ಪ್ರಮುಖ ಸುದ್ದಿ

ರೈಲಿಗೆ ತಲೆ ಕೊಟ್ಟು ಖಾಸಗಿ ನ್ಯೂಸ್ ಚಾನೆಲ್ ಕ್ಯಾಮರಾಮನ್ ಆತ್ಮಹತ್ಯೆ

ರಾಜ್ಯ(ಕಲಬುರಗಿ)ಜೂ.30:- ರೈಲಿಗೆ ತಲೆ ಕೊಟ್ಟು ಖಾಸಗಿ ನ್ಯೂಸ್ ಚಾನೆಲ್‌ವೊಂದರ ಕ್ಯಾಮರಾಮನ್ ಆತ್ಮಹತ್ಯೆ ಮಾಡಿಕೊಂಡ ಘಟನೆ ಕಲಬುರಗಿ ಹೊರವಲಯದ ಪಿಡಿಎ ಎಂಜಿನಿಯರಿಂಗ್ ಕಾಲೇಜು ಬಳಿಯ ರೈಲು ಹಳಿ ಮೇಲೆ ನಡೆದಿದೆ.

ಹನುಮಂತ್‌ರಾವ್ (42) ಆತ್ಮಹತ್ಯೆ ಮಾಡಿಕೊಂಡ ಕ್ಯಾಮರಾಮನ್. ಮೃತ ಹನುಮಂತ್‌ರಾವ್ ಕಲಬುರಗಿ ಮೂಲದವರು. ವೈಯುಕ್ತಿಕ ಸಮಸ್ಯೆಗಳಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದ್ದು, ಘಟನಾ ಸ್ಥಳದಲ್ಲಿ ಮದ್ಯದ ಬಾಟಲಿಗಳು ಪತ್ತೆಯಾಗಿವೆ.

ವಾಡಿ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: