ಮೈಸೂರು

ಸಮರ್ಥನಂ ಸಂಸ್ಥೆಯಿಂದ ಕೊರೊನಾ ವಾರಿಯರ್ಸ್ ಗೆ ರಕ್ಷಣಾ ಪರಿಕರಗಳ ವಿತರಣೆ

ಮೈಸೂರು,ಜೂ.27-ಸಮರ್ಥನಂ ಅಂಗವಿಕಲರ ಸಂಸ್ಧೆಯಿಂದ ಕೋವಿಡ್-19 ನಿಯಂತ್ರಣಕ್ಕೆ ಮುಂಚೂಣಿಯಲ್ಲಿ ದುಡಿಯುತ್ತಿರುವ ಕೊರೊನಾ ವಾರಿಯರ್ಸ್ ಗಳಾಗ ಪೌರಕಾರ್ಮಿಕರು, ಪೊಲೀಸರು ಮತ್ತು ಆಶಾ ಕಾರ್ಯಕರ್ತೆಯರಿಗೆ ರಕ್ಷಣಾ ಪರಿಕರಿಗಳನ್ನು ವಿತರಿಸಲಾಯಿತು.

ಸಮರ್ಥನಂ ಸಂಸ್ಥೆಯು ಕೋಕಾ-ಕೋಲಾ ಫೌಂಡೇಷನ್, ಯುನೈಟೆಡ್ ವೇ ಮುಂಬೈ ಇವರ ಸಹಯೋಗದೊಂದಿಗೆ ನಗರದ ಪುರಭವನದ ಆವರಣದಲ್ಲಿ ಇಂದು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಶಾಸಕರಾದ ಎಲ್.ನಾಗೇಂದ್ರ, ಎಸ್.ಎ.ರಾಮದಾಸ್ ಅವರು ಕೊರೊನಾ ವಾರಿಯರ್ಸ್ ಗಳಿಗೆ ಸ್ಯಾನಿಟೈಸರ್, ಮಾಸ್ಕ್, ಹ್ಯಾಂಡ್ ವಾಷ್, ಮುಖ ಕವಚ, ಹ್ಯಾಂಡ್ ಗ್ಲೋವ್ಸ್ ಅನ್ನು ವಿತರಿಸಿದರು.

ಶಾಸಕ ಎಲ್.ನಾಗೇಂದ್ರ ಅವರು ಮಾತನಾಡಿ, ಈಗಾಗಲೇ ಸಮರ್ಥಂ ಅಂಗವಿಕಲರ ಸಂಸ್ಥೆಯು ಮೈಸೂರು ಕೋವಿಡ್ ಆಸ್ವತ್ರೆ ಹಾಗೂ ಜಯದೇವ ಆಸ್ವತ್ರೆಗೆ 15 ಲಕ್ಷ ರೂ. ಮೌಲ್ಯದ ವೈಧ್ಯಕೀಯ ಪರಿಕರಗಳನ್ನು ವಿತರಣೆ ಮಾಡಿದ್ದಾರೆ, ಜೊತೆಗೆ ಲಾಕ್‍ಡೌನ್‍ನಿಂದ ವಿಕಲಚೇತನರು, ವಲಸೆ ಕಾರ್ಮಿಕರು, ದಿನಗೂಲಿ ನೌಕರರು ಮತ್ತು ಬಡ ಕುಟುಂಬಗಳ ಸಹಾಯಕ್ಕೆ ಧಾವಿಸಿದ್ದು, ರಾಪಿಡ್ ರೆಸ್ಪಾನ್ಸ್ ರಿಲೀಫ್ ಕಿಟ್, ಮಧ್ಯಾಹ್ನ ಮತ್ತು ರಾತ್ರಿ ಬಿಸಿ ಊಟದ ವ್ಯವಸ್ಥೆ, ಹ್ಯಾಂಡ್ ಸ್ಯಾನಿಟೈಸರ್‍ಗಳು, ಮಾಸ್ಕ್ ವಿತರಿಸುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಇಲ್ಲಿಯವರೆಗೆ 15000 ರಾಪಿಡ್ ರೆಸ್ಪಾನ್ಸ್ ರಿಲೀಫ್ ಕಿಟ್‍ಗಳನ್ನು ಹಾಗೂ ಎರಡು ಲಕ್ಷದಷ್ಟು ಆಹಾರ ಪ್ಯಾಕೆಟ್‍ಗಳನ್ನು ರಾಜ್ಯಾದ್ಯಂತ ಸಮಾಜದ ಬಡ ಮತ್ತು ದುರ್ಬಲ ವರ್ಗದವರಿಗೆ ಆಹಾರವನ್ನು ವಿತರಿಸುತ್ತಿದಗದಾರೆ ಎಂದು ಸಮರ್ಥನಂ ಸಂಸ್ಥೆಯ ಕಾರ್ಯವೈಖರಿ ಬಗ್ಗೆ ಮೆಚ್ಚಿಗೆ ವ್ಯಕ್ತಪಡಿಸಿದರು.

ನಗರಪಾಲಿಕೆ ಸದಸ್ಯ ನಾಗರಾಜ್, ನಗರಪಾಲಿಕೆ ವಲಯ ಕಚೇರಿ 6ರ ಆಯುಕ್ತ ನಾಗರಾಜು, ಆರೋಗ್ಯಾಧಿಕಾರಿಯಾದ ಜಯಂತ್, ತಾಲ್ಲೂಕು ಆರೋಗ್ಯಾಧಿಕಾರಿ ಮಹದೇವಪ್ರಸಾದ್, ಸಮರ್ಥಂ ಅಂಗವಿಕಲರ ಸಂಸ್ಥೆಯ ಮುಖ್ಯಸ್ಥ ದೇವರಾಜು, ಮೈಸೂರು ವಿಭಾಗದ ಕಾರ್ಯಕ್ರಮದ ಸಂಯೋಜಕ ಶಿವರಾಜು ಎಂ.ದರ್ಶನ್, ಸಿದ್ದರೂಢ, ಅಖಿತ್ ಕುಮಾರ್, ಆರೋಗ್ಯ ಪರಿವಿಕ್ಷಕರಾದ ಯೋಗೇಶ್ ಉಪಸ್ಥಿತರಿದ್ದರು. (ಎಂ.ಎನ್)

 

Leave a Reply

comments

Related Articles

error: