ಮೈಸೂರು

ಸ್ನೇಹಬಳಗ ವತಿಯಿಂದ 147ನೇ ಸ್ವಚ್ಛ ಮೈಸೂರು ಅಭಿಯಾನ

ಹೆಚ್ ವಿ ರಾಜೀವ್  ಸ್ನೇಹ  ಬಳಗ ಹಾಗೂ ಮೈಸೂರು ಮಹಾನಗರ ಪಾಲಿಕೆ ಸಹಕಾರದೊಂದಿಗೆ 147 ನೇ ಸ್ವಚ್ಛ ಮೈಸೂರು ಅಭಿಯಾನವನ್ನು ಭಾನುವಾರ ಬೆಳಿಗ್ಗೆ ವಿದ್ಯಾರಣ್ಯಪುರಂ ನಲ್ಲಿರುವ ಸೇಂಟ್ ಥಾಮಸ್ ಶಾಲೆಯ ಎದುರಲ್ಲಿರುವ ಗೌತಮ ಬುದ್ಧ ಉದ್ಯಾನವನದಲ್ಲಿ ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮದಲ್ಲಿ ಲಂಡನ್ನಿನಲ್ಲಿ ಬಸವೇಶ್ವರರ ಪುತ್ಥಳಿ ಸ್ಥಾಪಿಸಲು ಕಾರಣರಾದ ಅಲ್ಲಿನ ಮಹಾನಗರ ಪಾಲಿಕೆಯ  ಮಹಾಪೌರ ನೀರಜ್ ಪಾಟೀಲ್ ,ರಾಜ್ಯ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ಭಾರತಿ ಶೆಟ್ಟಿ , ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ  ಸದಸ್ಯರು ಹಾಗೂ ಶ್ರೀ ಕಲ್ಕಿ  ಭಗವಾನ್ ಮಾನವ ಸೇವಾಲಯ ಸದಸ್ಯರು, ಶ್ರೀ ಗುರು ರಾಘವೇಂದ್ರ ಸ್ನೇಹ ಬಳಗದ ಸದಸ್ಯರು, ಆದಿ ಕರ್ನಾಟಕ ಹಿತರಕ್ಷಣಾ ಹೋರಾಟ ಸಮತಿ ಸದಸ್ಯರು,ನವೋದಯ ಫೌಂಡೇಷನ್ ಸದಸ್ಯರು,  ಸ್ಪಂದನ ಟ್ರಸ್ಟ್ ಸದಸ್ಯರು, ನಮ್ಮ ಖುಷಿ ಟ್ರಸ್ಟ್ ಸದಸ್ಯರು , ಸಮರ್ಪಣ ತಂಡದ ಸದಸ್ಯರು, ಲಯನ್ ನಿಸರ್ಗ ಅಸೋಸಿಯೇಶನ್ ಸದಸ್ಯರು, ವಿದ್ಯಾವರ್ಧಕ ಶಿಕ್ಷಣ ಸಂಸ್ಥೆ ವಿದ್ಯಾರ್ಥಿಗಳು, ಎಸ್.ಬಿ.ಎಂ ಕಾಲೋನಿಯ ನಿವಾಸಿಗಳು,  ಎಲ್ಲಾ  ಪೌರ ಕಾಮಿ೯ಕ  ಮುಖ೦ಡರು ಮತ್ತು ಸಾರ್ವಜನಿಕರು, ಹಲವು ಸ೦ಘ ಸ೦ಸ್ಥೆಗಳು ಭಾಗವಹಿಸಿದ್ದವು.   (ಕೆ.ಎಸ್-ಎಸ್.ಎಚ್)

Leave a Reply

comments

Related Articles

error: