ನಗರ ಕಾರ್ಯಕ್ರಮನಮ್ಮೂರುಮೈಸೂರು

ಖಾಸಗಿ ಶಾಲೆಗಳೊಡನೆ ಸರ್ಕಾರದ ಒಳ ಒಪ್ಪಂದ : ಸರ್ಕಾರಿ ಶಾಲೆಗಳ ಬಗ್ಗೆ ತಾತ್ಸಾರ

ಸರ್ಕಾರವು ಖಾಸಗಿ ಶಿಕ್ಷಣ ಸಂಸ್ಥೆಗಳೊಂದಿಗೆ ಒಳ ಒಪ್ಪಂದ ಮಾಡಿಕೊಂಡಿದ್ದು ಸರ್ಕಾರಿ ಶಾಲೆಗಳನ್ನು ಹಂತ ಹಂತವಾಗಿ ಮುಚ್ಚಲು ಹೊರಟಿರುವುದು ಶೋಚನೀಯವೆಂದು ಸರ್ವಜನಾಂಗ ಹಿತರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ವೇಣುಗೋಪಾಲ್ ದೂರಿದರು.

ಅವರು ಸೆ.28ರ ಬುಧವಾರದಂದು ಪತ್ರಕರ್ತರ ಭವನದಲ್ಲಿ ಸುದ್ಧಿಗೋಷ್ಠಿ ನಡೆಸಿ 2013 ರಿಂದ 16ರವರೆಗೆ ಸುಮಾರು 218 ಸರ್ಕಾರಿ ಶಾಲೆಗಳನ್ನು ಮುಚ್ಚಲಾಗಿದ್ದು. ಅತ್ತ ಖಾಸಗಿ ಶಾಲೆಗಳ ದುಬಾರಿ ಶುಲ್ಕ ಇತ್ತ ಸರ್ಕಾರಿ ಶಾಲೆಗಳ ನಿರ್ಲಕ್ಷ ಧೋರಣೆಯಿಂದ ಆರ್ಥಿಕವಾಗಿ ಹಿಂದುಳಿದವರು ಶಿಕ್ಷಣ ವಂಚಿತರಾಗುತ್ತಿದ್ದಾರೆ. ಇದೇ ರೀತಿ ಮುಂದುವರೆದರೆ ಇನ್ನೂ ಹತ್ತು ವರ್ಷಗಳಲ್ಲಿ ಎಲ್ಲಾ ಸರ್ಕಾರಿ ಶಾಲೆಗಳು ಬಂದ್ ಆಗಲಿವೆ. ಒಂದು ಕಿಮೀ ದೂರದವರೆಗೆ ಖಾಸಗಿ ಶಾಲೆಗಳಿರಬಾರದು ಎನ್ನುವ ಕಾನೂನಿಗೂ ಯಾವುದೇ ಕಿಮ್ಮತ್ತು ಇಲ್ಲ. ಸರ್ಕಾರಕ್ಕೆ ಅತಿ ಹೆಚ್ಚು ಆದಾಯ ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಲಭಿಸುತ್ತಿದ್ದು ಅಬಕಾರಿ ಇಲಾಖೆಯನ್ನು ಹಿಂದಿಕ್ಕಿದೆ. ಶೇ.25ರಷ್ಟು ಮಕ್ಕಳನ್ನು ಆರ್.ಟಿ.ಇ.ಅಡಿ ಖಾಸಗಿ ಶಾಲೆಗಳಿಗೆ ಮಕ್ಕಳನ್ನು ದಾಖಲಿಸುತ್ತಿದೆ. ಸರ್ಕಾರ, ಸರ್ಕಾರಿ ಶಾಲೆಗಳ ಉನ್ನತೀಕರಣಗೊಳಿಸಲಿಕ್ಕೆ ಏಕೆ ಚಿಂತನೆ ನಡೆಸುತ್ತಿಲ್ಲ ಎಂದು ಖಾರವಾಗಿ ದೂರಿದರು. ಈ ನಿಟ್ಟಿನಲ್ಲಿ ಶಾಲೆಗಳ ಅಭಿವೃದ್ಧಿಗೆ ಸರ್ಕಾರವು ಕ್ರಮ ಕೈಗೊಂಡು ಪೂರ್ವ ಪ್ರಾಥಮಿಕ ಶಿಕ್ಷಣಕ್ಕೆ ಕನ್ನಡ ಕಡ್ಡಾಯಗೊಳಿಸಲಿ. ಗ್ರಾಮೀಣ ಹಾಗೂ ನಗರಗಳಲ್ಲಿ ನವೋದಯ ಮಾದರಿ ಶಾಲೆಗಳನ್ನು ಆರಂಭಿಸಬೇಕು ಈ ಬಗ್ಗೆ ಇನ್ನೂ ಎಂಟು ದಿನಗಳೊಳಗೆ ಆದೇಶ ಹೊರಡಿಸಲಿಲ್ಲವೆಂದರೆ ಜಿಲ್ಲಾಧಿಕಾರಿಗಳ ಕಚೇರಿಯ ಮುಂದೆ ಧರಣಿ ನಡೆಸಲಾಗುವುದು ಎಂದು ತಿಳಿಸಿದರು.

ಸುದ್ಧಿಗೋಷ್ಠಿಯಲ್ಲಿ ತಾಲೂಕು ಅಧ್ಯಕ್ಷ ಎಂ.ಪ್ರಭುದೇವ್, ಉಪಾಧ್ಯಕ್ಷ ಬಿ.ಮಹದೇವ್ ಸ್ವಾಮಿ, ಹೊಸಟ್ಟಿ ಶಿವಮೂರ್ತಿ, ಮಹಿಳಾ ಕಾರ್ಯಾಧ್ಯಕ್ಷೆ ಬಿ.ಟಿ.ರಾಜಮ್ಮ ಉಪಾಧ್ಯಕ್ಷ ಶಿವಪ್ಪ ಉಪಸ್ಥಿತರಿದ್ದರು.

 

Leave a Reply

comments

Tags

Related Articles

error: