ಕರ್ನಾಟಕಪ್ರಮುಖ ಸುದ್ದಿ

ಯುದ್ಧ ವಿಮಾನದ ಪೈಲಟ್ ಆದ ಕೊಡಗಿನ ಪುಣ್ಯ ನಂಜಪ್ಪ

ಮಡಿಕೇರಿ,ಜೂ.30- ಭಾರತೀಯ ವಾಯುಸೇನೆಯ ಯುದ್ಧ ವಿಮಾನದ ಪೈಲಟ್ ಆಗಿ ಮಡಿಕೇರಿಯ ಪುಣ್ಯ ನಂಜಪ್ಪ ಆಯ್ಕೆಯಾಗಿದ್ದಾರೆ.

2019 ರಲ್ಲಿ ಟ್ರೈನಿ ಪೈಲಟ್ ಆಗಿ ಭಾರತೀಯ ವಾಯುಪಡೆಗೆ ಆಯ್ಕೆಯಾಗಿದ್ದ ಪುಣ್ಯ ಭಾರತೀಯ ವಾಯುಸೇನೆಯ  ಯುದ್ಧ ವಿಮಾನದ ಪೈಲಟ್ ಆಗಿ ಆಯ್ಕೆಯಾಗಿದ್ದಾರೆ.

ಮಡಿಕೇರಿಯ ನಂಜಪ್ಪ ಹಾಗೂ ಅನು ದಂಪತಿಯ ಒಬ್ಬರೆ ಮಗಳಾದ ಪುಣ್ಯ ತಾವು ಪೈಲಟ್ ಆಗುವ ಕನಸನ್ನು ನನಸು ಮಾಡಿಕೊಂಡಿದ್ದಾರೆ.

ಮೈಸೂರು ದಸರಾ ಏರ್ ಶೋ ನಲ್ಲಿ ಹೆಲಿಕಾಪ್ಟರ್ ಗಳನ್ನು ನೋಡಿದ ಪುಣ್ಯ ಪೈಲಸ್ ಆಗಬೇಕೆಂದು ಕೊಂಡರು. 9ನೇ ತರಗತಿಯಲ್ಲಿ ತಾನು ಪೈಲಟ್ ಆಗಬೇಕು ಎಂದು ಕನಸು ಕಂಡಿದ್ದ ಹುಡುಗಿ, ಈಗ ಅದನ್ನು ಸಾಧಿಸಿದ್ದಾರೆ. ಇಂಜಿನಿಯರ್ ಓದಿದ ಪುಣ್ಯ ಕನಸನ್ನು ನನಸು ಮಾಡಿಕೊಳ್ಳುವ ನಿಟ್ಟಿನಲ್ಲಿ ಹೈದರಾಬಾದ್ ನಲ್ಲಿ ಒಂದ ವರ್ಷದ ಸೇನಾ ತರಬೇತಿಯನ್ನು ಮುಗಿಸಿದ್ದಾರೆ. ಇದೀಗ ಪೈಲಟ್ ಆಗಿ ಎಲ್ಲರ ಗಮನ ಸೆಳೆದಿದ್ದಾರೆ. (ಎಂ.ಎನ್)

Leave a Reply

comments

Related Articles

error: