ಮೈಸೂರು

ದಾಖಲೆ ಇಲ್ಲದೇ ವಾಹನದಲ್ಲಿ ಸಾಗಿಸುತ್ತಿದ್ದ 23 ಲಕ್ಷರೂ. ವಶ

ಖಾಸಗಿ ವಾಹನವೊಂದರಲ್ಲಿ ಯಾವುದೇ ದಾಖಲೆ ಇಲ್ಲದೆ ಸಾಗಿಸುತ್ತಿದ್ದ  ಹಣವನ್ನು ಪತ್ತೆ ಹಚ್ಚಿರುವ ಅಧಿಕಾರಿಗಳು 23,47,970 ರೂ.ಗಳನ್ನು ವಶಪಡಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ನಂಜನಗೂಡು ಉಪ ಚುನಾವಣೆ ಹಿನ್ನೆಲೆಯಲ್ಲಿ ಹುಲ್ಲಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಪಾರ್ವತಿಪುರದಲ್ಲಿ ಸ್ಥಾಪಿಸಿರುವ ಚೆಕ್ ಪೋಸ್ಟ್ ಬಳಿ  ಕರ್ತವ್ಯ ನಿರತ ಅಧಿಕಾರಿಗಳು ಗುಂಡ್ಲು ಪೇಟೆ ಕಡೆಯಿಂದ ಬರುತ್ತಿದ್ದ ಮಹಿಂದ್ರಾ ಕಾರನ್ನು ಪರಿಶೀಲಿಸಿದಾಗ  ಹಣ ಪತ್ತೆಯಾಗಿದೆ ಎಂದು ಸಹಾಯಕ ಪೊಲೀಸ್ ಅಧೀಕ್ಷಕರು  ತಿಳಿಸಿದ್ದಾರೆ.

ಕಾರಿನ ಚಾಲಕ ಕಾರ್ತಿಕ್ ಹಾಗೂ ಕಾರಿನಲ್ಲಿದ್ದ ಇನ್ನೋರ್ವ  ಮಣಿಕಂಠ ಅವರನ್ನು  ವಿಚಾರಣೆಗೆ ಒಳಪಡಿಸಿದಾಗ, ತಾವು ಫೈನಾನ್ಸ್ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದು ಹೆಚ್.ಡಿ. ಕೋಟೆ ಕಡೆಗೆ ಹೋಗುತ್ತಿರುವುದಾಗಿ ತಿಳಿಸಿದ್ದಾರೆ. ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಎ.ಎಸ್.ಐ. ಪಾರ್ಥ, ಮುಖ್ಯಪೇದೆ ಜಯಣ್ಣ, ಹೋಮ್ ಗಾರ್ಡ್ ಸಂತೋಷ್ ಕುಮಾರ್, ಸ್ಥಳೀಯ ಗ್ರಾಮ ಪಂಚಾಯಿತಿ ನೌಕರ ಪುಟ್ಟ ಅಂಕಶೆಟ್ಟಿ ಅವರು ಹಣ ಪತ್ತೆ ಹಚ್ಚಿದ್ದಾರೆ. ಸೆಕ್ಟರ್ ಅಧಿಕಾರಿಗಳಾದ ಚಂದ್ರಮೋಹನ್ ಹಾಗೂ ತಂಡದವರು ಹಣ ವಶಕ್ಕೆ ಪಡೆದಿದ್ದಾರೆ. (ಕೆ.ಎಸ್-ಎಸ್.ಎಚ್)

Leave a Reply

comments

Related Articles

error: