ಪ್ರಮುಖ ಸುದ್ದಿವಿದೇಶ

ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬಂಧನಕ್ಕೆ ವಾರಂಟ್ ಹೊರಡಿಸಿದ ಇರಾನ್ !

ವಿದೇಶ(ತೆಹರಾನ್)ಜೂ.30:- ಇರಾನ್ ಬಾಗ್ದಾದ್ ನಲ್ಲಿ ನಡೆದ ಡ್ರೋನ್ ದಾಳಿಯಲ್ಲಿ ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಇತರೆ ಹಲವು ಜನರ ಬಂಧನಕ್ಕೆ ವಾರೆಂಟ್ ಹೊರಡಿಸಿದ್ದು, ಇದಕ್ಕಾಗಿ ಇಂಟರ್ ಪೋಲ್ ನ ನೆರವು ಕೋರಿದೆ.
ಇರಾನ್ ನ ಸ್ಥಳೀಯ ಪ್ರಾಸಿಕ್ಯೂಟರ್ ಈ ಕುರಿತು ಮಾಹಿತಿ ನೀಡಿದ್ದು, ಇರಾನ್ ಇಟ್ಟಿರುವ ಈ ಹೆಜ್ಜೆಯಿಂದ ಡೊನಾಲ್ಡ್ ಟ್ರಂಪ್ ಅವರಿಗೆ ಯಾವುದೇ ಆತಂಕವಿಲ್ಲ ಆದರೆ ಈ ಆರೋಪ ಮತ್ತೊಮ್ಮೆ ಇರಾನ್ ಹಾಗೂ ಅಮೇರಿಕಾ ನಡುವೆ ಹೆಚ್ಚುತ್ತಿರುವ ಉದ್ವಿಗ್ನತೆಯನ್ನು ಮತ್ತೊಮ್ಮೆ ಎತ್ತಿ ತೋರಿಸಿವೆ ಎನ್ನಲಾಗಿದೆ.

ಇರಾನ್ ಮತ್ತು ವಿಶ್ವದ ಪ್ರಮುಖ ಶಕ್ತಿಗಳೊಂದಿಗಿನ ಪರಮಾಣು ಒಪ್ಪಂದದಿಂದ ಟ್ರಂಪ್ ದೂರ ಸರಿದ ನಂತರ ಉಭಯ ದೇಶಗಳ ನಡುವಿನ ಉದ್ವಿಗ್ನತೆ ಮತ್ತಷ್ಟು ಹೆಚ್ಚಾಗಿದೆ. ಜನವರಿ 3 ರಂದು ಬಾಗ್ದಾದ್‌ನಲ್ಲಿ ನಡೆದ ದಾಳಿಯಲ್ಲಿ ಟ್ರಂಪ್ ಮತ್ತು 30 ಕ್ಕೂ ಹೆಚ್ಚು ಮಂದಿ ಭಾಗಿಯಾಗಿದ್ದಾರೆ ಎಂದು ಇರಾನ್ ಆರೋಪಿಸಿದೆ ಎಂದು ಟೆಹ್ರಾನ್ ಪ್ರಾಸಿಕ್ಯೂಟರ್ ಅಲಿ ಅಲ್ಕಾಸಿಂಹರ್ ಹೇಳಿದ್ದಾರೆ. ಈ ದಾಳಿಯಲ್ಲಿ ಜನರಲ್ ಕಾಸಿಮ್ ಸೊಲೈಮಾನಿ ಹತ್ಯೆಗೈಯಲಾಗಿತ್ತು ಎಂಬುದು ಇಲ್ಲಿ ಉಲ್ಲೇಖನೀಯ. (ಏಜೆನ್ಸೀಸ್,ಎಸ್.ಎಚ್)

Leave a Reply

comments

Related Articles

error: