ಪ್ರಮುಖ ಸುದ್ದಿ

ಬಂಗಲೆ ಖಾಲಿ ಮಾಡಲು ಪ್ರಿಯಾಂಕಾ ಗಾಂಧಿಗೆ ಆ.1ವರೆಗೆ ಗಡುವು

ದೇಶ(ನವದೆಹಲಿ)ಜು.2:- ಇಲ್ಲಿನ ಲುಟ್ಯೆನ್ಸ್ ಪ್ರದೇಶದಲ್ಲಿ ತಾನು ವಾಸವಿರುವ ಸರ್ಕಾರಿ ಬಂಗಲೆಯನ್ನು ತೊರೆಯಬೇಕೆಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಅವರಿಗೆ ಕೇಂದ್ರ ಸರ್ಕಾರ ಆದೇಶಿಸಿದೆ.
ಅತ್ಯುಚ್ಛ ವಿಶೇಷ ಭದ್ರತೆ ಸೌಲಭ್ಯ ವಾಪಸ್ ಪಡೆದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದ್ದು, ಬಂಗಲೆ ಖಾಲಿ ಮಾಡಿ ಹೋಗಲು ಪ್ರಿಯಾಂಕಾ ಗಾಂಧಿ ಅವರಿಗೆ ಆಗಸ್ಟ್ 1ರ ಗಡುವು ನೀಡಲಾಗಿದೆ.

ಪ್ರಿಯಾಂಕಾ ಗಾಂಧಿ ಅವರಿಗೆ ನೀಡಲಾಗಿದ್ದ ಎಸ್​ಪಿಜಿ ಹಂತದ ಭದ್ರತೆಯನ್ನು ಕಳೆದ ವರ್ಷ ಸರ್ಕಾರ ಹಿಂಪಡೆದುಕೊಂಡು ಝಡ್+ ಸೆಕ್ಯೂರಿಟಿ ನೀಡಿತ್ತು. ಎಸ್​ಪಿಜಿ ಭದ್ರತೆ ಹೊಂದಿದವರಿಗೆ ಮಾತ್ರ ಸರ್ಕಾರಿ ಬಂಗಲೆಯಲ್ಲಿ ವಾಸವಿರಲು ಅವಕಾಶ ಕೊಡಲಾಗುತ್ತದೆ. ಅಂದರಂತೆ 1997ರಲ್ಲಿ ಹೊಸ ದಿಲ್ಲಿಯ ಲುಟ್ಯೆನ್ಸ್ ಪ್ರದೇಶದಲ್ಲಿರುವ ಲೋಧಿ ಎಸ್ಟೇಟ್​ನ 35ನೇ ನಂಬರ್​ನ ಬಂಗಲೆಯನ್ನು ಪ್ರಿಯಾಂಕಾ ಗಾಂಧಿಗೆ ವಾಸಿಸಲು ನೀಡಲಾಗಿತ್ತು. ಆದರೆ ಎಸ್​ಪಿಜಿ ಭದ್ರತೆ ವಾಪಸ್ ಪಡೆದ ಹಿನ್ನೆಲೆಯಲ್ಲಿ ಸರ್ಕಾರಿ ಬಂಗಲೆ ಸೌಕರ್ಯವನ್ನೂ ಹಿಂಪಡೆದುಕೊಳ್ಳಲಾಗಿದೆ ಎಂದು ತಿಳಿದು ಬಂದಿದೆ. (ಏಜೆನ್ಸೀಸ್,ಎಸ್.ಎಚ್).

Leave a Reply

comments

Related Articles

error: