ಮೈಸೂರು

ಶ್ರೀರಾಂಪುರ 2ನೇ ಹಂತದ ಕ್ರೀಡಾ ಮೈದಾನದಲ್ಲಿ ನಡೆಯುತ್ತಿರುವ ತರಕಾರಿ ಮಾರ್ಕೆಟ್ ನಲ್ಲಿ ಥರ್ಮಲ್ ಸ್ಕ್ರೀನಿಂಗ್

ಮೈಸೂರು,ಜೂ.30:- ಬೆಮೆಲ್ ಬಡಾವಣೆಯ ಶ್ರೀರಾಂಪುರ 2ನೇ ಹಂತದ ಗಣೇಶ ದೇವಸ್ಥಾನದ ಎದುರಿನ ಕ್ರೀಡಾ ಮೈದಾನದಲ್ಲಿ ಲಾಕ್ ಡೌನ್ ಸಮಯದ ಆರಂಭದಿಂದ  ನಡೆಯುತ್ತಿರುವ ತರಕಾರಿ ಮಾರ್ಕೆಟ್ ನಲ್ಲಿ ಹೆಲ್ತ್ ಡಿಪಾರ್ಟ್ ಮೆಂಟ್ ಸಿಬ್ಬಂದಿಯವರಿಂದ ಥರ್ಮಲ್ ಸ್ಕ್ರೀನಿಂಗ್ ಕಾರ್ಯಕ್ರಮವನ್ನು ಲೀಸಾ’ಸ್ ಫಸ್ಟ್ ಸ್ಟೆಪ್ ಮಾಂಟೆಸರಿ ಶಾಲೆ ಹಾಗೂ ಬೆಮೆಲ್ ಬಡಾವಣೆಯ ಕ್ಷೇಮಾಭಿವೃದ್ಧಿ ಸಂಘದ ಸಹಯೋಗದೊಂದಿಗೆ 65ನೇ ವಾರ್ಡ್ ನ ಕಾರ್ಪೋರೇಟರ್ ಗೀತಶ್ರೀ ಯೋಗಾನಂದ ಅವರ ಮಾರ್ಗದರ್ಶನದಲ್ಲಿ ಹಮ್ಮಿಕೊಳ್ಳಲಾಗಿತ್ತು.

ಮಾರ್ಕೆಟ್ ನಲ್ಲಿ ತರಕಾರಿ ವ್ಯಾಪಾರ ಮಾಡುತ್ತಿರುವ ಮಾರಾಟಗಾರರಿಗೆ ಹಾಗೂ ಕೊಂಡುಕೊಳ್ಳಲು ಬರುವ ಗ್ರಾಹಕರಿಗೆ ಥರ್ಮಲ್ ಸ್ಕ್ರೀನಿಂಗ್ ಮಾಡಲಾಯಿತು. ಈ ದಿನ ಸುಮಾರು 150ಜನಕ್ಕೆ ಆರೋಗ್ಯ ತಪಾಸಣೆ ಮಾಡಲಾಯಿತು.

ಇದೇ ಸಂದರ್ಭದಲ್ಲಿ ಕೋವಿಡ್-19 ತಡೆಯಲು ಅನುಸರಿಸಬೇಕಾದ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ತಿಳಿಸಿ ಅವುಗಳನ್ನು ಅಳವಡಿಸಿಕೊಳ್ಳಲು ತಿಳಿಸಲಾಯಿತು.

ಈ ಸಂದರ್ಭದಲ್ಲಿ ಹೆಲ್ತ್ ಡಿಪಾರ್ಟ್ ಮೆಂಟ್ ನ ಸಿಬ್ಬಂದಿ ಪ್ರದೀಪ್ ಲೀಸಾ’ಸ್ ಫಸ್ಟ್ ಸ್ಟೆಪ್ ಶಾಲೆಯ ಸಿಇಒ ಶ್ರೀನಿವಾಸ ಎ.ಜೆ. ಮತ್ತು ಬೆಮೆಲ್ ಬಡಾವಣೆಯ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷರಾದ ಬಸವರಾಜು, ಸದಸ್ಯರುಗಳಾದ ಜಯಪ್ರಕಾಶ್, ಮುರಳಿ ಉಪಸ್ಥಿತರಿದ್ದರು. (ಜಿ.ಕೆ,ಎಸ್,ಎಸ್.ಎಚ್)

Leave a Reply

comments

Related Articles

error: