ಕ್ರೀಡೆ

ಪಾಕಿಸ್ತಾನ ಹೆಸರ ಸ್ಪೆಲ್ಲಿಂಗ್ ಮಿಸ್ಟೇಕ್ ಮಾಡಿದ ಪಿಸಿಬಿ : ತೀವ್ರವಾಗಿ ಟ್ರೋಲ್ ಮಾಡಿದ ಟ್ವಿಟರ್ ಬಳಕೆದಾರರು

ದೇಶ(ನವದೆಹಲಿ)ಜೂ.29:- ಪಾಕಿಸ್ತಾನ ಕ್ರಿಕೆಟ್ ತಂಡ ಭಾನುವಾರ ಇಂಗ್ಲೆಂಡ್ ಪ್ರವಾಸಕ್ಕೆ ತೆರಳಿದೆ. ಪಾಕಿಸ್ತಾನ ಕ್ರಿಕೆಟ್ ಮಂಡಳಿ ಈ ಮಾಹಿತಿಯನ್ನು ಟ್ವೀಟ್ ಮೂಲಕ ನೀಡಿದೆ. ಆದರೆ ಪಿಸಿಬಿಯ ಹಿಂದಿನ ಟ್ವೀಟ್‌ನಲ್ಲಿ  ಪಾಕಿಸ್ತಾನ  ಕಾಗುಣಿತವನ್ನು ಪಕಿಯಾಟನ್ ಎಂದು ಬರೆಯಲಾಗಿದೆ, ಈ ಕಾರಣದಿಂದಾಗಿ ಸೋಶಿಯಲ್ ಮೀಡಿಯಾ ಬಳಕೆದಾರರು ಪಿಸಿಬಿಯನ್ನು ಗುರಿಯಾಗಿಸಿಕೊಂಡು ಟ್ರೋಲ್ ಮಾಡಿದ್ದಾರೆ.

ಪಿಸಿಬಿ ತನ್ನ ತಪ್ಪನ್ನು ಅರಿತುಕೊಂಡು ಸುಮಾರು ಒಂದು ಗಂಟೆಯ ನಂತರ ಆ ಟ್ವೀಟ್ ಅನ್ನು ಸರಿಪಡಿಸಿ ರಿಟ್ವೀಟ್ ಮಾಡಿದೆ. ಟ್ವಿಟರ್ ಬಳಕೆದಾರರು ಇಂಜಮಾಮ್ ಮಾತನಾಡುವ ಶೈಲಿಯನ್ನು ಬಳಸಿಕೊಂಡು ಪಿಸಿಬಿಯನ್ನು ಟ್ರೋಲ್ ಮಾಡಿದ್ದು. “ಬಾಯ್ಸ್ ಕರೆಕ್ಟ್ ಸ್ಪೆಲ್ಲಿಂಗ್ ವೆಲ್” ಎಂದು ಅವರು ಬರೆದಿದ್ದಾರೆ.

ಮತ್ತೋರ್ವ ಬಳಕೆದಾರರು ಕಾಗುಣಿತವನ್ನು ಸುಧಾರಿಸುವಲ್ಲಿನ ವಿಳಂಬದ ಮೇಲೆ ಪಿಸಿಬಿಯನ್ನು ಗುರಿಯಾಗಿಸಿಕೊಂಡರಲ್ಲದೇ “ಕಾಗುಣಿತದ ತಪ್ಪನ್ನು ಸರಿಪಡಿಸಲು   ತುಂಬಾ ಸಮಯ ತೆಗೆದುಕೊಂಡಿದ್ದೀರಿ” ಎಂದು   ಬರೆದಿದ್ದಾರೆ. ಇನ್ನೋರ್ವ ಬಳಕೆದಾರರು ಪಾಕಿಸ್ತಾನದ ತಂಡ   “ಇಂಗ್ಲೆಂಡ್‌ಗೆ ಹೋದ ನಂತರ ಪಾಕಿಸ್ತಾನ ತಂಡವು ಪಂದ್ಯವನ್ನು ರದ್ದುಗೊಳಿಸಿ ಇಂಗ್ಲಿಷ್ ಕ್ಲಾಸ್ ಗೆ ಸೇರಬೇಕು” ಎಂದು   ಬರೆದಿದ್ದಾರೆ.

ಟೆಸ್ಟ್ ಸರಣಿಯು ಜುಲೈ 30 ರಿಂದ ಇಂಗ್ಲೆಂಡ್ ಮತ್ತು ಪಾಕಿಸ್ತಾನ ನಡುವೆ ಪ್ರಾರಂಭವಾಗಲಿದೆ. ಟೆಸ್ಟ್ ಸರಣಿಗಾಗಿ ಪಾಕಿಸ್ತಾನದ 20 ಆಟಗಾರರು ಇಂಗ್ಲೆಂಡ್ ತಲುಪಿದ್ದಾರೆ.   ಕೊರೋನಾದಿಂದಾಗಿ  ಪಾಕಿಸ್ತಾನ ತಂಡ 14 ದಿನಗಳ ಕಾಲ ಆಸ್ಟ್ರೇಲಿಯಾದಲ್ಲಿ ಕ್ವಾರೆಂಟೈನ್ ನಲ್ಲಿರಲಿದೆ. (ಏಜೆನ್ಸೀಸ್,ಎಸ್.ಎಚ್)

Leave a Reply

comments

Related Articles

error: