ಮೈಸೂರು

ಗಂಡಾನೆಯ ಮೃತದೇಹ ಪತ್ತೆ

ಹೆಚ್.ಡಿ.ಕೋಟೆ ತಾಲೂಕಿನ ಅರಣ್ಯ ಪ್ರದೇಶದಲ್ಲಿ ಎಂಟು ವರ್ಷ ಪ್ರಾಯದ ಗಂಡಾನೆಯ ಮೃತದೇಹವೊಂದು ಪತ್ತೆಯಾಗಿದೆ.

ಗುಂಡ್ರೆ ಅರಣ್ಯವಲಯದ ಬಾಣೂರಿನಲ್ಲಿ ಅಂದಾಜು 8ವರ್ಷದ ಗಂಡು ಆನೆಯೊಂದು ಮೃತಪಟ್ಟಿದೆ. ಸ್ಥಳಕ್ಕೆ ಅರಣ್ಯಾಧಿಕಾರಿಗಳು, ಸಿಬ್ಬಂದಿಗಳು, ಪಶುವೈದ್ಯಾಧಿಕಾರಿಗಳು ಭೇಟಿ ನೀಡಿದ್ದು, ಆನೆಯ ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ. ಆನೆಯ ಕರುಳಿನಲ್ಲಿ ಹುಳುಗಳು ಹೆಚ್ಚಾಗಿ ಆರೋಗ್ಯ ಕೆಟ್ಟು ಮೃತಪಟ್ಟಿದೆ ಎಂದು ವೈದ್ಯಾಧಿಕಾರಿಗಳು ತಿಳಿಸಿದ್ದಾರೆ. (ಕೆ.ಎಸ್-ಎಸ್.ಎಚ್)

Leave a Reply

comments

Related Articles

error: