್ದಿ

ರಾಜ್ಯಾದ್ಯಾಂತ ಮುಂಗಾರು ಚುರುಕು: ಕರಾವಳಿಗೆ ಆರೆಂಜ್ ಅಲರ್ಟ್ ಘೋಷಣೆ

ಬೆಂಗಳೂರು,ಜೂ.27-ರಾಜ್ಯದಲ್ಲಿ ಮುಂಗಾರು ಚುರುಕುಗೊಂಡಿದ್ದು, ಬಹುತೇಕ ಭಾಗಗಳಲ್ಲಿ ಮಳೆಯಾಗುತ್ತಿದೆ. ಈ ನಡುವೆ ಕರಾವಳಿಗೆ ಆರೆಂಜ್ ಅಲರ್ಟ್ ಘೋಷಿಸಲಾಗಿದೆ.

ಜೂ.29 ರವರೆಗೆ ಕರಾವಳಿಗೆ ಆರೇಂಜ್ ಅಲರ್ಟ್ ಘೋಷಿಸಲಾಗಿದ್ದು, ಭಾರಿ ಮಳೆಯ ಮುನ್ಸೂಚನೆ ನೀಡಲಾಗಿದೆ. ಉತ್ತರ ಒಳನಾಡಿನ ಬೀದರ್‌, ಹಾವೇರಿ, ರಾಯಚೂರು, ಕಲಬುರಗಿ ವಿಜಯಪುರ, ಯಾದಗಿರಿ ಜಿಲ್ಲೆಗಳಲ್ಲಿ ಜೂ.29ರವರೆಗೆ ಯೆಲ್ಲೊಅಲರ್ಟ್‌ ಪ್ರಕಟಿಸಲಾಗಿದೆ. ದಕ್ಷಿಣ ಒಳನಾಡಿನ ಚಿಕ್ಕಮಗಳೂರು, ಹಾಸನ, ಕೊಡಗು, ಶಿವಮೊಗ್ಗ ಜಿಲ್ಲೆಗಳಲ್ಲಿ ಜೂ.29 ರವರೆಗೆ ಆರೆಂಜ್‌ ಅಲರ್ಟ್‌ ಹಾಗೂ ಉಳಿದ ಜಿಲ್ಲೆಗಳಲ್ಲಿ ಯೆಲ್ಲೊ ಅಲರ್ಟ್‌ ಇದೆ.

ಶುಕ್ರವಾರ ಬೆಳಗಿನವರೆಗೆ ಕುಣಿಗಲ್‌ನಲ್ಲಿ 140 ಮಿ.ಮೀ., ತಿಪಟೂರು, ಹೊಸದುರ್ಗ, ಆನೇಕಲ್‌ನಲ್ಲಿ 100 ಮಿ.ಮೀ., ಯಲಬುರ್ಗಾ, ಅಥಣಿಯಲ್ಲಿ 90 ಮಿ.ಮೀ., ಅಂಕೋಲಾದಲ್ಲಿ 60 ಮಿ.ಮೀ., ಮುದ್ಗಲ್‌, ರಾಣೆಬೆನ್ನೂರು, ಮಹಾಲಿಂಗಪುರ, ಕುಕನೂರು, ಚಿತ್ರದುರ್ಗದಲ್ಲಿ 50 ಮಿ.ಮೀ., ಕೋಟ, ಬೇವೂರು, ಸಿಂಧನೂರು, ಹೊಸಹಳ್ಳಿ, ಎನ್‌.ಆರ್‌.ಪುರ, ಮಾಗಡಿಯಲ್ಲಿ 40 ಮಿ.ಮೀ. ಮಳೆಯಾಗಿದೆ.

ಮುಂಗಾರು ಅವಧಿ ಆರಂಭದಿಂದ ಇಲ್ಲಿಯವರೆಗೆ ರಾಜ್ಯದಲ್ಲಿ 179 ಮಿ.ಮೀ. ಮಳೆಯಾಗಿದೆ. ಈ ಅವಧಿಯಲ್ಲಿ ವಾಡಿಕೆಯಂತೆ 167 ಮಿ.ಮೀ. ಮಳೆಯಾಗುತ್ತದೆ. ಕರಾವಳಿಯಲ್ಲಿ 715 ಮಿ.ಮೀ., ಉತ್ತರ ಒಳನಾಡಿನಲ್ಲಿ 118 ಮಿ.ಮೀ., ದಕ್ಷಿಣ ಒಳನಾಡಿನಲ್ಲಿ 124 ಮಿ.ಮೀ. ಮಳೆ ಸುರಿದಿದೆ. (ಎಂ.ಎನ್)

Leave a Reply

comments

Related Articles

error: