ಮೈಸೂರು

ಜನಮನ ವೇದಿಕೆ ವತಿಯಿಂದ ಸಾಹಿತಿ ಗೀತಾ ನಾಗಭೂಷಣ ಅವರಿಗೆ ಸಂತಾಪ ಸಲ್ಲಿಕೆ

ಮೈಸೂರು,ಜೂ.29:- ಜನಮನ ವೇದಿಕೆ ವತಿಯಿಂದ ಚಾಮುಂಡಿಪುರಂ ವೃತ್ತದಲ್ಲಿ ರುವ ತಗಡೂರು ರಾಮಚಂದ್ರ ರಾವ್ ಉದ್ಯಾನವನದಲ್ಲಿ ಕಾದಂಬರಿಗಾರ್ತಿ, ನಾಡೋಜ ಗೀತಾ ನಾಗಭೂಷಣ  ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವ ಮೂಲಕ ಸಂತಾಪ ಸಲ್ಲಿಸಲಾಯಿತು.

ಪುಷ್ಪನಮನ ಸಲ್ಲಿಸಿ ಮಾತನಾಡಿದ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಡಾ.ವೈ ಡಿ ರಾಜಣ್ಣ ಅವರು ಹಲವು ಪ್ರಥಮಗಳ ಶ್ರೇಷ್ಠ  ಸಾಹಿತಿ ಚಿಂತಕಿ ಡಾ.ಗೀತಾ ನಾಗಭೂಷಣ್ ಕಲ್ಯಾಣ ಕರ್ನಾಟಕದ ಪ್ರಮುಖ ಲೇಖಕಿ ಎಂದೇ ಖ್ಯಾತರಾಗಿದ್ದ ನಾಡೋಜ ಡಾ.ಗೀತಾ ನಾಗಭೂಷಣ್ ಅವರು ತಮಗಿದ್ದ ಬಡತನ ಹೆಣ್ಣು ಮಕ್ಕಳನ್ನು ಶಾಲೆಗೆ ಕಳುಹಿಸುವುದು ನಿಷಿದ್ಧ ಎನ್ನುವ ಪರಿಸರದಲ್ಲಿ ದೃಢ ಸಂಕಲ್ಪ ಮತ್ತು ಹೋರಾಟದ ಮನೋಭಾವನೆಗಳ ಮೂಲಕ ಉನ್ನತ ಶಿಕ್ಷಣ ಪಡೆದವರು, ದಲಿತ ಬಂಡಾಯದ ‘ಪ್ರಥಮ ಮಹಿಳಾ ಸಾಹಿತಿ ಎಂದೇ ಗುರುತಿಸಲ್ಪಟ್ಟವರು’ ತಮ್ಮ ಅಧ್ಯಯನದ ನಡುವೆ ಸಮಾಜಕ್ಕೆ ಬೆಳಕು ಚೆಲ್ಲುವ ಕಾರ್ಯದಲ್ಲಿ ನಿರಂತರವಾಗಿ ಪ್ರಯತ್ನಶೀಲರಾದವರು. ಸಾಹಿತ್ಯದ ಉದ್ದಕ್ಕೂ ಮಹಿಳೆಯ ಗುರುತಿಸುವಿಕೆ ಅವಮಾನ ದೌರ್ಜನ್ಯದ ಕುರಿತು ಲೇಖನಿಯನ್ನೇ ಅಸ್ತ್ರವಾಗಿಸಿಕೊಂಡರು,

ಡಾ. ಗೀತಾ ನಾಗಭೂಷಣ್ ಅವರು 2010ರಲ್ಲಿ ಗದಗನಲ್ಲಿ ನಡೆದ 76ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಅಧ್ಯಕ್ಷರ ನುಡಿ ಮಹತ್ವದ್ದು. “ವಚನಕಾರರು ಹರಿದಾಸರು ತತ್ತ್ವ ಕಾರರು ಜನಪದರು ಸಾವಿರಾರು ವರ್ಷಗಳಿಂದ  ಸಾಹಿತ್ಯ ರಚನೆ ಮೂಲಕ ಜನಜಾಗೃತಿ ಶಾಂತಿ ಚಳುವಳಿ ಮೂಲಕ  ಸೌಹಾರ್ದ ಬದುಕಿಗೆ ಮುನ್ನುಡಿ ಬರೆದವರು ಇಂದಿನ ಕವಿಗಳು ಸಾಹಿತಿಗಳು ಇದನ್ನು ಮುಂದುವರಿಸಿಕೊಂಡು ಹೋಗಬೇಕಾದ ಜವಾಬ್ದಾರಿ ನಮ್ಮ ಮೇಲಿದೆ ಎಂದು ಅಭಿಪ್ರಾಯಪಟ್ಟಿದ್ದರು ಎಂದರು.

ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದ ಕನ್ನಡದ ಮೊದಲ ಮಹಿಳಾ ಸಾಹಿತಿ ,ನಾಡೋಜ ಪ್ರಶಸ್ತಿ ಪಡೆದ ಮೊದಲ ಮಹಿಳಾ ಸಾಹಿತಿ ಹಾಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಮೊದಲ ಮಹಿಳಾ ಅಧ್ಯಕ್ಷರು ಹೀಗೆ ಹಲವು ಪ್ರಥಮಗಳ ದಾಖಲೆ ಅವರಿಗಿದೆ , ಸುಮಾರು 50ಕ್ಕೂ ಹೆಚ್ಚು ಕಥೆ ಕಾದಂಬರಿ ನಾಟಕ ವಿಮರ್ಶೆ ಮತ್ತು ಇತರೆ ಪ್ರಕಾರಗಳಲ್ಲಿಯೂ ವೈವಿಧ್ಯಮಯ ಚಿಂತನೆಯ ಮೂಲಕ ಕನ್ನಡದ ಶ್ರೇಷ್ಠ ಸಾಹಿತಿ ಎನಿಸಿದ್ದರು ಎಂದು ಅಭಿಪ್ರಾಯ ಪಟ್ಟರು,

ಈ ಸಂದರ್ಭ    ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷರಾದ ಚಂದ್ರಶೇಖರ್ ,ಜನಮನ ವೇದಿಕೆ ಅಧ್ಯಕ್ಷರಾದ ಹಾಗೂ ನಗರಪಾಲಿಕೆ ಸದಸ್ಯರು ಮಾವಿ ರಾಮ್ ಪ್ರಸಾದ್, ಮಧು ಎನ್ ಪೂಜಾರಿ, ಸುಚಿಂದ್ರ, ಶಿವಪ್ರಕಾಶ್ ,ಕಾರ್ತಿಕ್ ನಾಯಕ್, ಚಕ್ರಪಾಣಿ ಮೈಲಾ ವಿಜಯ್ ಕುಮಾರ್ ,ಇನ್ನಿತರರು ಹಾಜರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: