
ಮೈಸೂರು
ಜು. 2 : ಡಿ.ಕೆ.ಶಿವಕುಮಾರ್ ಪದಗ್ರಹಣ ; ಪೂರ್ವಭಾವಿ ಸಿದ್ಧತೆ
ಮೈಸೂರು,ಜೂ.30:- ಮೈಸೂರು ನಗರ (ಜಿಲ್ಲಾ) ಪ್ರಚಾರ ಸಮಿತಿ ಕೆ.ಪಿ.ಸಿ.ಸಿ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್ ಮತ್ತು ಕಾರ್ಯಾಧ್ಯಕ್ಷರುಗಳ ಪದಗ್ರಹಣ ಮತ್ತು ಪ್ರತಿಜ್ಞಾವಿಧಿ ಸ್ವೀಕಾರ ಜು. 2 ರಂದು ನಡೆಯಲಿದ್ದು, ಇದರ ಅಂಗವಾಗಿ ನಿನ್ನೆ ಇಂದಿರಾ ಗಾಂಧಿ ಕಾಂಗ್ರೆಸ್ ಭವನದಲ್ಲಿ ಮೈಸೂರು ನಗರ ಪ್ರಚಾರ ಸಮಿತಿ ವತಿಯಿಂದ ಪೂರ್ವಭಾವಿ ಸಿದ್ಧತೆ ಮತ್ತು ಝೂಮ್( zoom) ಆ್ಯಪ್ ಬಳಕೆಯ ತರಬೇತಿ ನೀಡಲಾಯಿತು.
ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದ ಮುಂಚೂಣಿ ಫಟಕಗಳ ಪೈಕಿ ಪ್ರಪ್ರಥಮವಾಗಿ ಮೈಸೂರು ನಗರ (ಜಿಲ್ಲಾ) ಕಾಂಗ್ರೆಸ್ ಪ್ರಚಾರ ಸಮಿತಿ ವತಿಯಿಂದ ಕಾರ್ಯ ಕ್ರಮವನ್ನು ಆಯೋ ಜಿಸಲಾಗಿತ್ತು. ಪ್ರಥಮವಾಗಿ ಕೆಪಿಸಿಸಿ ಅಧ್ಯಕರಾದ ಡಿ.ಕೆ.ಶಿವಕುಮಾರ್ ಅವರ 6 ಅಡ್ಡಿ ಎತ್ತರದ ಭಾವಚಿತ್ರವನ್ನು ಪ್ರದರ್ಶಿಸಲಾಯಿತು. ನಂತರ ಡಿಸಿಸಿ ಅಧ್ಯಕ್ಷರುಗಳಾದ ಆರ್.ಮೂರ್ತಿ, ಡಾ. ಬಿ.ಜೆ. ವಿಜಯ್ ಕುಮಾರ್, ಮಾಜಿ ಶಾಸಕರಾದ ವಾಸು , ಎಂಎಲ್ ಸಿ ಧರ್ಮಸೇನಾ, ಕೆಪಿಸಿಸಿ ಉಸ್ತುವಾರಿಗಳಾದ ಚಂದ್ರಶೇಖರ್, ರಾಘವೇಂದ್ರ, ಜ್ಯೋತಿ ಬೆಳಗಿಸಿದ್ದರು,
ಪ್ರಚಾರ ಸಮಿತಿಯ ಪದಾಧಿಕಾರಿಗಳಿಗೆ ಝೂಮ್ (ZOOM) ಆ್ಯಪ್ ಬಳಕೆಯ ಟ್ರೈನಿಂಗ್ ಐಟಿ ಸೇಲ್ ಅಧ್ಯಕ್ಷರಾದ ಡೋನಾಲ್ಡ್ ನೀಡಿದ್ದರು. ಸಂವಿಧಾನದ ಪೀಠಿಕೆಯನ್ನು ಎಲ್ಲರಿಗೂ ಹೇಳಿಸಲಾಯಿತು. ಈ ಎಲ್ಲಾ ಕಾರ್ಯಕ್ರಮಗಳು ಪ್ರಚಾರ ಸಮಿತಿಯ ಅಧ್ಯಕ್ಷರಾದ ಡಾ.ಎಂ. ಕೆ.ಅಶೋಕ ಅಧ್ಯಕ್ಷತೆಯಲ್ಲಿ ನಡೆಯಿತು. ಡಿಸಿಸಿ ಬ್ಲಾಕ್ ಅಧ್ಯಕರುಗಳಾದ ಸೋಮಶೇಖರ್, ಸುಂದರ್ ಕುಮಾರ್, ಡಿಸಿಸಿ ಉಪಾಧ್ಯಕ್ಷರಾದ ಪೈ .ಚಿಕ್ಕ ಪುಟ್ಟಿ, ಕುಮಾರ್ ಗೌಡ, ಲೋಕನಾಥ ಗೌಡ, ಕೆಪಿಸಿಸಿ ಸದ್ಯಸರುಗಳಾದ ಟಿ.ಎಸ್. ರವಿಶಂಕರ್, ವೀಣಾ, ಡಾ. ಸುಜಾತ ಎಸ್ ರಾವ್, ಸಮಿತಿಯ ಉಪಾಧ್ಯಕ್ಷರಾದ ಚೌವಳ್ಳಿ ಪುಟ್ಟಸ್ವಾಮಿ, ಸಂಘಟನಾ ಕಾಯ೯ದರ್ಶಿಗಳಾದ ಜಗದೀಶ, ಚಿದಾನಂದ ಸ್ವಾಮಿ,ಚಾಮರಾಜ ಕೇತ್ರದ ಅಧ್ಯಕ್ಷರಾದ ಚೇತನ್ ಗೌಡ, ಎನ್.ಆರ್. ಕೇತ್ರದ ಅಧ್ಯಕ್ಷರಾದ ಪ್ರಶಾಂತ್, ಇಂದಿರಾಗಾ೦ಧಿ ಬ್ಲಾಕ್ ಅಧ್ಯಕ್ಷರಾದ ಮಹದೇಶ, ದೇವರಾಜ ಬ್ಲಾಕ್ ಅಧ್ಯಕ್ಷರಾದ ದೀಪಕ್ ಪುಟ್ಟಸ್ವಾಮಿ, ಸಾಹುಕಾರ್ ಚೆನ್ನಯ್ಯ ಬ್ಲಾಕ್ ಅಧ್ಯಕ್ಷರಾದ ತರುಣ್ ಗೌಡ, ಸಮಿತಿಯ ತಿಲಕ್ ನಗರದ ನಾಗರಾಜು, ಎ.ನೇವಲ್ ಮುಂತಾದವರು ಭಾಗವಹಿಸಿದ್ದರು. (ಕೆ.ಎಸ್,ಎಸ್.ಎಚ್)