ಮೈಸೂರು

ಉದಯಗಿರಿ ಯುವಕನ ಕೊಲೆ ಪ್ರಕರಣ : ಇಬ್ಬರು ಆರೋಪಿಗಳ ಬಂಧನ

ಮೈಸೂರಿನ ಉದಯಗಿರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಯುವಕನ ಕುತ್ತಿಗೆಗೆ ಯಾರೋ ದುಷ್ಕರ್ಮಿಗಳು ಗಾಜಿನ ತುಂಡಿನಿಂದ ಸೀಳಿ ಕೊಲೆಗೈದಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆಯುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಬಂಧಿತರನ್ನು ರಾಘವೇಂದ್ರ ನಗರ ನಿವಾಸಿಗಳಾದ ಹನ್ಸರಾಜ್ ಎಂಬವರ ಪುತ್ರ ರಾಕೇಶ್ (21) ಹಾಗೂ ನಾರಾಯಣ ಎಂಬವರ ಪುತ್ರ ಗುರುರಾಜ(27) ಎಂದು ಗುರುತಿಸಲಾಗಿದೆ.    ರಾಘವೇಂದ್ರ ನಗರದ ನಿವಾಸಿ  ಪೇಂಟರ್ ವೃತ್ತಿ ಮಾಡಿಕೊಂಡಿದ್ದ ಸುರೇಶ್  ಎಂಬಾತನನ್ನು ಮಾರ್ಚ್ 19ರಂದು ರಾತ್ರಿ 10ಗಂಟೆಯ ಸುಮಾರಿಗೆ ಮೆಡಿಕಲ್ ಶಾಪ್ ಗೆ ಮಾತ್ರೆ ತರಲೆಂದು ಬಂದಿದ್ದು, ರಾತ್ರಿ 12ಗಂಟೆ ಆದರೂ ಮನೆಗೆ ವಾಪಸ್ ಆಗಿರಲಿಲ್ಲ. ಗಾಬರಿಯಾದ ಮನೆಯವರು ಆತನನ್ನು ಹುಡುಕಿಕೊಂಡು ಬರುತ್ತಾರೆ. ಆದರೆ ಎಲ್ಲಿಯೂ ಕಾಣಿಸುವುದಿಲ್ಲ. ಲೀಡ್ಸ್ ಜ್ಯೋತಿ ಪಬ್ಲಿಕ್ ಶಾಲೆಯ ಬಳಿ ನಾಯಿಗಳ ಚೀರಾಟ ಕೇಳಿ ಬರುತ್ತದೆ ಎಂದು ತೆರಳಿ ವೀಕ್ಷಿಸಲಾಗಿ ಸುರೇಶ್ ಹೆಣವಾಗಿ ಬಿದ್ದಿದ್ದ.  ಈ ಕುರಿತು ಉದಯಗಿರಿಠಾಣೆಯ ಪೊಲೀಸರಿಗೆ ಮಾಹಿತಿ ನೀಡಲಾಗಿ ಅವರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದರು. ಕತ್ತಿಗೆ ಗಾಜಿನ ತುಂಡಿನಿಂದ ಬಲವಾಗಿ ಹಲ್ಲೆ ಮಾಡಲಾಗಿತ್ತು.

ತನಿಖೆ ಆರಂಭಿಸಿದ ಇನ್ಸಪೆಕ್ಟರ್ ಸಂತೋಷ್ ಅವರಿಗೆ ಆರೋಪಿಗಳು ಹಣಸೂರಿನಲ್ಲಿ ತಲೆಮರೆಸಿಕೊಂಡಿರುವುದು ಖಚಿತವಾಗಿತ್ತು. ಕೂಡಲೇ ತಂಡವನ್ನು ರಚಿಸಿ ಹುಣಸೂರಿಗೆ ತೆರಳಿ ಆರೋಪಿಗಳನ್ನು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. (ಕೆ.ಎಸ್-ಎಸ್.ಎಚ್)

Leave a Reply

comments

Related Articles

error: