ಮೈಸೂರು

ಮಗಳ ಮೇಲೆ ಅತ್ಯಾಚಾರವೆಸಗಿದ ದೊಡ್ಡಪ್ಪನ ಬಂಧನ

ಅಪ್ರಾಪ್ತ ವಯಸ್ಸಿನ ಮಗಳ ಮೇಲೆ ದೊಡ್ಡಪ್ಪನೇ ಅತ್ಯಾಚಾರವೆಸಗಿ ಆಕೆ ಗರ್ಭವತಿಯಾಗಲು ಕಾರಣನಾಗಿದ್ದು, ಇದೀಗ ಆತನನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಹಲಗೂರು ಪೊಲೀಸ್ ಠಾಣಾ ವ್ಯಾಪ್ತಿಯ ಗೊಲ್ಲರ ದೊಡ್ಡಿ ಗ್ರಾಮದ ನಿವಾಸಿ ರಾಮಯ್ಯ (55) ಬಂಧಿತ ಆರೋಪಿ. ಈತ ತನ್ನ ಕಿರಿಯ ಸಹೋದರನ ಪುತ್ರಿಯನ್ನು ಪುಸಲಾಯಿಸಿ ಕರೆದುಕೊಂಡು ಹೋಗಿ ತನ್ನ ಮನೆಯಲ್ಲಿ ಅತ್ಯಾಚಾರ ನಡೆಸಿದ್ದ ಎಂಬ ಆರೋಪ ಕೇಳಿ ಬಂದಿತ್ತು. ಇದರಿಂದ  ಬಾಲಕಿ ಗರ್ಭವತಿಯಾಗಿದ್ದಳು. ಪೋಷಕರಿಗೆ ವಿಚಾರ ತಡವಾಗಿ ತಿಳಿದಿತ್ತು. ಬಾಲಕಿ ಗರ್ಭಿಣಿಯಾಗಿ 5 ತಿಂಗಳಾಗಿದ್ದು, ಮೊನ್ನೆಯಷ್ಟೇ ಹೊಟ್ಟೆನೋವು ಬಂದು ಗರ್ಭಪಾತವಾಗಿತ್ತು. ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆಯನ್ನೂ ನೀಡಲಾಗಿತ್ತು. ತನ್ನ ಈ ಸ್ಥಿತಿಗೆ ದೊಡ್ಡಪ್ಪನೇ ಕಾರಣ ಎಂದು ಬಾಲಕಿ ಪೊಲೀಸರಿಗೆ ತಿಳಿಸಿದ್ದಳು. ಬಾಲಕಿಯ ಹೇಳಿಕೆಯನ್ನಾಧರಿಸಿ ಆರೋಪಿ ರಾಮಯ್ಯನನ್ನು ಹಲಗೂರು ಪೊಲೀಸರು ಪೋಸ್ಕೋ ಕಾಯಿದೆಯಡಿ ಬಂಧಿಸಿದ್ದಾರೆ. ಆರೋಪಿಯನ್ನು ನ್ಯಾಯಾಂಗ ಬಂದನಕ್ಕೆ ಒಪ್ಪಿಸಲಾಗಿದೆ. (ಕೆ.ಎಸ್-ಎಸ್.ಎಚ್)

Leave a Reply

comments

Related Articles

error: