ಮೈಸೂರು

ಸಾಲಗಾರರ ಕಿರುಕುಳ ತಾಳಲಾರದೇ ವ್ಯಕ್ತಿ ಆತ್ಮಹತ್ಯೆ

ಸಾಲಗಾರರ ಕಿರುಕುಳ ತಾಳಲಾರದೇ ಮನನೊಂದ ವ್ಯಕ್ತಿಯೋರ್ವರು ಮರಣ ಪತ್ರ ಬರೆದಿಟ್ಟು ಆತ್ಮಹತ್ಯೆಗೆ ಶರಣಾದ ಘಟನೆ ಮೈಸೂರಿನಲ್ಲಿ ನಡೆದಿದೆ.

ಮೃತನನ್ನು  ಕಲ್ಯಾಣಗಿರಿ ನಿವಾಸಿ ಸಯ್ಯದ್ ಶಮಿವುಲ್ಲಾ  (41) ಎಂದು ಗುರುತಿಸಲಾಗಿದೆ.

ಎನ್ ಐ ಸಿಲ್ಕ್ ನಲ್ಲಿ ಕೆಲಸ ಮಾಡುತ್ತಿದ್ದ ಶಮಿವುಲ್ಲಾ  ಅಂಗಡಿ ಮಾಲೀಕ ಇಲಿಯಾಸ್ ಬೇಗ್ ಬಳಿ ವ್ಯವಹಾರಕ್ಕಾಗಿ 2,80 ಲಕ್ಷ ಸಾಲ ಮಾಡಿದ್ದ ಎನ್ನಲಾಗಿದೆ. ಪಡೆದುಕೊಂಡ ಸಾಲದ ಹಣವನ್ನು ವಾಪಸ್ಸು ನೀಡಿಲ್ಲ ಎನ್ನುವ ಕಾರಣಕ್ಕೆ  ಸಾಲಗಾರರು ಮನೆಯ ಬಳಿ ಬಂದು  ಕಿರುಕುಳ ನೀಡುತ್ತಿದ್ದರು. ಮಗಳನ್ನು ಅಪಹರಿಸುತ್ತೇವೆ ಎಂದು ಬೆದರಿಕೆಯನ್ನೊಡ್ಡಿದ್ದರು.  ಮಗಳ ಮದುವೆ ಒಂದು ತಿಂಗಳಷ್ಟೇ ಬಾಕಿ ಉಳಿದಿತ್ತು. ಶಮಿವುಲ್ಲಾ ಸಾಲಗಾರರ ಕಾಟ ತಾಳಲಾರದೆ ಕಳೆದ  ವಾರ ವಿಷಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೈಸೂರಿನ ಕೆ.ಆರ್.ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ.

ಎನ್.ಐ ಸಿಲ್ಕ್ ಮಾಲೀಕ ಇಲಿಯಾಸ್ ಬೆಗ್ ವಿರುದ್ಧ ಉದಯಗಿರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. (ಕೆ.ಎಸ್-ಎಸ್.ಎಚ್)

Leave a Reply

comments

Related Articles

error: