ಪ್ರಮುಖ ಸುದ್ದಿ

ನೂತನ ಎಸ್ ಪಿ ಯಾಗಿ ಕ್ಷಮಾ ಮಿಶ್ರಾ ಅಧಿಕಾರ ಸ್ವೀಕಾರ

ರಾಜ್ಯ( ಮಡಿಕೇರಿ) ಜೂ.28 :- ಕೊಡಗು ಜಿಲ್ಲಾ ನೂತನ ಪೊಲೀಸ್ ವರಿಷ್ಠಾಧಿಕಾರಿಗಳಾಗಿ 2016ನೇ ಕರ್ನಾಟಕ ಬ್ಯಾಚ್ ನ ಕ್ಷಮಾ ಮಿಶ್ರಾ ಅವರು ಅಧಿಕಾರ ಸ್ವೀಕರಿಸಿದರು. ನಿರ್ಗಮಿತ ಎಸ್ ಪಿ ಡಾ.ಸುಮನ್ ಡಿ.ಪನ್ನೇಕರ್ ಅವರು ನಗರದ ಕಚೇರಿಯಲ್ಲಿ ಅಧಿಕಾರ ಹಸ್ತಾಂತರಿಸಿದರು.
ಸುಮನ್ ಅವರನ್ನು ಬೆಂಗಳೂರಿನ ಪೊಲೀಸ್ ಕೇಂದ್ರ ಸ್ಥಾನದಲ್ಲಿರುವ ಸಿಎ ಆರ್ ಯೂನಿಟ್ ನ ಡೆಪ್ಯೂಟಿ ಕಮೀಷನರ್ ಆಫ್ ಪೊಲೀಸ್ ಆಗಿ ವರ್ಗಾವಣೆ ಮಾಡಲಾಗಿದೆ. ಕ್ಷಮಾ ಮಿಶ್ರಾ ಅವರು ಬೆಂಗಳೂರು ಸಿಐಡಿ ವಿಭಾಗದಲ್ಲಿ ಎಸ್ ಪಿಯಾಗಿ ಕಾರ್ಯ ನಿರ್ವಹಿಸುತ್ತಿದ್ದರು. (ಕೆಸಿಐ,ಎಸ್.ಎಚ್)

Leave a Reply

comments

Related Articles

error: