ಮೈಸೂರು

ಸಂತೆ ಸರಗೂರು ಎಪಿಎಂಸಿ ಅಧ್ಯಕ್ಷಗಿರಿ ಜೆಡಿಎಸ್ ಪಾಲು : ಜವರನಾಯಕಗೆ ಭರ್ಜರಿ ಗೆಲುವು

ಮೈಸೂರು,ಜೂ.29:- ಮೈಸೂರು ಜಿಲ್ಲೆಯ  ಸಂತೆ ಸರಗೂರು ಎಪಿಎಂಸಿ ಅಧ್ಯಕ್ಷಗಿರಿ ಜೆಡಿಎಸ್ ಪಾಲಾಗಿದೆ. ಬಿಜೆಪಿ ಅಭ್ಯರ್ಥಿಗೇ   ಬಿಜೆಪಿ ನಾಮ ನಿರ್ದೇಶಿತ ಸದಸ್ಯರು ಸೆಡ್ಡು ಹೊಡೆದ ಪರಿಣಾಮ ಜೆಡಿಎಸ್ ಅಭ್ಯರ್ಥಿ ಜವರನಾಯಕಗೆ ಭರ್ಜರಿ ಗೆಲುವು ಲಭಿಸಿದೆ.

16 ಮತಗಳ ಪೈಕಿ 10 ಮತ ಪಡೆದು ಜವರನಾಯಕ ಗೆಲುವಿನ ನಗೆ ಬೀರಿದ್ದು, ಕಾಂಗ್ರೆಸ್ ಬೆಂಬಲಿತ ಬಿಜೆಪಿ ಅಭ್ಯರ್ಥಿ ಎಂದುಕೊಂಡು ಸ್ಪರ್ಧೆ ಮಾಡಿದ್ದ ಜಗದೀಶ್ ಗೆ ಹೀನಾಯ ಸೋಲಾಗಿದೆ. ಶಾಸಕ ಅನೀಲ್ ಚಿಕ್ಕಮಾದು, ಮಾಜಿ ಸಂಸದ ಆರ್.  ಧ್ರುವನಾರಾಯಣ್ ಗೆ ಹಿನ್ನಡೆಯಾಗಿದ್ದು, ಸರಗೂರು ಎಪಿಎಂಸಿ ಆವರಣದಲ್ಲಿ ಮಾಜಿ ಶಾಸಕ ಚಿಕ್ಕಣ್ಣ ಬೆಂಬಲಿಗರು ಸಂಭ್ರಮಾಚರಣೆ ನಡೆಸಿದ್ದಾರೆ. ಕಾಂಗ್ರೆಸ್ 5, ಜೆಡಿಎಸ್ 7, ಬಿಜೆಪಿ 1+3 ನಾಮನಿರ್ದೇಶಿತ ಸದಸ್ಯರಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: