ಮೈಸೂರು

ಕೇಂದ್ರ ಬಿಜೆಪಿ ಸರ್ಕಾರವು ಪೆಟ್ರೋಲಿಯಂ ಬೆಲೆ ಏರಿಕೆ ಮಾಡಿರುವ ವಿರುದ್ಧ ಕಾಂಗ್ರೆಸ್ ಪಕ್ಷದಿಂದ ಪ್ರತಿಭಟನೆ

ಮೈಸೂರು,ಜೂ.29:- ಕೇಂದ್ರ ಬಿಜೆಪಿ ಸರ್ಕಾರವು ಪೆಟ್ರೋಲಿಯಂ ಬೆಲೆ ಏರಿಕೆ ಮಾಡಿರುವ ವಿರುದ್ಧ ಕಾಂಗ್ರೆಸ್ ಪಕ್ಷದಿಂದ ಇಂದು ರಾಜ್ಯಾದ್ಯಂತ ಪ್ರತಿಭಟನೆ ನಡೆದಿದೆ.

ಬೆಂಗಳೂರಿನಲ್ಲಿ ಮಾಜಿ ಮುಖ್ಯುಮಂತ್ರಿ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರು ತಮ್ಮ ನಿವಾಸದಿಂದ ಕೆಪಿಸಿಸಿ ಕಛೇರಿಯವರೆಗೆ ಸೈಕಲ್ ತುಳಿದುಕೊಂಡು ಹೋಗುವ ಮೂಲಕ ಪ್ರತಿಭಟನೆಗೆ ಚಾಲನೆ ನೀಡಿದರು. ಅದೇ ವೇಳೆ ಮೈಸೂರಿನಲ್ಲಿಯೂ  ನಗರ ಕಾಂಗ್ರೆಸ್ ಕಛೇರಿ ಎದುರು ಪ್ರತಿಭಟನೆ ನಡೆಸಲಾಯಿತು.

ನಗರದ ಜಿಲ್ಲಾ ಕಾಂಗ್ರೆಸ್ ಕಛೇರಿ ಮುಂಭಾಗ ಜಮಾಯಿಸಿದ ಕಾಂಗ್ರೆಸ್ ಮುಖಂಡರು ಕೇಂದ್ರ ಸರ್ಕಾರದ ಬೆಲೆ ಏರಿಕೆ ನೀತಿ ವಿರೋಧಿಸಿ ವಾಗ್ದಾಳಿ ನಡೆಸಿದರು. ಪ್ರತಿಭಟನೆಯ ನೇತೃತ್ವವನ್ನು ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ಆರ್.ಮೂರ್ತಿ ಮತ್ತು ಗ್ರಾಮಾಂತರ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ಡಾ.ಬಿ.ಜೆ.ವಿಜಯ್ ಕುಮಾರ್ ವಹಿಸಿದ್ದರು.

ಪ್ರತಿಭಟನೆ ಮುಗಿದಮೇಲೆ ಕಾಂಗ್ರೆಸ್ ಭವನದಿಂದ ಜಿಲ್ಲಾಧಿಕಾರಿಗಳ ಕಚೇರಿ ವರೆಗೆ ತಳ್ಳುವ ಗಾಡಿ ಮೇಲೆ ಕುಳಿತು ಜಿಲ್ಲಾಧಿಕಾರಿಗಳ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಪತ್ರ ನೀಡುವ ಮೂಲಕ ಹಕ್ಕೊತ್ತಾಯ ಮಾಡಿದರು. ಈ ಸಂದರ್ಭ ಮಾತನಾಡಿ ಅಂತರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾತೈಲ ಬೆಲೆ ಕಡಿಮೆ ಇದ್ದರೂ, ಬ್ಯಾರಲ್​ಗೆ 130 ರೂ ಇದ್ದರೂ, ಭಾರತದಲ್ಲಿ ದರ ಏರಿಕೆ ಮಾಡಿದ್ದಾರೆ.   ಮನಮೋಹನ್​ ಸಿಂಗ್ ಸರ್ಕಾರ ಸಬ್ಸಿಡಿ ಕೊಟ್ಟಿತ್ತು. ಆದರೆ ಈಗ ಈ ಸರ್ಕಾರ ಯಾವುದನ್ನೂ ಕೊಟ್ಟಿಲ್ಲ. ಸಾಮಾನ್ಯ ಜನರ ಮೇಲೆ ದುಬಾರಿ ಬೆಲೆ ಹಾಕುತ್ತಿದೆ. ರೈತರಿಗೆ ಹಾಗೂ ಇಂಡಸ್ಟ್ರೀಸ್​ಗೆ ದುಬಾರಿಯಾಗಿದೆ ಎಂದು ಕಿಡಿಕಾರಿದರು. ಕೋವಿಡ್ ಇದ್ದರೂ ಕಳೆದ 10 ದಿನಗಳಿಂದ 11 ರೂ ಹೆಚ್ಚಿಸಿದ್ದಾರೆ. ನರೇಂದ್ರ ಮೋದಿ ಸರ್ಕಾರ ಬಡವರ ಮೇಲೆ ಬರೆ ಹಾಕಿದೆ  ಎಂದು ವಾಗ್ದಾಳಿ ನಡೆಸಿದರು.

ಪ್ರತಿಭಟನೆಯಲ್ಲಿ ವಿಧಾನಪರಿಷತ್ ಸದಸ್ಯರಾದ ಆರ್ ಧರ್ಮಸೇನಾ. ಮಾಜಿ ಶಾಸಕರಾದ ಎಂ ಕೆ ಸೋಮಶೇಖರ್.  ಕೆಪಿಸಿಸಿ ವಕ್ತಾರರಾದ  ಎಂ.ಲಕ್ಷ್ಮಣ್. ಕಾಂಗ್ರೆಸ್ ಯುವ ಮುಖಂಡರಾದ ಸುನಿಲ್ ಬೋಸ್. ಮಹಿಳಾ ನಗರ ಅಧ್ಯಕ್ಷರಾದ ಪುಷ್ಪಲತಾ ಚಿಕ್ಕಣ್ಣ. ಮಹಿಳಾ ಗ್ರಾಮಾಂತರ ಅಧ್ಯಕ್ಷರಾದ ಲತಾ ಸಿದ್ದಶೆಟ್ಟಿ. ಗ್ರಾಮಾಂತರ ಕಾಂಗ್ರೆಸ್ ಉಪಾಧ್ಯಕ್ಷರಾದ ಹೆಡತಲೆ ಮಂಜುನಾಥ್. ಆರ್ ಪ್ರಕಾಶ್ ಕುಮಾರ್. ಪ್ರಧಾನ ಕಾರ್ಯದರ್ಶಿಯಾದ. ಬಸವರಾಜ್ ನಾಯಕ್. ಶಿವಪ್ರಸಾದ್. ನಗರ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾದ ಶಿವಣ್ಣ. ಕಾಂಗ್ರೆಸ್ ಮುಖಂಡರಾದ ಹುಣಸೂರು ಬಸವಣ್ಣ. ಪುಷ್ಪವಲ್ಲಿ. ಟಿ ಬಿ ಚಿಕ್ಕಣ್ಣ. ಎಲ್ಲಾ ಕಾಂಗ್ರೆಸ್ ಕಾರ್ಯಕರ್ತರು  ಪಾಲ್ಗೊಂಡಿದ್ದರು. (ಕೆ.ಎಸ್,ಎಸ್.ಎಚ್)

 

Leave a Reply

comments

Related Articles

error: