ಮೈಸೂರು

ಸಾಲಿಗ್ರಾಮದಲ್ಲಿ ವ್ಯಕ್ತಿಯೊಬ್ಬನಿಗೆ ಕೊರೋನಾ ಸೋಂಕು : ಗ್ರಾಮದ ಕೋಟೆ ಬೀದಿ ಸೀಲ್ ಡೌನ್

ಮೈಸೂರು,ಜು.1:- ಜಿಲ್ಲೆಯ ಕೆ.ಆರ್ ನಗರ ತಾಲೂಕಿನ ಸಾಲಿಗ್ರಾಮದಲ್ಲಿ ವ್ಯಕ್ತಿಯೊಬ್ಬನಿಗೆ ಕೊರೋನಾ ಸೋಂಕು ಕಾಣಿಸಿಕೊಂಡಿದ್ದು, ಈ ಹಿನ್ನಲೆಯಲ್ಲಿ ಗ್ರಾಮದ ಕೋಟೆ ಬೀದಿಯನ್ನು ಸೀಲ್ ಡೌನ್ ಮಾಡಲಾಗಿದೆ.

ಸುಮಾರು 39 ವರ್ಷದ ವ್ಯಕ್ತಿಗೆ ಕೊರೋನಾ ಪಾಸಿಟಿವ್ ಪತ್ತೆಯಾಗಿದೆ. ಕೆಲ ದಿನಗಳ ಹಿಂದಷ್ಟೇ ಈ ವ್ಯಕ್ತಿಗೆ ಜ್ವರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಸಾಲಿಗ್ರಾಮದ ಆಸ್ಪತ್ರೆಯಲ್ಲಿ ಈ ಸಂಬಂಧ ಪರೀಕ್ಷೆ ನಡೆಸಲಾಗಿತ್ತು. ಇಂದು ಇದರ ವರದಿ ಬಂದಿದ್ದು, ವ್ಯಕ್ತಿಗೆ ಕೊರೋನಾ ಸೋಂಕು ದೃಢವಾಗಿದೆ. ಸೋಂಕಿತ ವ್ಯಕ್ತಿಯನ್ನು ಮೈಸೂರಿನ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಮುನ್ನೆಚ್ಚರಿಕೆಯ ಕ್ರಮವಾಗಿ ಕೆ.ಆರ್‌.ನಗರ ವೃತ್ತ ನಿರೀಕ್ಷಕ ರಾಜು. ಆರೋಗ್ಯಾಧಿಕಾರಿ ಮಹೇಂದ್ರಪ್ಪ. ಆರೋಗ್ಯ ನಿರೀಕ್ಷಕ ರಮೇಶ್. ವೈದ್ಯಾಧಿಕಾರಿ ಮಂಜುನಾಥ್, ಸಾಲಿಗ್ರಾಮ ಪಿಎಸ್ ಐ ಆರತಿ ಮತ್ತಿತರು ಸೋಂಕಿತ ವ್ಯಕ್ತಿ ವಾಸವಿದ್ದ ಕೋಟೆ ಬೀದಿಯನ್ನು ಸೀಲ್ಡ್ ಡೌನ್ ಮಾಡಿದ್ದಾರೆ.

ಕೊರೋನಾ ಪಾಸಿಟಿವ್ ಬಂದ ವ್ಯಕ್ತಿ ಸಾಲಿಗ್ರಾಮದಲ್ಲಿ ಪ್ರಕಾಶ್ ಸ್ಟೋರ್ ಚಿಲ್ಲರೆ ಅಂಗಡಿ ವ್ಯಾಪಾರ ನಡೆಸುತ್ತಿದ್ದು ಈತನ ಸಂಪರ್ಕದಲ್ಲಿ ಇದ್ದವರ ಮಾಹಿತಿಯನ್ನು ಪಡೆಯಲಾಗುತ್ತಿದೆ. ನಗರ ತಾಲೂಕಿನಲ್ಲಿ ಇದುವರೆಗೂ 5 ಕೊರೋನಾ ಪ್ರಕರಣಗಳು ಕಂಡು ಬಂದಿದ್ದು ಒಂದು ಸಾವು ಸಂಭವಿಸಿದೆ. ಕೊರೋನಾ ಪ್ರಕರಣ  ಹೆಚ್ಚುತ್ತಿರುವ ಹಿನ್ನಲೆಯಲ್ಲಿ ತಾಲೂಕಿನಲ್ಲಿ ಬೆಳಿಗ್ಗೆ 7ರಿಂದ ಮಧ್ಯಾಹ್ನ 2ರವರೆಗೆ ವ್ಯಾಪಾರ ವಹಿವಾಟಿಗೆ ಅವಕಾಶ ನೀಡಲಾಗಿದೆ.  ಬೆಳಿಗ್ಗೆಯಿಂದ ಸಂಜೆ ತನಕ ಸರ್ಕಾರಿ ಕಚೇರಿ ಕೆಲಸ ನಿರ್ವಹಿಸಲಿವೆ.  ರಾತ್ರಿ  8 ಗಂಟೆಯ ನಂತರ ಬೆಳಿಗ್ಗೆ ತನಕ ಕರ್ಪೂ ಇರಲಿದ್ದು ಈ ಸಮಯದಲ್ಲಿ ಅನಗತ್ಯ ಸಂಚಾರ ನಡೆಸಿದರೆ, ಮನೆಯಿಂದ ಹೊರ ಬಂದರೆ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಪೊಲೀಸರು ಎಚ್ಚರಿಕೆ ನಿಡೀದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: