ಪ್ರಮುಖ ಸುದ್ದಿ

ಕೊರೋನಾ ಸೋಂಕಿನಿಂದ ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 507 ಜನರ ಸಾವು : 18 ಸಾವಿರಕ್ಕೂ ಹೆಚ್ಚು ಹೊಸ ಪ್ರಕರಣ  

ದೇಶ(ನವದೆಹಲಿ)ಜು.1:-   ಭಾರತದಲ್ಲಿ ಒಟ್ಟು ಸೋಂಕಿತರ ಸಂಖ್ಯೆ ಆರು ಲಕ್ಷಕ್ಕೆ ತಲುಪಿದೆ. ಆರೋಗ್ಯ ಸಚಿವಾಲಯದ ಇತ್ತೀಚಿನ ಮಾಹಿತಿಯ ಪ್ರಕಾರ, ಇದುವರೆಗೆ 5 ಲಕ್ಷ 85 ಸಾವಿರ 493 ಜನರಿಗೆ ಕೊರೋನಾ ಸೋಂಕು ತಗುಲಿದೆ. ಈ ಪೈಕಿ 17,400 ಮಂದಿ ಸಾವನ್ನಪ್ಪಿದ್ದರೆ, ಮೂರು ಲಕ್ಷ 47 ಸಾವಿರ ಜನರು  ಚೇತರಿಸಿಕೊಂಡಿದ್ದಾರೆ. ಕಳೆದ 24 ಗಂಟೆಗಳಲ್ಲಿ, 18 ಸಾವಿರ 653 ಹೊಸ ಕೊರೋನಾ ವೈರಸ್ ಪ್ರಕರಣಗಳು ವರದಿಯಾಗಿವೆ. 507 ಸಾವು  ಸಂಭವಿಸಿವೆ.

ದೇಶದಲ್ಲಿ ಸತತ 8 ನೇ ದಿನ 15 ಸಾವಿರಕ್ಕೂ ಹೆಚ್ಚು ಹೊಸ ಪ್ರಕರಣಗಳು ವರದಿಯಾಗಿವೆ. ರೋಗಿಗಳ ಚೇತರಿಕೆ ಪ್ರಮಾಣ 59.07 %ರಷ್ಟು. ಒಟ್ಟು ಪ್ರಕರಣಗಳಲ್ಲಿ ವಿದೇಶಿ ನಾಗರಿಕರು ಕೂಡ ಇದ್ದಾರೆ. ಜೂನ್ 1 ರಿಂದ ದೇಶದಲ್ಲಿ 3 ಲಕ್ಷ 76 ಸಾವಿರ 305 ಪ್ರಕರಣಗಳು ವರದಿಯಾಗಿವೆ. ಐಸಿಎಂಆರ್ ಪ್ರಕಾರ, ಜೂನ್ 29 ರವರೆಗೆ ದೇಶದಲ್ಲಿ ಒಟ್ಟು 86,08,654 ಜನರಿಗೆ ಕೊರೋನಾ ಪರೀಕ್ಷೆ  ನಡೆದಿದೆ. ಅದರಲ್ಲಿ 2,10,292 ಜನರನ್ನು ಸೋಮವಾರ ತಪಾಸಣೆ ಮಾಡಲಾಗಿದೆ.

ಕೊರೋನಾ ಸೋಂಕಿನ ಸಂಖ್ಯೆಯಲ್ಲಿ ಭಾರತವು ವಿಶ್ವದ ನಾಲ್ಕನೇ ಹೆಚ್ಚು ಪೀಡಿತ ದೇಶವಾಗಿದೆ. ಅಮೆರಿಕ, ಬ್ರೆಜಿಲ್, ರಷ್ಯಾ ನಂತರ, ಕೊರೋನಾ ಸಾಂಕ್ರಾಮಿಕ ರೋಗದಿಂದ ಹೆಚ್ಚು ಪೀಡಿತ ರಾಷ್ಟ್ರಗಳಲ್ಲಿ ಭಾರತ ನಾಲ್ಕನೇ ಸ್ಥಾನದಲ್ಲಿದೆ. ಭಾರತಕ್ಕಿಂತ ಹೆಚ್ಚಿನ ಪ್ರಕರಣಗಳು ಅಮೆರಿಕ (2,727,398), ಬ್ರೆಜಿಲ್ (1,408,485), ರಷ್ಯಾ (647,849) ನಲ್ಲಿವೆ. ಆದರೆ ಭಾರತದಲ್ಲಿ ಪ್ರಕರಣಗಳು ಹೆಚ್ಚಾಗುವ ವೇಗ ವಿಶ್ವದ ಮೂರನೇ ಸ್ಥಾನದಲ್ಲಿದೆ. ಅಮೆರಿಕ ಮತ್ತು ಬ್ರೆಜಿಲ್ ನಂತರ, ಒಂದೇ ದಿನದಲ್ಲಿ ಭಾರತದಲ್ಲಿ ಅತಿ ಹೆಚ್ಚು ಪ್ರಕರಣಗಳು ದಾಖಲಾಗುತ್ತಿವೆ. (ಏಜೆನ್ಸೀಸ್,ಎಸ್.ಎಚ್)

Leave a Reply

comments

Related Articles

error: