ಮೈಸೂರು

ಮೈಸೂರಿನಲ್ಲಿಂದು ಕೊರೋನಾ ಅತಿ ಹೆಚ್ಚು ಪಾಸಿಟಿವ್ ಪ್ರಕರಣ ಬರಲಿದೆ : ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಮಾಹಿತಿ

ಮೈಸೂರು,ಜು.1:- ಮೈಸೂರಿನಲ್ಲಿಂದು ಕೊರೋನಾ ಅತಿ ಹೆಚ್ಚು ಪಾಸಿಟಿವ್ ಪ್ರಕರಣ ಬರಲಿದೆ. ಇದು ಈವರೆಗೆ ಬಂದ ನಂಬರ್‌ಗಳಲ್ಲೇ ಅತಿ ಹೆಚ್ಚು ಇರಲಿದೆ ಎಂದು ಮೈಸೂರು ಜಿಲ್ಲಾಧಿಕಾರಿ ಅಭಿರಾಂ ಜಿ ಶಂಕರ್ ತಿಳಿಸಿದರು.

ಮೈಸೂರಿನಲ್ಲಿ ಇಂದು ಮಾತನಾಡಿದ ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್, ದಿನೇ ದಿನೇ  ಪಾಸಿಟಿವ್ ಪ್ರಕರಣ ಹೆಚ್ಚಾಗುತ್ತಿದೆ. ಇದಕ್ಕೆ ನಾವು ಸಕಲ ರೀತಿಯಲ್ಲೂ  ಸಜ್ಜಾಗಿದ್ದೇವೆ. ನರ್ಸ್ ಹಾಗೂ ಡಿ.ಗ್ರೂಪ್ ನೌಕರರ ಕೊರತೆ ಇದೆ. ಕೋವಿಡ್ ಆಸ್ಪತ್ರೆಯಲ್ಲಿ ಡಾಕ್ಟರ್‌ಗಳೇ ಬೇರೆ ಬೇರೆ ಕೆಲಸ ಮಾಡುವ ಸ್ಥಿತಿ ಬಂದಿದೆ. ನಾವು ಹೆಚ್ಚು ಹೆಚ್ಚು ಸ್ಯಾಂಪಲ್ ಸಂಗ್ರಹ ಮಾಡ್ತಿದ್ದೀವಿ. ಟ್ರಾವೆಲ್ ಹಿಸ್ಟರಿ ಇಲ್ಲದ ಪ್ರಕರಣ ಹೆಚ್ಚಾಗಿದೆ. ILI ಹಾಗೂ SARI ಪ್ರಕರಣ ಹೆಚ್ಚಾಗಿವೆ. ಈ ಬಗ್ಗೆ ಟ್ರಾವೆಲ್ ಹಿಸ್ಟರಿ ಕಂಡುಹಿಡಿಯುವ ಕೆಲಸ ಆಗುತ್ತಿದೆ ಎಂದು ಮಾಹಿತಿ ನೀಡಿದರು.

ಮೈಸೂರಿನ ಕೆ.ಆರ್.ಆಸ್ಪತ್ರೆಯಲ್ಲಿ ಸೋಂಕಿತರ ಪಕ್ಕದಲ್ಲೇ ಸಾಮಾನ್ಯ ರೋಗಿ ಇದ್ದ ಪ್ರಕರಣ ಕುರಿತು ಪ್ರತಿಕ್ರಿಯಿಸಿದ  ಅಭಿರಾಂ ಜಿ ಶಂಕರ್, ಇದು ನನ್ನ ಗಮನಕ್ಕೆ ಬಂದಿದೆ. ಇದು ಕೇವಲ ಕೆ.ಆರ್.ಆಸ್ಪತ್ರೆ ಅಲ್ಲ ಎಲ್ಲ ಕಡೆ ಇದೆ. ಈ ಸಮಸ್ಯೆ ಗಂಭೀರ ಸಮಸ್ಯೆ ಅಲ್ಲ. ಆಸ್ಪತ್ರೆಗೆ ದಾಖಲಾಗುವ ಎಲ್ಲರನ್ನು ಟೆಸ್ಟ್ ಮಾಡ್ತೀವಿ. ಅದರಲ್ಲಿ ಸೋಂಕಿತರು ಅಂತ ಗೊತ್ತಾದ ತಕ್ಷಣ ಅವರನ್ನು ಶಿಫ್ಟ್ ಮಾಡ್ತೀವಿ. ಆ ಸೋಂಕಿತರನ್ನು ಶಿಫ್ಟ್ ಮಾಡುವ ಸಂದರ್ಭದಲ್ಲಿ ಸಾಮಾನ್ಯ ರೋಗಿಗಳು ಇದ್ದಿರಬಹುದು. ಇದನ್ನು ತಾಂತ್ರಿಕವಾಗಿ ನಿಯಂತ್ರಣ ಮಾಡೋದು ಕಷ್ಟ ಎಂದು ಸ್ಪಷ್ಟನೆ ನೀಡಿದರು.

ILI ಹಾಗೂ  SARI ಕೇಸ್ ಗೊತ್ತಾಗೋದೆ ಕೆ.ಆರ್.ಆಸ್ಪತ್ರೆ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ. ಬಂದ ಪೇಷಂಟ್‌ಗಳನ್ನು ತಕ್ಷಣ ಸೋಂಕಿತರು ಎಂದು ಗುರುತಿಸೋಕೆ ಆಗಲ್ಲ. ಟೆಸ್ಟ್ ಮಾಡಿ ರಿಸಲ್ಟ್ ಬಂದ ಮೇಲೆ ಅವರನ್ನು ಶಿಫ್ಟ್ ಮಾಡುತ್ತೇವೆ.  ಹಾಗಂತ ಸಾಮಾನ್ಯ ರೋಗಿನ ಅವರಿಂದ  ತಕ್ಷಣ ಬೇರೆ ಮಾಡೋಕೆ ಆಗಲ್ಲ. ಕೋವಿಡ್ ಆಸ್ಪತ್ರೆಗೆ ಶಿಫ್ಟ್ ಆಗೋವರೆಗೂ ಕಾಯಬೇಕಾಗುತ್ತದೆ. ಇನ್ಮುಂದೆ ಆ ಕೆಲಸ ಬೇಗ ಮಾಡುವಂತೆ ಸಿಬ್ಬಂದಿಗೆ ಸೂಚನೆ ನೀಡುತ್ತೇನೆ ಎಂದು   ತಿಳಿಸಿದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: